ಥೈರಾಯ್ಡೈಟಿಸ್
ಥೈರಾಯ್ಡೈಟಿಸ್ ಎಂದರೇನು?
ಥೈರಾಯ್ಡ್ ಗ್ರಂಥಿಯ ಉರಿಯೂತಕ್ಕೆ ಥೈರಾಯ್‍ಡೈಟಿಸ್ ಎಂದು ಕರೆಯುವರು. ಥೈರಾಯ್‍ಡೈಟಿಸ್‍ಗೆ ಕಾರಣಗಳು ಹಲವು. ಇದು ಅಟೋಇಮ್ಮ್ಯೂನ್ ಪ್ರಕ್ರಿಯೆ ಅಥವಾ ವೈರಸ್ ಸೋಂಕಿನಿಂದ ಉಂಟಾಗಬಹುದು. ಅಪರೂಪಕ್ಕೆ ವಿಕಿರಣ ಅಥವಾ ಮಾನಸಿಕ ರೋಗಕ್ಕೆ ಕೊಡುವ ಕೆಲವೊಂದು ಔಷಧಿಗಳಿಂದ (ಉದಾ :ಲಿತಥಿಯಮ್ ಕಾರ್ಬೋನೇಟ್) ಕೂಡಾ ಈ ತೊಂದರೆ ಬರಬಹುದು.
ನಾಮ ಒಂದು ರೂಪ ಹಲವು ...
ಈ ರೀತಿಯ ರೋಗವೈವಿಧ್ಯವುಳ್ಳ ಥೈರಾಯ್ಡೈಟಿಸ್ ರೋಗಿಗಳನ್ನೇನು ಕೆಲವೊಮ್ಮೆ ವೈದರನ್ನೂ ಬೇಸ್ತು ಬೀಳುವಂತೆ ಮಾಡಬಹುದು. ಉದಾಹರಣೆಗೆ ಹಾಶಿಮೋಟೋ ಥೈರಾಯ್ಡೈಟಿಸ್ ಇರುವ ರೋಗಿಯು ಬಹುಕಾಲದವರೆಗೆ ಸರಿಯಾದ ಹಾರ್ಮೋನ್ ಮಟ್ಟ ಕಾಯ್ದುಕೊಳ್ಳಬಹುದು, ಅದರೆ ಕೊನೆಗೊಮ್ಮೆ ಹೈಪೋಥೈರಾಯ್ದಿಸಮ್‍ಗೆ ತುತ್ತಾಗಬಹುದು. ಕೆಲವೊಮ್ಮೆ, ವಿಶೇಷವಾಗಿ ಬಾಣಂತಿಯರಲ್ಲಿ ಥೈರಾಯ್ಡ್ ಹಾರ್ಮೋನ್ ಅತಿರೇಕವೂ ಉಂಟಾಗಬಹುದು..
ಥೈರಾಯ್ಡೈಟಿಸ್ ಮತ್ತು ಕತ್ತು ನೋವು
ಥೈರಾಯ್ಡೈಟಿಸ್ ಕತ್ತು ನೋವನ್ನು ಊಂಟುಮಾಡಲೇಬೇಕೆಂದೇನೂ ಇಲ್ಲ. ಉದಾಹರಣೆಗೆ ಸಬ್-ಅಕ್ಯೂಟ್ ಅಥವಾ ನೊವಿಲ್ಲದ ಥೈರಾಯ್ಡೈಟಿಸ್‍ನಲ್ಲಿ ರೋಗಿಗೆ ಥೈರಾಯ್ಡ್ ಹಾರ್ಮೋನ್ ಸೋರಿಕೆಯ ಲಕ್ಷಣ ಮಾತ್ರ ಕಂಡುಬರುತ್ತದೆ. ಆದರೆ ಕೆಲವೊಮ್ಮೆ ( ಉದಾಹರಣೆಗೆ ಡಿ' ಕರ್ವೇನ್ಸ್ ಥೈರಾಯ್ಡೈಟಿಸ್ ) ಆತಿ ತೀವ್ರತರದವಾದ ನೋವು ಕಾಣಿಸಿಕೊಳಬಹುದು, ಇಂಥಹಾ ಸಂಧರ್ಭಗಳಲ್ಲಿ ಇದು ಬ್ಯಾಕ್ಟೀರಿಯಾ ಸೋಂಕು ಇಲ್ಲವೆಂದು ವೈದ್ಯರು ಖಾತರಿಪಡಿಸಿಕೊಳ್ಳಬೇಕಾಗಬಹುದು. ಹೆಚ್ಚಿನ ಸಂಧರ್ಭಗಳಲ್ಲಿ ಥೈರಾಯ್ಡೈಟಿಸ್ ಯಾವುದೇ ಲವಲೇಶಗಳೀಲ್ಲದೇ ಮಾಯವಾಗಬಹುದಾದರೂ ಅಟೋ-ಇಮ್ಮ್ಯೂನ್ ಥೈರಾಯ್ಡೈಟಿಸ್ ಥೈರಾಯ್ಡ್ ವೈಫಲ್ಯ ಉಂಟುಮಾಡಿ ಹೈಪೋಥೈರಾಯ್ಡಿಸಮ್ ಉಂಟುಮಾಡುವ ಪ್ರಮುಖ ಕಾರಣ ಎಂಬುದನ್ನು ನಾವು ಮರೆಯಲಾಗದು!
ಥೈರಾಯ್ಡೈಟಿಸ್‍ಗೆ ಕಾರಣಗಳೇನು?
ಅಟೋ-ಇಮ್ಮ್ಯೂನ್ ಕಾಯಿಲೆ ಥೈರಾಯ್ಡೈಟಿಸ್‍ಗೆ ಅತಿ ಸಾಮಾನ್ಯವಾದ ಕಾರಣ. ಕೆಲವೊಮ್ಮೆ ಬ್ಯಾಕ್ಟೀರಿಯಾ ಅಥವಾ ವೈರಸ್ ಕೂಡಾ ಥೈರಾಯ್ಡೈಟಿಸ್ ಉಂಟುಮಾಡಬಹುದು.
ಅಟೋ-ಇಮ್ಮ್ಯೂನ್ ಕಾಯಿಲೆ ಥೈರಾಯ್ಡೈಟಿಸ್ ಹೇಗೆ ಉಂಟುಮಾಡುತ್ತದೆ?
ನಮ್ಮ ಇಮ್ಮ್ಯೂನ್ ವ್ಯವಸ್ಥೆ ಪೋಲೀಸ್ ಇದ್ದಂತೆ. ಈ ರಕ್ಷಣಾ ವವಸ್ಥೆ ಬ್ಯಾಕ್ಟೀರಿಯಾ ಮತ್ತು ವೈರಸ್‍ನಂಥಹಾ ಕಳ್ಳ ಕಾಕರು ನುಗ್ಗಿ ನಮ್ಮ ದೇಹದಲ್ಲಿ ತೊಂದರೆ ಉಂಟುಮಾಡದಂತೆ ನೋಡಿಕೊಳ್ಳುತ್ತದೆ.
ಹಾಶಿಮೋಟೋ ಥೈರಾಯ್ಡೈಟಿಸ್ ನಲ್ಲಿ ಈ ಇಮ್ಮ್ಯೂನ್ ವ್ಯವಸ್ಥೆ ನಮ್ಮ ಸ್ವಂತ ಥೈರಾಯ್ಡ್ ಮೇಲೆ ದಾಳಿಗೈಯುತ್ತವೆ. ಇದು ಬೇಲಿಯೇ ಹೊಲ ಮೇಯ್ದಂತೆ ಅಥವಾ ರಕ್ಷಕರೇ ಭಕ್ಷಕರಾದಂತೆ! ಈ ರೀತಿಯ ಇಮ್ಮ್ಯೂನ್ ವ್ಯವಸ್ಥೆಯ ಆತ್ಮಾಹುತಿ ದಾಳಿಗೆ ಪ್ರಚೋದನೆ ಹಲವು ಕಾರಣಗಳಿಂದ ಉಂಟಾಗಬಹುದು:
Timings: 8AM - 1PM & 3.30PM - 7.30PM.
2/4th Fridays and Sundays* Holiday
Consultations with prior Appointments
Appointments: +91-9481353667
Next Sunday SPECIAL OPD : To be Announced