ಥೈರಾಯ್ಡ್ ಬಗ್ಗೆ ಕಿರು ಮಾಹಿತಿ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 
 
 
 

ಥೈರಾಯ್ಡ್ ಬಗ್ಗೆ ಕಿರು ಮಾಹಿತಿ

 

ಥೈರಾಯ್ಡ್ ಗ್ರಂಥಿ

ಥೈರಾಯ್ಡ್ ಗೃಂಥಿ

 ಥೈರಾಯ್ಡ್ ಎಂದರೇನು?

ಥೈರಾಯ್ಡ್ ನಿಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಒಂದು ಗೃಂಥಿ.  ಈ  ಗೃಂಥಿಯು ನಿಮ್ಮ ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯಕವಾದ ಥೈರಾಯ್ಡ್ ಹಾರ್ಮೋನ್‍ಗಳನ್ನು ಉತ್ಪಾದಿಸುತ್ತದೆ.

 

ಥೈರಾಕ್ಸಿನ್

ಥೈರಾಕ್ಸಿನ್

ನಿಮ್ಮ ಶರೀರದಲ್ಲಿ ಥೈರಾಯ್ಡ್ ಯಾವ ಪಾತ್ರವನ್ನು ವಹಿಸುತ್ತದೆ?

ಥೈರಾಯ್ಡ್ ಗೃಂಥಿಯು T3 (ಥೈರಾಕ್ಸಿನ್) ಮತ್ತು T4 (ಥೈರೋನಿನ್) ಎಂಬ ಎರಡು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

T3 ಮತ್ತು T4 ಹಾರ್ಮೋನ್‍ಗಳು ನಿಮ್ಮ ಶರೀರದಲ್ಲಿ ಯಾವ ಕಾರ್ಯ ನಿರ್ವಹಿಸುತ್ತವೆ?

ಥೈರಾಯ್ಡ್ ಹಾರ್ಮೋನುಗಳು ನಿಮ್ಮ ಶರೀರದ ಚಯಾಪಚಯವನ್ನು (ಮೆಟಾಬಲಿಸಮ್) ನಿಯಂತ್ರಿಸುತ್ತವೆ. ಈ ರೀತಿಯಾಗಿ ನಿಮ್ಮ ಶರೀರದ ಎಲ್ಲಾ ಕಣಗಳು ಏಕರೂಪವಾಗಿ ಹಾಗೂ ಸಮರ್ಥವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವವು.  ಚುಟುಕಿನಲ್ಲಿ ಹೇಳುವುದಾದರೆ ಶರೀರದ ಹೆಚ್ಚಿನ ಅಂಗಾಂಗಗಳ ಹಾಗೂ ಸಾಮನ್ಯ ಶಾರೀರಿಕ    ಆರೋಗ್ಯವನ್ನು ಕಾಪಾಡುತ್ತವೆ.

ಥೈರಾಯ್ಡ್ ತೂಂದರೆಯಿಂದ ಯಾವ ಯಾವ ಕಾಯಿಲೆಗಳು ಉಂಟಾಗಬಹುದು?

    • ಗಾಯ್ಟರ್ (ಗಳಗಂಡ ಅಥವಾ ಗಂಟಲುವಾಳ ರೋಗ): ಥೈರಾಯ್ಡ್ ಗೃಂಥಿಯು ದೊಡ್ಡದಾಗಿ ಬೆಳೆದರೆ ಗಾಯ್ಟರ್ ಎಂದು ಕರೆಯುತ್ತಾರೆ.
ಹೈಪೋಥೈರಾಯ್ಡಿಸಮ್

ಹೈಪೋಥೈರಾಯ್ಡಿಸಮ್

    •   ಹೈಪೋಥೈರಾಯ್ಡಿಸಮ್ : ಥೈರಾಯ್ಡ್  ಗೃಂಥಿ ಅಗತ್ಯಕ್ಕಿಂತ ಕಡಿಮೆ ಹಾರ್ಮೋನ್ ಉತ್ಪಾದನೆ ಮಾಡಿದರೆ ಉಂಟಾಗಬಹುದಾದ ರೋಗಕ್ಕೆ ಹೈಪೋಥೈರಾಯ್ಡಿಸಮ್ ಎನ್ನುತ್ತೇವೆ.
ಹೈಪರ್‌ಥೈರಾಯ್ಡಿಸಮ್

ಹೈಪರ್‌ಥೈರಾಯ್ಡಿಸಮ್

  • ಹೈಪರ್‌ಥೈರಾಯ್ಡಿಸಮ್ :  ಥೈರಾಯ್ಡ್  ಗೃಂಥಿ ಅಗತ್ಯಕ್ಕಿಂತ ಹೆಚ್ಚು ಹಾರ್ಮೋನ್ ಉತ್ಪಾದನೆ ಮಾಡಿದರೆ ಉಂಟಾಗಬಹುದಾದ ರೋಗಕ್ಕೆ ಹೈಪರ್‌ಥೈರಾಯ್ಡಿಸಮ್ ಎಂದು ಕರೆಯುತ್ತಾರೆ.
  • ಥೈರಾಯ್ಡೈಟಿಸ್ : ಥೈರಾಯ್ಡ್ ಗೃಂಥಿಯಲ್ಲಿ ಉರಿ-ಊತ ಉಂಟಾಗಿ ಅದರಲ್ಲಿರುವ ಹಾರ್ಮೋನಿನ ಸಂಗ್ರಹವು ರಕ್ತಕ್ಕೆ ಸೋರಿಕೆಯಾಗಬಹುದು, ಹೀಗಾದಾಗ ರಕ್ತದಲ್ಲಿ ಹಾರ್ಮೋನ್ ಮಟ್ಟದ ಹೆಚ್ಚಳ ಉಂಟಾಗಬಹುದು. ಇದನ್ನು ಥೈರಾಯ್ಡೈಟಿಸ್ ಎಂದು ಕರೆಯುತ್ತಾರೆ.
  • ಥೈರಾಯ್ಡ್ ಗೃಂಥಿಯ ಗೆಡ್ಡೆಗಳು: ಹೆಚ್ಚಿನ ಸಂಧರ್ಭಗಳಲ್ಲಿ ಇವು ಸಾಮಾನ್ಯ ಗೆಡ್ಡೆಗಳಾಗಿರುತ್ತವೆ. ಅಪರೂಪವಾಗಿ ಕ್ಯಾನ್ಸರ್ ಕೂಡ ಆಗಿರಬಹುದು.

ಥೈರಾಯ್ಡ್ ಕಾಯಿಲೆ ಸಾಮನ್ಯ ತೊಂದರೆಯೇ?

ಹೈಪೋಥೈರಾಯ್ಡಿಸಮ್ ಹಾರ್ಮೋನ್‍ಗಳಿಗೆ ಸಂಬಂಧ ಪಟ್ಟ ಕಾಯಿಲೆಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದೆ (ಮಧುಮೇಹಕ್ಕೆ  ಆಗ್ರ ಸ್ಥಾನದಲ್ಲಿದೆ).  ಒಂದು ಅಂದಾಜಿನ ಪ್ರಕಾರ ೪೨ ಮಿಲಿಯ ಭಾರತೀಯರು ಥೈರಾಯ್ಡ್ ತೊಂದರೆಯಿಂದ ಬಳಲುತ್ತಿದ್ದಾರೆ. ಹತ್ತರಲ್ಲಿ ಓರ್ವ ಮಹಿಳೆ ಸೌಮ್ಯ ಸ್ವರೂಪದ ಥೈರಾಯ್ಡ್ ವೈಫಲ್ಯ (ಸಬ್‍ಕ್ಲಿನಿಕಲ್ ಹೈಪೋಥೈರಾಯ್ಡಿಸಮ್) ಹೊಂದಿರಬಹುದು.

ನಿಮಗೆ ಥೈರಾಯ್ಡ್ ತೊಂದರೆ ಇದೆಯೇ ಎಂದು ಹೇಗೆ ಪತ್ತೆಹಚ್ಚಬಹುದು?

ಮೊದಲನೆಯದಾಗಿ ನೀವು ನಿಮ್ಮ ವೈದ್ಯರನ್ನು ಕಾಣಬಹುದು. ಹಾರ್ಮೋನ್ ತಜ್ನರು ಇದರಲ್ಲಿ ವಿಶೇಷ ಪರಿಣಿತಿ ಹೊಂದಿರುತ್ತಾರೆ. ವೈದ್ಯರು ನಿಮ್ಮ ಕತ್ತು ಹಾಗೂ ಇತರ ದೈಹಿಕ ತಪಾಸಣೆ ಮಾಡುತ್ತಾರೆ, ಹಾಗೂ ರಕ್ತದಲ್ಲಿರುವ ಥೈರಾಯ್ಡ್ ಹಾರ್ಮೋನಿನ ಪ್ರಮಾಣವನ್ನು ತಿಳಿಯಲು ಕೆಲವು ರಕ್ತ ಪರೀಕ್ಷೆ ಮಾಡಿಸಬಹುದು. ಅದೇ ರೀತಿಯಾಗಿ ಥೈರಾಯ್ಡ್ ಗೃಂಥಿಯ ಆಕೃತಿ ಮತ್ತು ರಚನೆಯ ವಿವರವನ್ನು ತಿಳಿಯಲು ಸ್ಕ್ಯಾನ್ ಮಾಡಿಸಬಹುದು. ಕಂಡುಬಂದ ತೊಂದರೆಗೆ ಅನುಸಾರವಾಗಿ ವಿಷೇಶ ಪರೀಕ್ಷೆಗನ್ನೂ ಮಾಡಿಸಬಹುದು.

ಇನ್ನೂ ಹೆಚ್ಚಿನ ವಿವರಗಳನ್ನು ಎಲ್ಲಿ ಓದಬಹುದು?

ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ವಿಭಾಗಗಳನ್ನು ಓದಬಹುದು. ಅಂತೆಯೇ ವೈಯುಕ್ತಿಕ ಸಲಹೆಗಾಗಿ ನಿಮ್ಮ ವೈದ್ಯರನ್ನು ಕಾಣಬಹುದು.

ಹೈಪೋಥೈರಾಯ್ಡಿಸಮ್

ಹೈಪರ್‌ಥೈರಾಯ್ಡಿಸಮ್

ಥೈರಾಯ್ಡ್ ಸಂಬಂಧಿ ಕಣ್ಣಿನ ಕಾಯಿಲೆ (ಗ್ರೇವ್ಸ್ ಆರ್ಬೈಟೊಪತಿ)

 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

Dr. Gururaja Rao
Sweet Clinic
Ground Floor, Cauvery Buliding,
Besides Arogya Polyclinic
Opp. Sanjeevini Clinic
Near Unity Hospital
Falnir Road
Mangalore
Karnataka, India

Timings: 8AM - 1PM & 3.30PM - 7.30PM.
2/4th Fridays and Sundays* Holiday
Consultations with prior Appointments
Appointments: +91-9481353667

Next Sunday SPECIAL OPD : To be Announced