ಹೈಪೋಥೈರಾಯ್ಡಿಸಮ್
ಪೀಠಿಕೆ
ಥೈರಾಯ್ಡ್ ನಿಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಗೃಂಥಿ. ಇದೊಂದು ನಿರ್ನಾಳ ಗೃಂಥಿ . ಈ ಗೃಂಥಿ ನಿಮ್ಮ ಶರೀರಕ್ಕೆ ಅವಶ್ಯವಾದ ಟಿ3 ಮತ್ತು ಟಿ4 ಎಂಬ ಎರಡು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ಹಾರ್ಮೋನುಗಳು ನಿಮ್ಮ ಶರೀರದಲ್ಲಿ ಆಹಾರ ದಹನ, ಶಕ್ತಿ ಉತ್ಪಾದನೆ ಮುಂತಾದ ಅನೇಕ ಚಯಾಪಚಯ ಸಂಭಂಧಿತ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ ಹಾರ್ಮೋನುಗಳು ಇತರ ನಿರ್ನಾಳ ಗೃಂಥಿಗಳ ಕಾರ್ಯಗಳನ್ನೂ ನಿಯಂತ್ರಿಸುತ್ತದೆ.
ಹೈಪೋಥೈರಾಯ್ಡಿಸಮ್ ಎಂದರೇನು?
ಥೈರಾಯ್ಡ್ ಗೃಂಥಿ ದೇಹಕ್ಕೆ ಬೇಕಾದಷ್ಟು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸದಿದ್ದರೆ ರಕ್ತದಲ್ಲಿ ಥೈರಾಯ್ಡ್ ಹಾರ್ಮೋನಿನ ಮಟ್ಟ ಕುಸಿಯುತ್ತದೆ. ಇದನ್ನು ನಾವು ಹೈಪೋಥೈರಾಯ್ಡಿಸಮ್ ಎಂದು ಕರೆಯುತ್ತೇವೆ. ಹೈಪೋ ಎಂದರೆ ಕಡಿಮೆ ಎಂದರ್ಥ.
ಹೈಪೋಥೈರಾಯ್ಡಿಸಮ್ ರೋಗಲಕ್ಷಣಗಳೇನು?
ರೋಗಲಕ್ಷಣಗಳು ಹೈಪೋಥೈರಾಯ್ಡಿಸಮ್ ಎಷ್ಟು ತೀವ್ರವಾಗಿದೆ ಎಂಬುದರ ಮೇಲೆ ಅವಲಂಬಿಸಿದೆ. ವ್ಯಕ್ತಿಯಿಂದ ವ್ಯಕ್ತಿಗೂ ಇದರಲ್ಲಿ ವ್ಯತ್ಯಾಸ ಆಗಬಹುದು. ಕೆಲವೊಮ್ಮೆ ಯಾವುದೇ ಲಕ್ಷಣಗಳು ಇರದೇ ಇರಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ವೈದ್ಯರು ಇತರ ಯಾವುದೋ ಕಾರಣಕ್ಕೆ ಪರೀಕ್ಷೆ ಮಾಡಿದಾಗ ಪತ್ತೆಯಾಗಬಹುದು. ಅಥವಾ ಸಾಮಾನ್ಯ ಆರೋಗ್ಯ ಪರೀಕ್ಷೆ (health checkup) ಮಾಡಿದಾಗ ಕಂಡುಬರಬಹುದು.
ಹೈಪೋಥೈರಾಯ್ಡಿಸಮ್ ಯಾರಲ್ಲಿ ಕಂಡುಬರಬಹುದು? ಇದೊಂದು ಸಾಮಾನ್ಯ ರೋಗವೇ?
ಹೈಪೋಥೈರಾಯ್ಡಿಸಮ್ ಹಾರ್ಮೋನ್-ಗಳಿಗೆ ಸಂಭಂಧಪಟ್ಟ ಕಾಯಿಲೆಗಳ ಪಟ್ಟಿಯಲ್ಲಿ (ಮಧುಮೇಹದ ನಂತರ) ಎರಡನೆಯ ಸ್ಥಾನ ಪಡೆಯುತ್ತದೆ. ಇದೊಂದು ವಿಶ್ವಾವ್ಯಾಪಿ ಕಾಯಿಲೆ. ಎಲ್ಲಾ ವಯಸ್ಸಿನ (ನವಜಾತ ಶಿಶುವಿನಿಂದ ವಯಸ್ಕರವರೆಗೆ) ಜನರಲ್ಲಿ ಕಂಡುಬರುತ್ತದೆ. ಥೈರಾಯ್ಡ್ ಭಾದೆಗೆ ಯಾವುದೇ ದೇಶ, ವರ್ಣ, ಧಾರ್ಮಿಕ , ಆರ್ಥಿಕ ಎಂಬಿತ್ಯಾದಿ ಭೇದಭಾವಗಲಿಲ್ಲ.
ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 42 ಮಿಲಿಯ ಜನರು ಥೈರಾಯ್ಡ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹತ್ತು ಜನರಲ್ಲಿ ಒಬ್ಬರಿಗೆ ಲಘು ಪ್ರಮಾಣದ ಥೈರಾಯ್ಡ್ ವೈಫಲ್ಯ / ವೈಪರೀತ್ಯ (ಸಬ್-ಕ್ಲಿನಿಕಲ್ ಹೈಪೋಥೈರಾಯ್ಡಿಸಮ್ ಇರಬಹುದು. .
ಹೈಪೋಥೈರಾಯ್ಡಿಸಮ್ ಉಂಟಾಗಲು ಕಾರಣಗಳೇನು?
ಆಟೋಯಿಮ್ಮ್ಯೂನ್ ಕಾಯಿಲೆ, ಯಾವುದೇ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮೂಲಕ ಥೈರಾಯ್ಡ್ ಗೃಂಥಿ ತೆಗೆದುಹಾಕಿದಲ್ಲಿ, ವಿಕಿರಣ ಚಿಕಿತ್ಸೆಯ ದುಷ್ಪರಿಣಾಮ. ಇತರ ಕಾರಣಗಳೆಂದರೆ: ಅಯೋಡಿನ್ ಕೊರತೆ ಅಥವಾ ಹೆಚ್ಚಳ, ಹುಟ್ಟಿನಿಂದ ಕಂಡುಬರುವ ಥೈರಾಯ್ಡ್ ವೈಫಲ್ಯ, ಔಷಧಿಗಳು, ಪಿಟ್ಯುಟರಿ ಕಾಯಿಲೆ ಇತ್ಯಾದಿ.
ಹೈಪೋಥೈರಾಯ್ಡಿಸಮ್ ರೋಗಲಕ್ಷಣಗಳು ಏನು?
ನಾನು ಈಗಾಗಲೇ ಹೇಳಿದಂತೆ ಯಾವುದೇ ರೋಗಲಕ್ಷಣ ಇರಲಿಕ್ಕಿಲ್ಲ ಅಥವಾ ಕೆಲವೊಮ್ಮೆ ಇದು ಥೈರಾಯ್ಡ್-ಗೆ ಸಂಭಂದ ಪಟ್ಟ ಲಕ್ಷಣ ಎಂದು ಯಾರ ಅರಿವಿಗೆ ಬಾರದೇ ಇರಬಹುದು. ಅದೇ ರೀತಿಯಾಗಿ ಥೈರಾಯ್ಡ್ ತೊಂದರೆ ಇರದೇ ಇರುವವರಿಲ್ಲಿಯೂ ಈ ಕೆಳಕಂಡ ರೋಗ ಲಕ್ಷಣಗಳು ಕಂಡುಬರಬಹುದು. ಈ ಕೆಳಗಿನ ರೋಗ ಲಕ್ಷಣಗಳು ಹೊಸದಾಗಿ ನಿಮ್ಮಲ್ಲಿ ಕಂಡುಬಂದರೆ ನಿಮಗೆ ಹೈಪೋಥೈರಾಯ್ಡಿಸಮ್ ಇರಬಹುದು:
ನೀವಿಲ್ಲಿ ನೋಡುವಂತೆ, ಈ ಲಕ್ಷಣಗಳು, ನಿಖರ ಅಥವಾ ವಿಶೇಷವಾದವುಗಳೇನು ಅಲ್ಲ. ಆದುದರಿಂದ ಕೇವಲ ರಕ್ತ ಪರೀಕ್ಷೆಯಿಂದ ಮಾತ್ರವೆ ಥೈರಾಯ್ಡ್ ತೊಂದರೆ ಇದೆ ಎಂದು ಖಚಿತಪಡಿಸುವುದು ಸಾಧ್ಯ.
(ಹೇಗೆ ) ನಾನು ಇತರರಿಗೆ ಸಹಾಯ ಮಾಡಬಹುದು?
ಥೈರಾಯ್ಡ್ ತೊಂದರೆ ಕುಟುಂಬದ ಅನೇಕ ವ್ಯಕ್ತಿಗಳಲ್ಲಿ ಕಂಡುಬರುವುದರಿಂದ , ನೀವು ನಿಮ್ಮ ಸಂಭಂದಿಕರಿಗೆ ಇದರ ಬಗ್ಗೆ ತಿಳಿಯಪಡಿಸುವುದು ಸೂಕ್ತ. ಅಂತೆಯೇ ಅವರು ರಕ್ತ ಪರೀಕ್ಷೆ ಕೂಡಾ ಮಾಡಿಸುವುದು ಒಳ್ಳೆಯದು.
ನಾನು ನನ್ನ ವೈದ್ಯರಿಗೆ ಏನನ್ನು ತಿಳಿಸಬೇಕು?
Timings: 8AM - 1PM & 3.30PM - 7.30PM.
2/4th Fridays and Sundays* Holiday
Consultations with prior Appointments
Appointments: +91-9481353667
Next Sunday SPECIAL OPD : To be Announced