ಆರೋಗ್ಯಕರವಾದ ಆಹಾರ ಸೇವನೆ ಸರಿಯಾದ ದೇಹ ತೂಕಕ್ಕೆ ಬುನಾದಿ. ಹೆಚ್ಚಿನ ಜನರಲ್ಲಿ ಕೇವಲ ಆರೋಗ್ಯಕರವಾದ ಆಹಾರ ಪದ್ಧತಿ ಮತ್ತು ವ್ಯಾಯಾಮ ಮಾಡುವುದರಿಂದ ಸರಿಯಾದ ದೇಹ ತೂಕ ಹೊಂದಲು ಸಾಧ್ಯವಾಗುತ್ತದೆ. ಇದರಿಂದ ದೇಹ ಬೇಕಾದ ಇಂಧನದ ಸೇವನೆ ಮತ್ತು ವ್ಯಯದಲ್ಲಿ ಸಮತೋಲನ ಸಾಧಿಸಲು ಸಾಧ್ಯ.
ನಿಮ್ಮ ದೇಹದ ತೂಕ ಕಡಿಮೆಗೊಳಿಸಲು ನೀವು ಕ್ಯಾಲರಿಗಳನ್ನು ಕಡಿತಗೊಳಿಸಿ ವ್ಯಾಯಾಮದ ಪ್ರಮಾಣ ಮತ್ತು ಅವಧಿಯನ್ನು ಹೆಚ್ಚಿಸಬೇಕು. ಕೇವಲ ಡಯೆಟ್ ಮಾಡುವುದರಿಂದ ಇದು ಸಾಹ್ಯವಾಗದೆ ಇರಬಹುದು. ನಿಮ್ಮಲ್ಲಿ ತೂಕದ ನಿಯಂತ್ರಣ ವ್ಯವಸ್ಥೆಯ ವಂಶವಾಹಿಗಳ ನ್ಯೂನ್ಯತೆ ಇದ್ದರೂ, ನೀವು ತೂಕ ಕಡಿಮೆ ಮಾಡುವ ಆಧುನಿಕ ಮದ್ದುಗಳನ್ನು ತಿನ್ನುತಿದ್ದರೂ, ಆಹಾರ-ವ್ಯಾಯಾಮ ಚಿಕಿತ್ಸೆಯ ಯಶಸ್ಸಿನ ಕೀಲಿಕೈ.
• ನಿಮ್ಮ ಆಹಾರ ಕ್ರಮದಲ್ಲಿ ವೈವಿಧ್ಯವಿರಲಿ ಆದರೆ ಕೊಬ್ಬಿನ ವೈವಿಧ್ಯತೆ ಬೇಡ.
• ಹೆಚ್ಚು ನಾರುಳ್ಳ ಆಹಾರವನ್ನು ತಿನ್ನಿರಿ. (ಪ್ರೋಟೀನ್, ಮತ್ತು ಕೊಬ್ಬು ಭರಿತವಾದ ಆಹಾರದ ಬದಲಾಗಿ - ಹೆಚ್ಚು ತರಕಾರಿ, ಮೊಳಕೆ ಬರಿಸಿದ ಕಾಳುಗಳು, ಸೌತೆಕಾಯಿ, ಹಣ್ಣುಗಳು ಇತ್ಯಾದಿಗಳನ್ನು ತಿನ್ನಿ)
• ಮದ್ಯಪಾನದಲ್ಲಿ ಮಿತವಿರಲಿ.
• ಪ್ರಾಣಿಜನ್ಯ ಕೊಬ್ಬನ್ನು ಕಡಿಮೆಗೊಳಿಸಿ.
• ಸಕ್ಕರೆ ಪೇಯಗಳನ್ನು (ಉದಾ: ಮೃದು/ತಂಪು ಪಾನೀಯ "ಕೋಲ್ಡ್" ) ತ್ಯಜಿಸಿ.
• ಚಹಾ ಕಾಫಿ ಮುಂತಾದವುಗಳಿಗೆ ಸಕ್ಕರೆಗೆ ಪರ್ಯಾಯವಾಗಿ ಷುಗರ್ ಫ್ರೀ ಬಳಸಿ.
• ನಿಯಮಿತವಾದ ಊಟವನ್ನು ಬಿಡಬೇಡಿ (ಇದು ತಿಂಡಿ ಮತ್ತು ಜಂಕ್ ಆಹಾರ ತಿನ್ನುವುದಕ್ಕೆ ಪ್ರೇರಣೆ ಆಗಬಹುದು).
• ಸಾಯಂಕಾಲ/ರಾತ್ರಿಯಲ್ಲಿ ಭಾರಿ ಭೋಜನ ಬೇಡ.
• ಆಹಾರವನ್ನು ಮೆಲ್ಲನೆ ಜಗಿದು ಚಿಕ್ಕ ಚಿಕ್ಕ ತುತ್ತುಗಳಾಗಿ ತಿನ್ನಿ.
• ಊಟ ಮಾಡುವಾಗ ಟಿವಿ ವೀಕ್ಷಿಸುವುದು ಮುಂತಾದ ಚಟುವಟಿಕೆ ಬೇಡ.
• ನಿಮಗೆ ಬೇಕಾದಷ್ಟೂ ಆರವನ್ನು ಒಮ್ಮೆಲೇ ಬಿಡಿಸಿಕೊಳ್ಳಿ.
• ಚಿಕ್ಕ ಪ್ಲೇಟ್ ಬಳಸಿ. ಸಲಹೆ: ಒಮ್ಮೆ ಪ್ಲೇಟ್ ತುಂಬಿದಲ್ಲಿ 25% ಆಹಾರವನ್ನು ವಾಪಸ್ ಮಾಡಿ.
• ಎಣ್ಣೆಯಲ್ಲಿ ಕರಿಯುವ ಬದಲಾಗಿ (ಉದಾ: ಹಪ್ಪಳ) ಬೇಕ್ ಇಲ್ಲವೇ ಬೆಂಕಿಯಲ್ಲಿ ಸುಡಬಹುದು.
• ಡೀಪ್-ಫ್ರೈ ಮಾಡಿದ ತಿನಿಸನ್ನು ದೂರವಿರಿಸಿ.
• ಕಡಿಮೆ-ಕ್ಯಾಲರಿ ಕಡಿಮೆ-ಕೊಬ್ಬು ಇರುವ ಆಹಾರವನ್ನೇ ಕೇಳಿ ಪಡೆಯಿರಿ (ಹೋಟೆಲ್ ಇತ್ಯಾದಿ).
• ಸಭೆ ಸಮಾರಂಭಗಳಲ್ಲಿ ಊಟಕ್ಕೆ ಹೋಗಲು ತಡ ಬೇಡ. ಆಯರೋಗ್ಯಕಾರ ಮೆನು ಬೇಗ ಖಾಲಿಯಾಗುತ್ತದೆ!
• ರೆಸ್ಟೊರಾಂಟಿನಲ್ಲಿ ಜಾಸ್ತಿ ಹೊತ್ತು ಉಳಿದು ಕೊಳೆಯುವ ಆಹಾರ ನಿಮ್ಮ ದೇಹಕ್ಕೂ ಅದೇ ಗತಿ ಉಂಟುಮಾಡುತ್ತದೆ.
• ಭೋಜನದ ಕೊನೆಯಲ್ಲಿ ಸಿಹಿಭಕ್ಷ್ಯಗಳಿಗೆ ಬದಲಾಗಿ ಹಣ್ಣುಗಳನ್ನು ತಿನ್ನಿ.
• ನಿಯಮಿತವಾಗಿ ನಿಮ್ಮ ತೂಕವನ್ನು ಪರೀಕ್ಷಿಸಿ ಮತ್ತು ಅಪರೂಪಕ್ಕೆ ಒಮ್ಮೆಯಾದರೂ ನಿಮ್ಮ ದೇಹದ ಕೊಬ್ಬಿನ ಪ್ರಮಾಣವನ್ನು ತಿಳಿಯಿರಿ.
• ಕಾಲ ಕಾಲಕ್ಕೆ ಆಹರೇತರ ವಿಷಯಗಳಲ್ಲಿ ನಿಮ್ಮನ್ನು ನೀವೇ ಪುರಸ್ಕರಿಸಿಕೊಳ್ಳಿ.
• ಆಹಾರ ವಸ್ತುವನ್ನು ಖರೀದಿಸುವ ಮೊದಲು ಲೇಬಲ್ ಓದಿ ಕ್ಯಾಲರಿ ಬಗ್ಗೆ ಅರಿಯಿರಿ.
• ಟ್ರಾನ್ಸ್-ಕೊಬ್ಬನ್ನು ದೂರವಿಡಿ.
• ಸೂಪರ್ ಮಾರ್ಕೆಟ್ಗಳಲ್ಲಿ ಜಂಕ್ ಆಹಾರ ಕೊಳ್ಳುವ ಬಯಕೆಯನ್ನು ಹತ್ತಿಕಿ.
• ಚಿಕ್ಕ/ಚೊಕ್ಕ ತಿಂಡಿಯ ಪೊಟ್ಟಣಗಳನ್ನೇ ಆಯ್ಕೆ ಮಾಡಿ. ದೊಡ್ಡ/ಮೆಗಾ/ಜಂಬೋ/ಕಾಂಬೋ ಆಫರ್ ಗಳ ಬಲೆಗೆ ಬೀಳಬೇಡಿ.
• ಇನ್ನೋರ್ವ ಕುಟುಂಬದ ಸದಸ್ಯರೊಂದಿಗೆ ಶಾಪಿಂಗ್ ಮಾಡಿ ನೀವು ಏನನ್ನು ಖರೀದಿಸುತ್ತೀರಿ ಎಂಬುದರ ಮೇಲೆ ನಿಯಂತ್ರಣ ಇಡಬಹುದು.
• ಪ್ರತಿ ತಿಂಗಳೂ ಬಳಕೆ ಮಾಡುವ ಕೊಬ್ಬಿನ ಅಂಶದ (ಎಣ್ಣೆ/ಬೆಣ್ಣೆ/ತುಪ್ಪ ಇತ್ಯಾದಿ) ಲೆಕ್ಕ ಇಡಿ.
ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667
ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM to be announced