ಗ್ರೋತ್ (ಬೆಳವಣಿಗೆಯ) ಹಾರ್ಮೋನಿನ ಕೊರತೆ ಸಣ್ಣ ನಿಲುವಿನ ಕಾರಣಗಳಲ್ಲಿ ಒಂದಾಗಿದೆ. ಗ್ರೋತ್ ಹಾರ್ಮೋನು ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿ ತಯಾರಿಸುವ ಒಂದು ಪ್ರೋಟಿನ್ ಆಗಿದೆ. ಗ್ರೋತ್ ಹಾರ್ಮೋನು ಮಗುವಿನ ಸಾಮಾನ್ಯ ಹಾಗೂ ಆರೋಗ್ಯಕರವಾದ ಬೆಳವಣಿಗೆಗೆ ಅವಶ್ಯವಾಗಿದೆ. ಗ್ರೋತ್ ಹಾರ್ಮೋನು ಕೊರತೆ ಉಳ್ಳ ಮಕ್ಕಳು ಉಳಿದಂತೆ ಸಂಪೂರ್ಣವಾಗಿ ಆರೋಗ್ಯಪೂರ್ಣವಾಗಿ ಇರಬಹುದು. ಕೆಲವೊಮ್ಮೆ ಗ್ರೋತ್ ಹಾರ್ಮೋನ್ ಕೊರತೆ ಬೇರೊಂದು ಹೆಚ್ಚಿನ ಸಮಸ್ಯೆಯ ಭಾಗವಾಗಿರಬಹುದು ಉದಾ: ಒಂದು ಮೆದುಳಿನ ಶಸ್ತ್ರಚಿಕಿತ್ಸೆ ನಂತರ ಉಂಟಾದ ಹಾನಿ. ಈ ಎಲ್ಲಾ ಸಂಧರ್ಭಗಳಲ್ಲೂ ಗ್ರೋತ್ ಹಾರ್ಮೋನ್ ಕೊಟ್ಟಲ್ಲಿ ಅದು ಆರೋಗ್ಯಪೂರ್ಣವಾದ ಬೆಳವಣಿಗೆಯನ್ನು ಪುನಃಸ್ಥಾಪಿಸಿ ಮಗುವು ತನ್ನ ಪೂರ್ಣ ಪ್ರಮಾಣದ ಎತ್ತರವನ್ನು ಗಳಿಸಲು ಸಹಾಯ ಮಾಡುತ್ತದೆ.
ಚಿಕಿತ್ಸೆಗಾಗಿ ಬಳಸಲಾಗುವ ಬೆಳವಣಿಗೆಯ ಹಾರ್ಮೋನು ಪುನರ್ಸಂಯೋಜಿತ DNA ತಂತ್ರಜ್ಞಾನದಿಂದ ತಯಾರಿಸಲಾಗುತ್ತದೆ. ಈ ಪುನರ್ಸಂಯೋಜಿತ ಎಂದು ಕರೆಯಲ್ಪಡುವ ಹಾರ್ಮೋನ್ ದೇಹದಲ್ಲಿ ಸಾಮಾನ್ಯವಾಗಿ ತಯಾರಾಗುವ ಗ್ರೋತ್ ಹಾರ್ಮೋನ್ -ನ ಯಥಾವತ್ತಾದ ನಕಲಾಗಿದೆ. ಇದು ಪಿಟ್ಯುಟರಿ ಸಾರಗಳು ಬಳಸಿಕೊಂಡು ಹಳೆಯ ವಿಧಾನಗಳಲ್ಲಿ ತಯಾರಿಸುವ ಹಾರ್ಮೋನ್ -ಗಿಂತ ಭಿನ್ನವಾಗಿದ್ದು ಯಾವುದೇ ಮಲಿನತೆಯ ಅಪಾಯವನ್ನು ಹೊಂದಿರುವುದಿಲ್ಲ. ಇದನ್ನು ಸಾಮಾನ್ಯವಾಗಿ ಮಲಗುವ ವೇಳೆಯಲ್ಲಿ, ಪ್ರತಿ ದಿನವೂ ಚುಚ್ಚುಮದ್ದಿನ ರೂಪದಲ್ಲಿ ನೀಡಬೇಕು. ಇದು ಇನ್ಸುಲಿನ್-ನ ಪೆನ್ನಿನಂತೆ ಹೋಲುವದು. ಅತಿ ಸಪೂರವಾದ ಸೂಜಿಯನ್ನು ಬಳಸುವುದರಿಂದ ವಾಸ್ತವವಾಗಿ ನೋವುರಹಿತವಾಗಿದೆ. ದುರದೃಷ್ಟವಶಾತ್ ಇದು ಪ್ರೋಟೀನ್ ಆದ್ದರಿಂದ ಹೊಟ್ಟೆಯಲ್ಲಿ ಜೀರ್ಣದ್ರವಗಳಿಂದ ನಾಶವಾಗುತ್ತದೆ; ಆದುದರಿಂದ ಅದನ್ನು ಮಾತ್ರೆ ರೂಪದಲ್ಲಿ ನೀಡಲು ಸಾಧ್ಯವಿಲ್ಲ.
ಪುನರ್ಸಂಯೋಜಿತ ಬೆಳವಣಿಗೆಯ ಹಾರ್ಮೋನನ್ನು ಕಳೆದ ಇಪ್ಪತ್ತು ವರ್ಷಗಳಿಂದ ವ್ಯಾಪಕವಾಗಿ ಬಳಸಲಾಗುತ್ತಿದೆ. ಸರಿಯಾದ ರೋಗ ನಿದಾನ ಮತ್ತು ನುರಿತ ತಜ್ಞರ ಮೇಲ್ವಿಚಾರಣೆಯಲ್ಲಿ ಇದನ್ನು ಬಳಸುವುದರಿಂದ ಅಡ್ಡ ಪರಿಣಾಮಗಳು ಅಪರೂಪ ಹಾಗೂ ಸೌಮ್ಯ ಸ್ವರೂಪದ್ದಾಗಿರುತ್ತವೆ. ವರ್ಷ್ಂಪ್ರತಿ ಲಕ್ಷಕ್ಕೂ ಅಧಿಕ ರೋಗಿಗಳು ಬೆಳವಣಿಗೆಯ ಹಾರ್ಮೋನನ್ನು ಚಿಕಿತ್ಸೆಯ ರೂಪದಲ್ಲಿ ಪಡೆಯುತ್ತಾರೆ .
ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667
ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM to be announced