ಥೈರಾಯ್ಡ್ ಬಗ್ಗೆ ಕಿರು ಮಾಹಿತಿ
ಥೈರಾಯ್ಡ್ ಎಂದರೇನು?
ಥೈರಾಯ್ಡ್ ನಿಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಒಂದು ಗೃಂಥಿ. ಈ ಗೃಂಥಿಯು ನಿಮ್ಮ ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯಕವಾದ ಥೈರಾಯ್ಡ್ ಹಾರ್ಮೋನ್‍ಗಳನ್ನು ಉತ್ಪಾದಿಸುತ್ತದೆ.
ನಿಮ್ಮ ಶರೀರದಲ್ಲಿ ಥೈರಾಯ್ಡ್ ಯಾವ ಪಾತ್ರವನ್ನು ವಹಿಸುತ್ತದೆ?
ಥೈರಾಯ್ಡ್ ಗೃಂಥಿಯು T3 (ಥೈರಾಕ್ಸಿನ್) ಮತ್ತು T4 (ಥೈರೋನಿನ್) ಎಂಬ ಎರಡು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.
T3 ಮತ್ತು T4 ಹಾರ್ಮೋನ್‍ಗಳು ನಿಮ್ಮ ಶರೀರದಲ್ಲಿ ಯಾವ ಕಾರ್ಯ ನಿರ್ವಹಿಸುತ್ತವೆ?
ಥೈರಾಯ್ಡ್ ಹಾರ್ಮೋನುಗಳು ನಿಮ್ಮ ಶರೀರದ ಚಯಾಪಚಯವನ್ನು (ಮೆಟಾಬಲಿಸಮ್) ನಿಯಂತ್ರಿಸುತ್ತವೆ. ಈ ರೀತಿಯಾಗಿ ನಿಮ್ಮ ಶರೀರದ ಎಲ್ಲಾ ಕಣಗಳು ಏಕರೂಪವಾಗಿ ಹಾಗೂ ಸಮರ್ಥವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವವು. ಚುಟುಕಿನಲ್ಲಿ ಹೇಳುವುದಾದರೆ ಶರೀರದ ಹೆಚ್ಚಿನ ಅಂಗಾಂಗಗಳ ಹಾಗೂ ಸಾಮನ್ಯ ಶಾರೀರಿಕ ಆರೋಗ್ಯವನ್ನು ಕಾಪಾಡುತ್ತವೆ.
ಥೈರಾಯ್ಡ್ ತೂಂದರೆಯಿಂದ ಯಾವ ಯಾವ ಕಾಯಿಲೆಗಳು ಉಂಟಾಗಬಹುದು?
ಥೈರಾಯ್ಡ್ ಕಾಯಿಲೆ ಸಾಮನ್ಯ ತೊಂದರೆಯೇ?
ಹೈಪೋಥೈರಾಯ್ಡಿಸಮ್ ಹಾರ್ಮೋನ್‍ಗಳಿಗೆ ಸಂಬಂಧ ಪಟ್ಟ ಕಾಯಿಲೆಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದೆ (ಮಧುಮೇಹಕ್ಕೆ ಆಗ್ರ ಸ್ಥಾನದಲ್ಲಿದೆ). ಒಂದು ಅಂದಾಜಿನ ಪ್ರಕಾರ ೪೨ ಮಿಲಿಯ ಭಾರತೀಯರು ಥೈರಾಯ್ಡ್ ತೊಂದರೆಯಿಂದ ಬಳಲುತ್ತಿದ್ದಾರೆ. ಹತ್ತರಲ್ಲಿ ಓರ್ವ ಮಹಿಳೆ ಸೌಮ್ಯ ಸ್ವರೂಪದ ಥೈರಾಯ್ಡ್ ವೈಫಲ್ಯ (ಸಬ್‍ಕ್ಲಿನಿಕಲ್ ಹೈಪೋಥೈರಾಯ್ಡಿಸಮ್) ಹೊಂದಿರಬಹುದು.
ನಿಮಗೆ ಥೈರಾಯ್ಡ್ ತೊಂದರೆ ಇದೆಯೇ ಎಂದು ಹೇಗೆ ಪತ್ತೆಹಚ್ಚಬಹುದು?
ಮೊದಲನೆಯದಾಗಿ ನೀವು ನಿಮ್ಮ ವೈದ್ಯರನ್ನು ಕಾಣಬಹುದು. ಹಾರ್ಮೋನ್ ತಜ್ನರು ಇದರಲ್ಲಿ ವಿಶೇಷ ಪರಿಣಿತಿ ಹೊಂದಿರುತ್ತಾರೆ. ವೈದ್ಯರು ನಿಮ್ಮ ಕತ್ತು ಹಾಗೂ ಇತರ ದೈಹಿಕ ತಪಾಸಣೆ ಮಾಡುತ್ತಾರೆ, ಹಾಗೂ ರಕ್ತದಲ್ಲಿರುವ ಥೈರಾಯ್ಡ್ ಹಾರ್ಮೋನಿನ ಪ್ರಮಾಣವನ್ನು ತಿಳಿಯಲು ಕೆಲವು ರಕ್ತ ಪರೀಕ್ಷೆ ಮಾಡಿಸಬಹುದು. ಅದೇ ರೀತಿಯಾಗಿ ಥೈರಾಯ್ಡ್ ಗೃಂಥಿಯ ಆಕೃತಿ ಮತ್ತು ರಚನೆಯ ವಿವರವನ್ನು ತಿಳಿಯಲು ಸ್ಕ್ಯಾನ್ ಮಾಡಿಸಬಹುದು. ಕಂಡುಬಂದ ತೊಂದರೆಗೆ ಅನುಸಾರವಾಗಿ ವಿಷೇಶ ಪರೀಕ್ಷೆಗನ್ನೂ ಮಾಡಿಸಬಹುದು.
ಇನ್ನೂ ಹೆಚ್ಚಿನ ವಿವರಗಳನ್ನು ಎಲ್ಲಿ ಓದಬಹುದು?
ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ವಿಭಾಗಗಳನ್ನು ಓದಬಹುದು. ಅಂತೆಯೇ ವೈಯುಕ್ತಿಕ ಸಲಹೆಗಾಗಿ ನಿಮ್ಮ ವೈದ್ಯರನ್ನು ಕಾಣಬಹುದು.
ಥೈರಾಯ್ಡ್ ಸಂಬಂಧಿ ಕಣ್ಣಿನ ಕಾಯಿಲೆ (ಗ್ರೇವ್ಸ್ ಆರ್ಬೈಟೊಪತಿ)
ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667
ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM to be announced