ಬೆಳವಣಿಗೆ ಬಗ್ಗೆ ಕಿರು ಮಾಹಿತಿ||ನಿಮ್ಮ ಮಗುವಿನ ಬೆಳವಣಿಗೆ ಸರಿಯಾಗಿದೆಯೇ?
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 
 
 
 
 
 
 
 

ಬೆಳವಣಿಗೆ-ಪ್ರಾಥಮಿಕ ಮಾಹಿತಿ

Intro-child-Growth-Hormone

 

growth

ಬೆಳವಣಿಗೆ ಎಂದರೇನು?

ಬೆಳವಣಿಗೆ ಜೀವನದ ಎಲ್ಲಾ ಸ್ವರೂಪಗಳ ಮೂಲ ಲಕ್ಷಣ. ಮಕ್ಕಳಲ್ಲಿ ಬೆಳವಣಿಗೆ ನೈಸರ್ಗಿಕವಾದ ಪ್ರಕ್ರಿಯೆಯಾದರೂ, ಇದು ಪ್ರಕೃತಿಯ ಅತ್ಯಂತ ಸಂಕೀರ್ಣ ಮತ್ತು ವಿಸ್ಮಯಗೊಳಿಸುವ ವಿದ್ಯಮಾನ.

ಬೆಳವಣಿಗೆ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ?

ಈ ಅಂಶಗಳನ್ನು 3 ಮೂಲಭೂತ ವಿಭಾಗಗಳಾಗಿ ವಿಂಗಡಿಸಬಹುದು:

 • ಪರಿಸರಕ್ಕೆ ಸಂಭಂದಿಸಿದ
 • ಅನುವಂಶಿಕ
 • ಹಾರ್ಮೋನುಗಳಿಗೆ ಸಂಭಂದಿಸಿದ

   

 • ಪ್ರಸವಪೂರ್ವ, ಮಾತೃ ಸಂಭಂದಿತ, ಸಾಮಾಜಿಕ ಆರ್ಥಿಕ ಸ್ಥಾನಮಾನ, ಹವಾಮಾನ, ದೈಹಿಕ ಚಟುವಟಿಕೆ, ಪೋಷಣೆ ಮತ್ತು ಮಾನಸಿಕ ಒತ್ತಡ ಇವುಗಳು ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದಾದ ಪರಿಸರಕ್ಕೆ ಸಂಭಂದಿಸಿದ ಅಂಶಗಳು.
 • ಆನುವಂಶಿಕ ಅಂಶಗಳೆಂದರೆ ಲಿಂಗ, ಜನಾಂಗ, ಅನುವಂಶಿಕ ಅಂಶಗಳು ಮತ್ತು ಜನ್ಮಜಾತ ಅಸಹಜತೆಗಳು.
 • ಹಾರ್ಮೋನುಗಳಿಗೆ ಸಂಭಂದಿಸಿದ ಅಂಶಗಳೆಂದರೆ ಥೈರಾಯ್ಡ್ ಹಾರ್ಮೋನ್, ಬೆಳವಣಿಗೆ (ಗ್ರೋತ್) ಹಾರ್ಮೋನು, ಲೈಂಗಿಕ ಹಾರ್ಮೋನು, ಇನ್ಸುಲಿನ್, ಕಾರ್ಟಿಸೋಲ್ ಮತ್ತು ಬೆಳವಣಿಗೆಯ ಅಂಶಗಳು.

 boy-height

ಸಣ್ಣ ನಿಲುವು (short stature)ಎಂದರೇನು?

ಮಗುವಿನ ಎತ್ತರವು ವಯಸ್ಸು, ಲಿಂಗ, ಜನಾಂಗ, ಅಥವಾ ಕುಟುಂಬದ ಸರಾಸರಿ ಹೋಲಿಕೆಯಲ್ಲಿ ಗಮನಾರ್ಹವಾಗಿ ಕಡಿಮೆ ಇದ್ದಲ್ಲಿ ಅದನ್ನು ವೈದ್ಯಕೀಯ ಭಾಷೆಯಲ್ಲಿ (short stature) ಸಣ್ಣ ನಿಲುವು ಅಥವಾ ಕುಬ್ಜತೆ ಎಂದು ಕರಯುತ್ತಾರೆ.

 

ಸಣ್ಣ ನಿಲುವು ಅಥವಾ ಕುಬ್ಜತೆಗೆ ಕಾರಣಗಳೇನು?

ಮೇಲ್ಕಂಡಂತೆ  ಪರಿಸರಕ್ಕೆ ಸಂಭಂದಿಸಿದ, ಅನುವಂಶಿಕ, ಹಾರ್ಮೋನುಗಳಿಗೆ ಸಂಭಂದಿಸಿದ - ಈ ಮೂರರಲ್ಲಿ ಯಾವುದೇ ಪ್ರಧಾನ ಅಂಶ ಕಾರಣವಾಗಬಹುದು.


ಕುಬ್ಜತೆಯ ಕಾರಾಣಗಳನ್ನು ಹಲವು ಬಗೆಗಳಲ್ಲಿ  ಈ ರೀತಿಯಾಗಿ ವಿಂಗಡಿಸಬಹುದು: 

 

 • ಬೆಳವಣಿಗೆ ಮತ್ತು ಪಕ್ವತೆಯ ಸಾಂವಿಧಾನಿಕ ವಿಳಂಬ, ಈ ಮಂದಗತಿಯ ಬೆಳವಣಿಗೆಯ ಮಾದರಿ ಸಾಮಾನ್ಯವಾಗಿ ಕೌಟುಂಬಿಕವಾಗಿ ಕಂಡುಬರುವುದು. ಪ್ರೌಢಾವಸ್ಥೆಯ ಸಮಯದಲ್ಲಿ ಬೆಳವಣಿಗೆಯಲ್ಲಿ ವಿಳಂಬವುಂಟಾಗುತ್ತದೆ. ಪ್ರೌಢಾವಸ್ಥೆ ತಲುಪವಲ್ಲಿಯೂ ವಿಳಂಬ ಕಂಡುಬರುತ್ತದೆ. ಆದಾಗ್ಯೂ, ಈ ಮಕ್ಕಳು ತಮ್ಮ ಸಮಾನಸ್ಕಂದರಲ್ಲಿ ಬೆಳವಣಿಗೆ ಮುಗಿದ ನಂತರವೂ ತಮ್ಮ ಬೆಳವಣಿಗೆ ಮುಂದುವರೆಸುತ್ತಾರೆ. ಈ ರೀತಿಯಾಗಿ ಸಾಮಾನ್ಯ ಎತ್ತರ ಪಡೆಯುತ್ತಾರೆ.
 • ಕೌಟುಂಬಿಕ ಸಣ್ಣ ನಿಲುವು. ಈ ಸ್ಥಿತಿಯಲ್ಲಿ, ಮಕ್ಕಳು ಕುಬ್ಜ ಪೋಷಕರನ್ನು ಹೊಂದಿರುತ್ತವೆ. ಈ ಮಕ್ಕಳು ಸಾಮಾನ್ಯ ಗತಿಯಲ್ಲಿ ಬೆಳೆಯುತ್ತಾರೆ ಮತ್ತು ಸರಿಯಾದ ವಯಸ್ಸಿನಲ್ಲಿ ಪ್ರೌಢಾವಸ್ಥೆ ತಲುಪುತ್ತಾರೆ. ಅವರು ಸಣ್ಣ ವಯಸ್ಕರಾಗಿ ಬೆಳೆಯುತ್ತಾರೆ, ಇವರ ಎತ್ತರ ಇವರ ತಂದೆ-ತಾಯಂದಿರ ಎತ್ತರವನ್ನೇ ಪ್ರತಿಬಿಂಬಿಸುತ್ತದೆ.
 • ಈಡಿಯೋಪಾಥಿಕ್ ಸಣ್ಣ ನಿಲುವು (ISS). ಈಡಿಯೋಪಾಥಿಕ್ ಎಂದರೆ ನಮಗೆ ಕಾರಣ ಗೊತ್ತಿಲ್ಲ ಎಂದರ್ಥ. ಈ ಮಕ್ಕಳು ಸಣ್ಣ ವಯಸ್ಕರಾಗಿ ಬೆಳೆಯುತ್ತಾರೆ.
 • ದೀರ್ಘಕಾಲಿಕ ಕಾಯಿಲೆ - ಹಲವಾರು ಕಾಯಿಲೆಗಳು ಸಣ್ಣ ನಿಲುವಿಗೆ ಕಾರಣವಾಗಬಹುದು. ಇತರ ರೋಗ ಲಕ್ಷಣಗಳು ಮತ್ತು ದೈಹಿಕ ಚಿಹ್ನೆಗಳು ಸಾಮಾನ್ಯವಾಗಿ ಕಂಡುಬರುತ್ತವೆ.

 

ನನ್ನ ಮಗುವಿಗೆ ಯಾವುದೇ ಬೆಳವಣಿಗೆ ಸಮಸ್ಯೆ ಇಲ್ಲವೆಂದು  ಹೇಗೆ ತಿಳಿಯುವುದು?

ಸಣ್ಣ ನಿಲುವಿನ ಕೂಲಂಕಷವಾದ ಪರೀಕ್ಷೆಯ ಬಗ್ಗೆ ನಮ್ಮ ಮುಂದಿನ ವಿಭಾಗವನ್ನು ಓದಿರಿ..

 
 
 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

Dr. Gururaja Rao
Arogya Polyclinic
2nd Floor, Cauvery Buliding,
Near Unity Hospital
Falnir Road
Mangalore
Karnataka, India

Timings: 8AM - 1PM & 3.30PM - 7.30PM.
2/4th Fridays and Sundays* Holiday
Consultations with prior Appointments
Appointments: +91-9481353667

Next Sunday SPECIAL OPD 8AM-12PM 09-Feb