ಥೈರಾಯ್ಡ್-ಕಣ್ಣಿನ-ಕಾಯಿಲೆ || ಥೈರಾಯ್ಡ್ ಕಾಯಿಲೆಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳು
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 
 
 

ಥೈರಾಯ್ಡ್‌ಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳು (ಆರ್ಬೈಟೋಪತಿ)

Exophthalmos

ಥೈರಾಯ್ಡ್‌-ಕಣ್ಣಿನ ಕಾಯಿಲೆ

ಪೀಠಿಕೆ

ಥೈರಾಯ್ಡ್ ತೊಂದರೆ ವಿಶೇಶವಾಗಿ ಹೈಪರ್ಥೈರಾಯ್ಡಿಸಮ್ ಅಥವಾ ಗ್ರೇವ್ಸ್ ಕಾಯಿಲೆ ಇರುವ ವ್ಯಕ್ತಿಗಳಿಗೆ ಕಣ್ಣಲ್ಲಿ ನೀರು ಬರುವುದು, ಕಣ್ಣಿನಲ್ಲಿ ಮರಳು ಇದ್ದಂಥಹ ಅನುಭವ ಅಥವಾ ಕಣ್ಣಿನ ಹಿಂದೆ ಒತ್ತಡದ ಅನುಭವ ಉಂಟಾಗಬಹುದು. ತೀವ್ರವಾದ ಸಂದರ್ಭಗಳಲ್ಲಿ ಕಣ್ಣುಗಳು ಊದಿಕೊಳ್ಳಬಹುದು ಹಾಗೂ ಕಣ್ಣು ಗುಡ್ಡೆಗಳು ಹೊರಬಂದಂತೆ ಕಾಣಬಹುದು. ಪ್ರಖರ ಬೆಳಕನ್ನು ನೋಡುವಾಗ ತೊಂದರೆ, ದೃಷ್ಟಿ ಮಂಜಾಗಬಹುದು, ವಸ್ತುಗಳು ಎರಡೆರಡಾಗಿ ಕಾಣಬಹುದು. ಆಪ್ಟಿಕ್ ನರದ ಮೇಲೆ ಒತ್ತಡ ಉಂಟಾದಲ್ಲಿ ಬಣ್ಣಗಳು ಮಾಸಿದಂತೆ ಅನಿಸಬಹುದು.

ಸಾಮಾನ್ಯವಾಗಿ ಸಿಟ್ಟಿನಿಂದ ದಿಟ್ಟಿಸಿ ನೋಡುತ್ತಿರುವಂತೆ ಕಾಣುವ ಕಣ್ಣುಗಳಿಗಾಗಿ ರೋಗಿಯು ವೈದ್ಯರ ಸಹಾಯ ಕೋರಬಹುದು. ಕಣ್ಣಿನ ರೆಪ್ಪೆಗಳು ಪೂರ್ಣವಾಗಿ ಮುಚ್ಚದಿದ್ದಲ್ಲಿ ಧೂಳು ಇತ್ಯಾದಿಗಳಿಂದ ಕಾರ್ನಿಯಾಕ್ಕೆ ಧಕ್ಕೆ ಉಂಟಾಗಿ ಕುರುಡುತನಕ್ಕೆ ಕಾರಣವಾಗಬಹುದು.

ಈ ತೊಂದರೆಯನ್ನು ಹೇಗೆ ಡಯಗ್ನೋಸ್ (ರೋಗನಿರ್ಣಯ) ಮಾಡಬಹುದು?

ನಿಮಗೆ ಹೈಪೋಥೈರಾಯ್ಡಿಸಮ್ ಇದೆ ಎಂದಾದಲ್ಲಿ ಹಾಗೂ ಕಣ್ಣಿನ ತೊಂದರೆ ತೀವ್ರವಾಗಿದ್ದರೆ ಪತ್ತೆಹಚ್ಚುವುದು ಕಷ್ಟಕರವಾದ ವಿಚಾರವೇನಲ್ಲ, ಏಕೆಂದರೆ ಇದು ಸ್ವಯಂವಿದಿತವಾದ ವಿಚಾರ. ಆದರೆ  ಸೌಮ್ಯ ನಿದರ್ಶನಗಳಲ್ಲಿ ನಿಮ್ಮ ವೈದ್ಯರಿಗೆ ಈ ರೋಗ ಲಕ್ಷಣಗಳನ್ನು ವೈದ್ಯರಲ್ಲಿ ತಿಳಿಸುವದು ಸಹಕಾರಿ. ಈ ರೀತಿಯಾಗಿ ಪ್ರಾರಂಭಿಕ ಹಂತದಲ್ಲಿ  ಕಣ್ಣಿನ ತೊಂದರೆ ಪತ್ತೆಹಚ್ಚಬಹುದು.

ಥೈರಾಯ್ಡ್‌ಗೆ ಸಂಬಂಧಿಸಿದ ಆರ್ಬೈಟೋಪತಿ

ಥೈರಾಯ್ಡ್‌ಗೆ ಸಂಬಂಧಿಸಿದ ಆರ್ಬೈಟೋಪತಿ

ಹೆಚ್ಚಿನ ಸಂಧರ್ಭಗಳಲ್ಲಿ ಎರಡೂ ಕಣ್ಣುಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಕೇವಲ ಓಂದೇ ಕಣ್ಣಲ್ಲಿಯೂ ತೊಂದರೆ ಕಂಡುಬರಬಹುದು, ಆದರೆ ಈ ಸಂಧರ್ಭಗಳಲ್ಲಿ ಥೈರಾಯ್ಡ್ ಹೊರತುಪಡಿಸಿ ಇತರ ಕಾರಣಗಳ ಬಗ್ಗೆಯೂ ನಿಮ್ಮ ವೈದ್ಯರು ಶೋಧಿಸಬಹುದು.

ಅಪರೂಪಕ್ಕೊಮ್ಮೆ ರೋಗಿಗೆ ಥೈರಾಯ್ಡ್ ಸಂಭಂದಿತ ಯಾವುದೇ ಲಕ್ಷಣಗಳು ಇಲ್ಲದೇ ಕೇವಲ ಕಣ್ಣುಗಳಲ್ಲಿ ಮಾತ್ರ ತೊಂದರೆ ಉಂಟಾಗಬಹುದು. ಆದರೆ ಈ ಸಂಧರ್ಭಗಳಲ್ಲಿ ಕಣ್ಣುಗುಳಿಯ ಟ್ಯೂಮರ್‌ನಂಥಹ ಕಾರಣಗಳಿಲ್ಲವೆಂದು ಖಾತ್ರಿಪಡಿಸಿಕೊಳ್ಳಲು ನಿಮ್ಮ ವೈದ್ಯರು ಅನೇಕ ಪರೀಕ್ಷೆಗಳನ್ನು ಮಾಡಬೇಕಾಗಬಹು.

ಥೈರಾಯ್ಡ್ ಕಣ್ಣಿನ ರೋಗದ ತೀವ್ರತೆಯನ್ನು ಹೇಗೆ ತಿಳಿಯಬಹುದು?

ಥೈರಾಯ್ಡ್ ಸಂಭಂದಿತ ಕಣ್ಣಿನ ಕಾಯಿಲೆ ಕೇವಲ ಹಾರ್ಮೋನಿನ ಏರುಪೇರಿನಿಂದ ಉಂಟಾದಗ ಸೌಮ್ಯವಾಗಿರುತ್ತದೆ, ಆದರೆ ಗ್ರೇವ್ಸ್ ಕಾಯಿಲೆಯಲ್ಲಿ ಇದು ತೀವ್ರತರವಾಗಿರಬಹುದು.  ನಿಮ್ಮ ವೈದ್ಯರು ತೀವ್ರತೆಯನ್ನು ಒಂದು ವಸ್ತುನಿಷ್ಠ ಮಾನದಂಡದಿಂದ (ಸ್ಕೋರಿಂಗ್ ಸಿಸ್ಟಮ್ಸ್)  ಮೌಲ್ಯಮಾಪನ ಮಾಡುತ್ತಾರೆ. ಇದೇ ರೀತಿಯಾಗಿ ಕಣ್ಣಿನ ಕಾಯಿಲೆಯು ಕ್ರಿಯಾತ್ಮಕ (active) ಆಗಿದೆಯೊ ಅಥವಾ ನಿಷ್ಕ್ರಿಯ ಸ್ಥಿತಿಯಲ್ಲಿದೆಯೋ (inactive) ಎಂಬುದನ್ನೂ ಅರಿಯುವರು. ಇದಕ್ಕಗಿ ಕಣ್ಣಿನ ಸ್ಕ್ಯಾನಿಂಗ್ (ಅಲ್ಟ್ರಾಸೌಂಡ್) ಅಥವಾ ಸಿ. ಟಿ. ಸ್ಕ್ಯಾನ್, ಕಣ್ಣಿನ ಒತ್ತಡದ ಪರೀಕ್ಷೆ ಬೇಕಾಗಬಹುದು. ಥೈರಾಯ್ಡ್ ಪ್ರತಿಕಾಯಗಳ ರಕ್ತ ಪರೀಕ್ಷೆಯೂ ಸಹಕಾರಿ.

ಕಣ್ಣಿನ ರೋಗದ ಸ್ವಾಭಾವಿಕ ಕೋರ್ಸ್ ಏನು?

ಗ್ರೇವ್ಸ್ ಕಾಯಿಲೆ ಸಂಭಂದಿತ ಕಣ್ಣಿನ ತೊಂದರೆ ಆರಂಭಿಕ ಕೆಲ ಮಾಸಗಳಲ್ಲಿ ಉಲ್ಬಣಿಸಬಹುದು ಆದರೆ ತದನಂತರ ಕ್ರಮೇಣ ಸರಿಮಟ್ಟಕ್ಕೆ ಬರಬಹುದು. ಈ ರೀತಿಯಾಗಿ ಒಂದೇ ಮಟ್ಟದಲ್ಲಿದ ನಂತರ ಸುಧಾರಣೆ ಕಂಡುಬರುವುದು. ಈ ಕೋರ್ಸ್ (ಚರಿತ್ರೆ) ರೋಗಿಗೆ ಕೊಟ್ಟ ಥೈರಾಯ್ಡ್ ಔಷಧಗಳಿಂದ ಬದಲಾಗಬಹುದು. ಸೂಕ್ತವಾದ ಡೊಸ್‌ನಲ್ಲಿ ಬೇಗ ಗುಣಮುಖವಾದರೆ ವ್ಯತಿಕ್ತ ಡೋಸ್‌ನಿಂದ ಅಪರೂಪಕ್ಕೆ ಉಲ್ಬಣಿಸಲೂಬಹುದು.

ವಿಕಿರಣಶೀಲ  (ರೇಡಿಯೋಯಾಕ್ಟಿವ್) ಅಯೋಡಿನ್ ಮತ್ತು ಕಣ್ಣಿನ ತೊಂದರೆ..

ಇದು ಬಹಳ ವಿವಾದಾತ್ಮಕ ವಿಷಯವಾಗಿದೆ, ಅನೇಕ ತಜ್ಞರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸರಳೀಕರಿಸಿ ಹೇಳುವುದಾದರೆ, ತೀವ್ರತರವಾದ ಕಣ್ಣಿನ ತೊಂದರೆ ಉಳ್ಳವರಲ್ಲಿ, ರೇಡಿಯೋಯಾಕ್ಟಿವ್ ಅಯೊಡಿನ್ ಚಿಕಿತ್ಸೆಯಿಂದ ಉಲ್ಬಣಿಸುವ ಸಾಧ್ಯತೆ  ಇದೆ. ಬೀಡಿ, ಸಿಗರೆಟ್, ತಂಬಾಕಿನ ಸೇವನೆಯನ್ನು ಮುಂದುವರಿಸದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿಯಂತೆ. ತೀವ್ರತೆಯ ಅಂಚಿನಲ್ಲಿರುವ ರೋಗಿಗಳಿಗೆ ವೈದ್ಯರು ಸ್ಟೀರಾಯ್ಡ್ ಕೊಡುವ ಮೂಲಕ ಮತ್ತಷ್ಟು ಹದಗೆಡುವುದನ್ನು ತಡೆಗಟ್ಟಲು ಪ್ರಯತ್ನಿಸುವರು.

ಚಿಕಿತ್ಸೆಯ ಆಯ್ಕೆಗಳೇನು?

ಚಿಕಿತ್ಸೆಯನ್ನು ಥೈರಾಯ್ಡ್ ಸಂಬಂಧಿಸಿದ ಕಣ್ಣಿನ ತೊಂದರೆಯಲ್ಲಿ ವಿಶೇಷ ಆಸಕ್ತಿಯುಳ್ಳ ನೇತ್ರತಜ್ಞರೊಂದಿಗೆ ಸಮಾಲೋಚಿಸಿ ಯೋಜಿಸಲಾಗುತ್ತದೆ. ಸೌಮ್ಯ ಪ್ರಕರಣಗಳಲ್ಲಿ ಕಣ್ಣಿನ ರೆಪ್ಪೆಯ ರಕ್ಷಣೆ - ಆರ್ಧ್ರಕ ಕಣ್ಣಿನ ಡ್ರಾಪ್ಸ್ ಸಾಕಾಗುವದು, ತೀವ್ರತರವಾದ ರೋಗದಲ್ಲಿ ಕಣ್ಣನ್ನು ಉಳಿಸಿಕೊಳ್ಳಲು ಅಧಿಕ ಪ್ರಮಾಣದ ಸ್ಟೀರಾಯ್ಡ್ ಚುಚ್ಚುಮದ್ದು, ಶಸ್ತ್ರಚಿಕಿತ್ಸೆ ಅಥವಾ ವಿಕಿರಣ ಚಿಕಿತ್ಸೆ ಬೇಕಾಗಬಹುದು. ಒಮ್ಮೆ ರೋಗದ ಚಟುವಟಿಕೆ ನಾಶವಾದ ಮೇಲೆ, ಉಳಿದ ವಿರೂಪಗಳು / ವೈಪರೀತ್ಯಗಳು (ಉದಾ. ಡಬಲ್ ವಿಷನ್) ಸರಿಪಡಿಸಲು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.

ಒಟ್ಟಿನಲ್ಲಿ ಥೈರಾಯ್ಡ್ ಸಂಬಂಧಿಸಿದ ಕಣ್ಣಿನ ರೋಗ ಚಿಕಿತ್ಸೆಯಲ್ಲಿ ಒಂದು ಸುಸಂಘಟಿತ ಮಾರ್ಗವನ್ನು ಅನುಸರಿಸಬೇಕು, ಇದರಲ್ಲಿ ರೋಗಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ರೋಗಿಯ ಇಬ್ಬರ ಆದ್ಯತೆಗಳನ್ನೂ ಪರಿಗಣಿಸಿದಲ್ಲಿ ರೋಗಿಗೆ ಹೆಚ್ಚಿನ ತೃಪ್ತಿ ಉಂಟಾಗಬಹುದು.

 

ಇನ್ನಷ್ಟು ಓದಲು ಲಾಗಿನ್ ಆಗಿ

ನಿಮ್ಮ ಖಾತೆಗೆ ಲಾಗಿನ್ ಆಗಿ

ಬಳಕೆದಾರಹೆಸರು *
ಪಾಸ್ವರ್ಡ್ *
ನನ್ನನ್ನು ನೆನಪಿನಲ್ಲಿಡಿ

 

 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

Dr. Gururaja Rao
Sweet Clinic
Ground Floor, Cauvery Buliding,
Besides Arogya Polyclinic
Opp. Sanjeevini Clinic
Near Unity Hospital
Falnir Road
Mangalore
Karnataka, India

Timings: 8AM - 1PM & 3.30PM - 7.30PM.
2/4th Fridays and Sundays* Holiday
Consultations with prior Appointments
Appointments: +91-9481353667

Next Sunday SPECIAL OPD : To be Announced