ಥೈರಾಯ್ಡ್ ಬಗ್ಗೆ ಎಫ್.ಎ.ಕ್ಯೂ.
(FAQ)
ಥೈರಾಯ್ಡ್ ಕಾಯಿಲೆ ಇಂದಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಓರ್ವ ವ್ಯಕ್ತಿಯು ತನಗೆ ಥೈರಾಯ್ಡ್ ತೊಂದರೆ ಇದೆ ಎಂದು ತಿಳಿದ ಕೂಡಲೇ, ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಕಾಡುತ್ತವೆ, ಆದರೆ ಸೂಕ್ತ ಉತ್ತರಕ್ಕಾಗಿ ಎಲ್ಲಿ ಹುಡುಕಬೇಕಂಬ ಸಂದೇಹವೂ ಉಂಟಾಗುತ್ತದೆ. ನಿಮ್ಮ ಮನಸ್ಸಿನಲ್ಲಿರಬಹುದಾದ ಥೈರಾಯ್ಡ-ಗೆ ಸಂಭದಿಸಿದ ಸಾಮಾನ್ಯ ಸಂದೇಹ ನಿವಾರಣೆಗೆ ಇದು ಸೂಕ್ತವಾದ ಸ್ಥಳ.
ಹೌದು, ಎಲ್ಲರಲ್ಲೂ ಥೈರಾಯ್ಡ್ ಗ್ರಂಥಿ ಇರುತ್ತದೆ! ಆದರೆ ಇದು ದೊಡ್ಡದಾಗಿ ಬೆಳೆದಾಗ, ಇದು ನಿಮ್ಮ ಅಥವಾ ನಿಮ್ಮ ವೈದ್ಯರ ಗಮನಕ್ಕೆ ಬರಬಹುದು.
• ನನ್ನ ಕಣ್ಣಿನ ತೊಂದರೆ ಥೈರಾಯ್ಡ್ -ಗೆ ಸಂಭಂದಿಸಿದೆ ಎಂದು ನನ್ನ ವೈದ್ಯರು ಹೇಳುತ್ತಾರೆ. ಅದು ಹೇಗೆ?
ಥೈರಾಯ್ಡ್ ಕಾಯಿಲೆ ವಿಶೇಷವಾಗಿ ಗ್ರೇವ್’ಸ್ ಕಾಯಿಲೆಯಿಂದ ಉಂಟಾಗುವ ಹೈಪರ್‌ಥೈರಾಯ್ಡಿಸಮ್-ನಲ್ಲಿ ಕಣ್ಣಿನ ಅಥವಾ ಕಣ್ಣು ಗುಡ್ಡೆಗಳ ಉಬ್ಬುವಿಕೆ, ಹೊರಚಾಚುವಿಕೆ, ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು ಇತ್ಯಾದಿಗಳು ಕಂಡುಬರಬಹುದು. ಹೆಚ್ಚಿನ ಮಾಹಿತಿಗಾಗಿ ಥೈರಾಯ್ಡ್-ಕಣ್ಣಿನ-ಕಾಯಿಲೆ ವಿಭಾಗವನ್ನು ಸಂದರ್ಶಿಸಿ.
• ನನಗೆ ಕುತ್ತಿಗೆಯಲ್ಲಿ ಥೈರಾಯ್ಡ್ ಬಾವು [ಗಾಯ್ಟರ್] ಇದೆ... ಆದರೂ ನನ್ನ ಎಂಡೋಕ್ರೈನಾಲಜಿಸ್ಟ್ ನನಗೆ ಯಾವುದೇ ಚಿಕಿತ್ಸೆ ಬೇಡ ಎನ್ನುತ್ತಾರೆ?
ಹೌದು, ಥೈರಾಯ್ಡ್ ಗ್ರಂಥಿಯ ಗಾತ್ರದಲ್ಲಿ ಅಲ್ಪ ಪ್ರಮಾಣದ ಹೆಚ್ಚಳ ಅನೇಕ ಕಾರಣಗಳಿಂದಾಗಬಹುದು, ಉದಾ: ಪ್ರೌಢಾವಸ್ತೆ ಹೊಂದುವಾಗ ಮತ್ತು ಗರ್ಭಧಾರಣೆಯ ಸಮಯದಲ್ಲಿ. ಅದೇ ರೀತಿಯಾಗಿ ಥೈರಾಯ್ಡ್ ಹಾರ್ಮೋನ್ ಏರುಪೇರು ಉಂಟುಮಾಡುವ ಕಾಯಿಲೆಗಳು ಸೌಮ್ಯ ರೂಪದಲ್ಲಿ ಕಂಡುಬಂದಾಗ, ಕೇವಲ ಥೈರಾಯ್ಡ್ ಗ್ರಂಥಿಯ ಗಾತ್ರದಲ್ಲಿ ಅಲ್ಪ ಪ್ರಮಾಣದ ಹೆಚ್ಚಳ ಉಂಟಾಗಬಹುದು ಹಾಗೂ ಬೇರೆ ಯಾವುದೇ ತೊಂದರೆಗಳು ಇರದಿರಬಹುದು. ಇಂಥಹಾ ಸಂದರ್ಭದಲ್ಲಿ ಯಾವುದೇ ಚಿಕಿತ್ಸೆಯ ಅವಶ್ಯವಿಲ್ಲ ( ಅನ್ನನಾಳ ಅಥವಾ ಶ್ವಾಸನಾಳಗಳಿಗೆ ಒತ್ತಡ ಉಂಟಾಗಿ ತೊಂದರೆ ಆದ ಪಕ್ಷದಲ್ಲಿ, ಅಥವಾ ಅಸಹ್ಯವಾಗಿ ಕಾಣುವಲ್ಲಿ ಶಸ್ತ್ರಚಿಕಿತ್ಸೆ ಬೇಕಾಗಬಹುದು). ಯಾವುದೇ ಮಹತ್ವದ ವಿಷಯ ಕಡೆಗಣಿಸಲ್ಪಟ್ಟಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ನಿಮ್ಮ ವೈದ್ಯರನ್ನು ಸಂಪರ್ಕಿಸಲು ಕೇಳಿಕೊಳ್ಳುತ್ತೇವೆ.
• ನನಗೆ ಕುತ್ತಿಗೆಯಲ್ಲಿ ಥೈರಾಯ್ಡ್ ಬಾವು (ಗಾಯ್ಟರ್) ಇಲ್ಲ.. ಆದರೂ ನನ್ನ ಎಂಡೋಕ್ರೈನಾಲಜಿಸ್ಟ್ ನನಗೆ ಥೈರಾಯ್ಡ್ ತೊಂದರೆ ಇದೆ ಎನ್ನುತ್ತಾರೆ?
ಹೌದು, ಇದು ಸಾಧ್ಯ. ನಿಮ್ಮ ಥೈರಾಯ್ಡ್ ಗ್ರಂಥಿ ಸಾಮಾನ್ಯ ಗಾತ್ರ ಹೊಂದಿದ್ದರೂ, ಅದರ ಹಾರ್ಮೋನ್ ಉತ್ಪಾದನೆಯಲ್ಲಿ ವ್ಯತ್ಯಾಸ ಕಂಡುಬರಬಹುದು. ಅದು ಕಡಿಮೆ ಹಾರ್ಮೋನ್ ಉತ್ಪಾದಿಸಿದಲ್ಲಿ ಹೈಪೋಥೈರಾಯ್ಡಿಸಮ್ ಉಂಟಾಗುತ್ತದೆ, ಅದೇ ರೀತಿಯಾಗಿ ಹೆಚ್ಚು ಹಾರ್ಮೋನ್ ಉತ್ಪಾದಿಸಿದಲ್ಲಿ ಹೈಪರ್ರ್ಥೈರಾಯ್ಡಿಸಮ್ ತೊಂದರೆ ಕಂಡುಬರುವದು.
• ಥೈರಾಯ್ಡ್ ಗ್ರಂಥಿಯ ಜೀವನಾಶ್ಯಕವೇ?
ಹೌದು, ಖಂಡಿತವಾಗಿಯೂ. ಥೈರಾಯ್ಡ್ ಹಾರ್ಮೋನ್ ದೇಹದ ಪ್ರತಿಯೊಂದು ಜೀವಕೋಶದ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವವಾಗಿದೆ. ಹೀಗಾಗಿ ಥೈರಾಯ್ಡ್ ಗ್ರಂಥಿ ಜೀವಕ್ಕೆ ಅತ್ಯಗತ್ಯ. ಯಾವುದೇ ಕರಣಕ್ಕಾಗಿಯಾದರೂ ಥೈರಾಯ್ಡ್ ಗ್ರಂಥಿಯನ್ನು ಆಪರೇಷನ್ ಮೂಲಕ ತೆಗೆದುಹಾಕಿದಲ್ಲಿ , ಥೈರಾಯ್ಡ್ ಹಾರ್ಮೋನ್ ಗುಳಿಗೆಗಳನ್ನು ಜೀವನ ಪರ್ಯಂತ ತೆಗೆದುಕೊಳ್ಳುವದು ಅತ್ಯಗತ್ಯ. ದೇಹದಲ್ಲಿ ಥೈರಾಯ್ಡ್ ಹಾರ್ಮೋನುಗಳ ಮಟ್ಟ ತೀರಾ ಕಡಿಮೆ ಆದಲ್ಲಿ ಕೋಮ ಮತ್ತು ಇನ್ನೂ ನಿರ್ಲಕ್ಷ್ಯ ತೋರಿದಲ್ಲಿ ಮರಣಕ್ಕೆ ಕಾರಣವಾಗಬಹುದು.
• ನನ್ನ ತಾಯಿಗೂ ಥೈರಾಯ್ಡ್ ತೊಂದರೆ ಇದೆ.. ಥೈರಾಯ್ಡ್ ರೋಗ ಪರಂಪರಾಗತವಾದ್ದದ್ದೇ?
ಹೈಪೋಥೈರಾಯ್ಡಿಸಮ್ ಮತ್ತು ಹೈಪರ್‌ಥೈರಾಯ್ಡಿಸಮ್ ನಂತಹ ಕೆಲವು ಥೈರಾಯ್ಡ್ ಕಾಯಿಲೆಳು ಕುಟುಂಬಗಳಲ್ಲಿ (ಉದಾ: ತಾಯಿ ಮಗಳು, ಅಕ್ಕ ತಂಗಿ) ಕಂಡುಬರಬರುವನ್ನು ನಾವು ನೋಡುತ್ತೇವೆ. ಈ ವ್ಯಕ್ತಿಗಳು ಇಂಥಹಾ ಕಾಯಿಲೆಳು ಬರುವುದಕ್ಕೆ ಅನುವಾಗುವಂಥಹ ಜೀನ್‍ಗಳನ್ನು ಹೊಂದಿರಬಹುದು.
• ನಾನು ಥೈರಾಯ್ಡ್ ಮಾತ್ರೆಗಳನ್ನು ಬಿಡಿಯಾಗಿ (ಬಾಟಲ್ ಇಲ್ಲದೇ) ಖರೀದಿಸಬಹುದೇ?
ಇಲ್ಲ, ಹಾಗೆ ಮಾಡಲೇಬೇಡಿ. ಏಕೆಂದರೆ ಥೈರಾಯ್ಡ್ ಹಾರ್ಮೋನ್ ಮಾತ್ರೆಗಳು ಬೆಳಕು ಮತ್ತು ಗಾಳಿಯಲ್ಲಿನ ಆರ್ದ್ರತೆಯಿಂದ ಹಾಳಾಗುತ್ತವೆ. ಇದೇ ಕಾರಣಕ್ಕೆ ನೀವು ಪ್ರವಾಸ ಕೈಗೊಳ್ಳುವಾಗ ಪೂರ್ತಿ ಬಾಟಲಿಯನ್ನೇ ಮುಚ್ಚಳವನ್ನು ಭದ್ರಪಡಿಸಿ ಕೊಂಡುಹೋಗಿ.