ನಿಯಮಗಳು ಮತ್ತು ಹಕ್ಕುನಿರಾಕರಣೆ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 
 
 
 

ಈ ಜಾಲತಾಣದಲ್ಲಿ ಕಂಡುಬರುವ ಎಲ್ಲಾ ವೈದ್ಯಕೀಯ ಮಾಹಿತಿಗಳು ಸಾವಜನಿಕರ ಹಾಗೂ ರೋಗಿಗಳ ಪ್ರಯೋಜನದ ಉದ್ದೇಶದಿಂದ ಪ್ರಕಾಶಿಸಲ್ಪಟಿದೆ. ಈ ಜಾಲತಾಣ ಅದರ ಕರ್ತೃಗಳು, ಡಾ. ಗುರೂರಾಜ ರಾವ್ ಅಥವಾ ಇನ್ನ್ಯಾರೂ, ಈ ಮಾಹಿತಿಯ ನಿಖರತೆಯ ಬಗ್ಗೆಯಾಗಲೀ ಅಥವಾ ಪ್ರಸಕ್ತತೆ ಬಗ್ಗೆಯಾಗಲೀ ಯಾವುದೇ ಖಾತರಿಯನ್ನು ನೀಡುವುದಿಲ್ಲ . ಅಂತೆಯೇ ಈ ಮಾಹಿತಿಯು ಅಲ್ಲಾ ರೋಗಿಗಳಿಗೂ ಎಲ್ಲ ಸಂದರ್ಭಗಳಲ್ಲಿಯೂ ಸೂಕ್ತವಾಗಿರುವುದೆಂದು ಹೇಳಲಾಗದು. ಇಲ್ಲಿರುವ ಯಾವ ಮಾಹಿತಿಯನ್ನೂ ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಾಗಿ ಬಳಸಬಾರದೆಂದು ನಾವು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ.

ಮೆಡಿಸಿನ್ ಒಂದು ಬದಲಾಗುವ ವಿಜ್ಞಾನ. ಇಂದಿನ ಸಲಹೆ ನಾಳೆ ವಿರೋಧಾಭಾಸವೂ ಆಗಬಹುದಾಗಿದೆ. ಯಾವುದೇ ರೂಪದ ಚಿಕಿತ್ಸೆಯನ್ನು, ಪರೀಕ್ಷೆಯನ್ನು ಪಡೆಯುವ, ನಿಲ್ಲಿಸುವ ಅಥವಾ ಬದಲಾಯಿಸುವ ಮೊದಲು ನಿಮ್ಮ ವೈದ್ಯರ ವೈಯುಕ್ತಿಕ ಸಲಹೆ ಪಡೆಯುವುದು ಅತ್ಯವಶ್ಯಕ. ಡೇಟಾ ದೋಷ, ನಮೂದಿಸುವ ದೋಷ, ಮಾನವ ದೋಷ, ಪ್ರಸರಣ ದೋಷ, ವೈರಸ್ ದಾಳಿಗಳಿಗೆ ಜಾಲತಾಣಗಳು ತುತ್ತಾಗಬಹುದು, ಈ ರೀತಿಯ ತೊಂದರೆಗಳು ಈ ಜಾಲತಾಣ, ಅದರ ಕರ್ತೃಗಳು, ಡಾ. ಗುರೂರಾಜ ರಾವ್ ಹಾಗೂ ಇತರರು ಇವರ ನಿಯತ್ರಣದಲ್ಲಿರಬಹುದು ಅಥವಾ ಇಲ್ಲದಿರಬಹುದು, ಯಾವುದೇ ಸಂದರ್ಭದಲ್ಲೂ ಮೇಕ್ಲಂಡವರು ಇವುಗಳಿಗೆ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಔಷಧೀಯ ಡೋಸ್ ಅನ್ನು ಸಂದರ್ಭಾನುಸಾರ ಹೆಸರಾಂತ ಔಷಧ ಉಲ್ಲೇಖದಿಂದ (ನೀವು ವೈದ್ಯರಾಗಿದ್ದಲ್ಲಿ) ಅಥವಾ ನಿಮ್ಮ ವೈದ್ಯರಿಂದ ಖಾತ್ರಿ ಪಡಿಸಿಕೊಳ್ಳಿ. ಕೆಲವೊಂದು ಔಷಧಿಗಳು ಕೆಲ ರೋಗಿಗಳಿಗೆ ಕೆಲ ಸಂದರ್ಭ ಸೂಕ್ತವಾಗಿರದಿರಬಹುದು ಅಥವಾ ಔಷಧ ಅಲರ್ಜಿ ಅಥವಾ ಇನ್ನಾವುದೋ ಹಾನಿಯನ್ನು ಉಂಟುಮಾಡಲೂಬಹುದು.

ಈ ಜಾಲತಾಣ ವೈದ್ಯಕೀಯ ಮಾಹಿತಿ ಹೊಂದಿರುವುದರಿಂದ ಅದು ಎಲ್ಲಾ ವಯಸ್ಸಿನವರಿಗೆ ವಿಶೇಷವಾಗಿ ಮಕ್ಕಳಿಗೆ ಸೂಕ್ತವಾಗಿರದಿರಬಹುದು. ಪೋಷಕರ ವಿವೇಚನೆಯನ್ನು ಸೂಚಿಸಲಾಗಿದೆ.

ಈ ಜಾಲತಾಣದ ಬಳಕೆಯಿದ ಅಥವಾ ಇನ್ನಾವುದೋ ಕಾರಣದಿಂದ, ಉಂಟಾಗಬಹುದಾದ / ಆಗದಿರಬಹುದಾದ ಯಾವುದೇ ರೀತಿಯ ನೈಜ್ಯ ಆಥವಾ ಕಲ್ಪಿತ - (ಮನುಷ್ಯರಿಗೆ, ಪ್ರಾಣಿಗಳಿಗೆ, ಜೀವಿಗಳಿಗೆ ಅಥವಾ ನಿರ್ಜೀವವಾದ ವಸ್ತುಗಳಿಗೆ, ತಂತ್ರಾಂಶ, ಯಂತ್ರಾಂಶ ಇತ್ಯಾದಿಗಳಿಗೆ) ದೈಹಿಕ, ಶಾರೀರಿಕ, ಮಾನಸಿಕ, ಆರ್ಥಿಕ ಅಥವಾ ಇನ್ನವುದೇ ಹಾನಿಗೂ ಮೇಲ್ಕಂಡವರು ಹೊಣೆಗಾರರಾಗಿರುದಿಲ್ಲ.