ರೇಡಿಯೋ ಅಯೊಡೀನ್
ಹೈಪರ್‌ಥೈರಾಯ್ಡಿಸಮ್ -ಗೆ ರಾಮಬಾಣ?
ವಿಕಿರಣಶೀಲ (ರೇಡಿಯೊಆಕ್ಟಿವ್) ಅಯೋಡಿನ್ ಚಿಕಿತ್ಸೆ:
ಅಯೋಡಿನ್ ಥೈರಾಯ್ಡ್ ಗೃಂಥಿಯ ಕಾರ್ಯನಿರ್ವಹಣೆಯಲ್ಲಿ ಅವಿಭಾಜ್ಯ ಅಂಗ. ಆದುದರಿಂದ ವಿಕಿರಣ ಉಳ್ಳ ಅಯೋಡಿನ್ ಅನ್ನು ಥೈರಾಯ್ಡ್ ಗೃಂಥಿ ಆಕರ್ಷಿಸುತ್ತದೆ ಹಾಗೂ ಇದನ್ನು ಶೇಕರಿಸುತ್ತದೆ. ಹೀಗೆ ವಿಪರೀತವಾಗಿ ವರ್ತಿಸುತ್ತಿರುವ ಥೈರಾಯ್ಡ್ ಗೃಂಥಿಯು ಸಣ್ಣ ಡೋಸ್ ವಿಕಿರಣ ಉಳ್ಳ ಅಯೋಡಿನ್-ಗೆ ಸುಲಭವಾಗಿ ತುತ್ತಾಗುತ್ತದೆ. ಈ ಡೋಸ್ ಶಿರೀರಕ್ಕೆ ಇತರ ಹಾನಿಯುಂಟುಮಾಡಲು ತೀರಾ ಚಿಕ್ಕದು. ಇದು ಕೇವಲ ರೋಗಪೀಡಿತ ಥೈರಾಯ್ಡ್ ಗೃಂಥಿಯನ್ನು ಮಾತ್ರ ನಾಶ ಮಾಡುತ್ತದೆ.
ಲಾಕ್ಷಾನುಗಟ್ಟಲೆ ರೋಗಿಗಳು ವಿಕಿರಣಶೀಲ (ರೇಡಿಯೋಆಕ್ಟಿವ್) ಅಯೋಡಿನ್ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಅಮೇರಿಕಾದ ಮಾಜಿ ಅಧ್ಯಕ್ಷರಾದ ಜಾರ್ಜ್ ಬುಷ್ ಹಾಗೂ ಅವರ ಪತ್ನಿ ಬರ್ಬಾರ ಅವರೂ ಹೈಪರ್‌ಥೈರಾಯ್ಡಿಸಮ್ –ಗೆ ಈ ಚಿಕಿತ್ಸೆ ಪಡೆದಿದ್ದಾರೆ. ಈ ಚಿಕಿತ್ಸೆಯನ್ನು ಹೊರ-ರೋಗಿಯಾಗಿಯೇ ಪಡೆಯಬಹುದಾಗಿದೆ, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ.
ಕೇವಲ ಸ್ವಲ್ಪವೇ ಮಾತ್ರ ನಾಶಪಡಿಸಲು ಸಾಧ್ಯವಿಲ್ಲ ಏಕೆಂದರೆ ಇಡಿಯ ಗೃಂಥಿಯು ರೋಗಗೃಸ್ಥವಾಗಿರುತ್ತದೆ. ಚಿಕಿತ್ಸೆಯ ನಂತರ ರೋಗಿಯು ಥೈರಾಯ್ಡ್ ಹಾರ್ಮೋನ್ ಮಾತ್ರೆಗಳನ್ನು ನಿಯಮಿತವಾಗಿ ತಿನ್ನಬೇಕು.
ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667
ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM to be announced