ಒಂದು ಕ್ಷಣ ಕ್ಲಾಸಿನ ಫೋಟೋವೊಂದನ್ನು ಮನಸ್ಸಿನ್ನಲ್ಲಿ ಚಿತ್ರಿಸಿಕೊಳ್ಳಿ. ಒಂದೇ ವಯಸ್ಸಿನವರಾದರೂ ಈ ಮಕ್ಕಳು ವಿವಿಧ ಆಕಾರ ಮತ್ತು ಗಾತ್ರಗಳನ್ನು ಹೊಂದಿರುವರು! ಕೆಲ ಮಕ್ಕಳು ಪುಟಾಣಿ ಗಳಾಗಿದ್ದರೆ ಮತ್ತೆ ಕೆಲವರು ಮೇಲ್ತರಗತಿಯ ವಿಧ್ಯಾರ್ತಿಯೇನೋ ಎನ್ನುವಷ್ಟು ದೈತ್ಯರು.
ಆದರೂ ಇವರಲ್ಲಿ ಹೆಚ್ಚಿನವರೆಲ್ಲರೂ ಆರೋಗ್ಯಪೂರ್ಣವಾಗಿ ತಮ್ಮದೇ ಆದ ಗತಿಯಲ್ಲಿ ಬೆಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಮ್ಮ ವೈದ್ಯರು ಒಂದು ಮಗುವಿನ ಎತ್ತರ ಮತ್ತು ತೂಕ ಸರಿಯಾಗಿದೆಯೇ, ಅವನು ಅಥವಾ ಅವಳು ಸಾಮಾನ್ಯ ಗತಿಯಲ್ಲಿ ಬೆಳೆಯುತಿದ್ದಾರೆಯೇ ಎಂದು ಹೇಗೆ ನಿರ್ಣಯಿಸುತ್ತಾರೆಂದು ಸೋಜಿಗ ಪಟ್ಟಿದ್ದೀರಾ?
ನಿಮ್ಮ ವೈದ್ಯರು ಅಥವಾ ದಾದಿಯರು ಈ ಕೆಲ ಪಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಬೆಳವಣಿಗೆಯ ಚಾರ್ಟ್ಗಳನ್ನು ಬಳಸುತ್ತಾರೆ.
ಹುಡುಗರಿಗೆ ಮತ್ತು ಹುಡುಗಿಯರಿಗೆ ಬೇರೆಯಾದ ಚಾರ್ಟ್ಗಳು ಇವೆ, ಏಕೆಂದರೆ ಇವರ ಬೆಳವಣಿಗೆಯ ನಮೂನೆ ಗತಿ ಹಾಗೂ ಅಂತಿಮ ಎತ್ತರವೆಲ್ಲವೂ ಬೇರೆಯಾಗಿರುತ್ತದೆ. ನಿಮ್ಮ ಪ್ರದೇಶಕ್ಕೆ ಹಾಗೂ ಜನರಿಗೆ ಸರಿ ಹೊಂದುವ ಚಾರ್ಟ್ಗಳನ್ನು ನಿಮ್ಮ ವೈದ್ಯರು ಆಯ್ಕೆ ಮಾಡುತ್ತಾರೆ.
ಬೆಳವಣಿಗೆಯ ಚಾರ್ಟ್ಗ ಮೇಲೆ ಮಾಡಿದ ಒಂದೇ ಎತ್ತರ ಮತ್ತು ತೂಕದ ಎಣಿಕೆ ಮಗುವು ಕುಬ್ಜವಾಗಿದೆ ಎಂದು ತಿಳಿಯಲು ಸಾಕಾಗಬಹುದಾದರೂ, ಕಾಲಾವಧಿಯಲ್ಲಿ ಮಾಡಿದ ಹಲವಾರು ದಾಖಲೆಗಳು ರೋಗ ಪತ್ತೆ ಹಚ್ಚುವಲ್ಲಿ ಹೆಚ್ಚು ಉಪಯುಕ್ತ. ಆದುದರಿಂದ ನಿಯಮಿತವಾಗಿ ವೈದ್ಯರನ್ನು ಭೇಟಿಯಾಗುವುದು ಅವಶ್ಯ. ಈ ದಾಖಲೆಗಳನ್ನು ವ್ಯಾಖ್ಯಾನಿಸುವಾಗ ನಿಮ್ಮ ಎಂಡೋಕ್ರೇನಾಲಜಿಸ್ಟ್ ಮಗುವಿನ ಒಟ್ಟಾರೆ ಆರೋಗ್ಯ , ಅನುವಂಶಿಕ ಹಿನ್ನೆಲೆ, ತಂದೆ ತಾಯಂದಿರ ಎತ್ತರ ಇತ್ಯ್ಯದಿ.. ಇವೆಲ್ಲವನ್ನೂ ಪರಿಗಣಿಸುವರು.
ಅವಶ್ಯವಾಗಿ, ಈ ಕೆಳಗೆ ಎರಡು ಚಾರ್ಟ್ಗಳಿವೆ, ಒಂದು ಹುಡುಗಿಯರಿಗೆ ಮತ್ತೊಂದು ಹುಡುಗರಿಗೆ.
ಹುಡುಗಿಯರ ಬೆಳವಣಿಗೆಯ ಚಾರ್ಟ:
1. ನಿಮ್ಮ ವಯಸ್ಸಿಗಾಗಿ , X ಅಕ್ಷದತ್ತ ನೋಡಿ
2. ನಿಮ್ಮ ಎತ್ತರ/ತೂಕಕ್ಕಾಗಿ Y ಅಕ್ಷದತ್ತ ನೋಡಿ
3. ಎತ್ತರ/ತೂಕದ ರೇಖಾಚಿತ್ರದ ಛೇದಕ ಬಿಂದುವನ್ನು ನಕ್ಷೆಯಲ್ಲಿ ಗುರುತಿಸಿ.
"ನೀಲಿ " ಬಣ್ಣದ ಪ್ರದೇಶವು ಮಗುವು ತನ್ನ ವಯಸ್ಸಿಗಿಂತ ಗಿಡ್ಡ ಮತ್ತು ಕೃಶವಾಗಿದ್ದಾಳೆಂದು ಹಾಗೂ ಇದಕ್ಕೆ ವೈದ್ಯರ ಗಮನ ಅವಶ್ಯ ಎಂದು ತಿಳಿಸುತ್ತದೆ.
ಹುಡುಗರ ಬೆಳವಣಿಗೆಯ ಚಾರ್ಟ:
1. ನಿಮ್ಮ ವಯಸ್ಸಿಗಾಗಿ , X ಅಕ್ಷದತ್ತ ನೋಡಿ
2. ನಿಮ್ಮ ಎತ್ತರ/ತೂಕಕ್ಕಾಗಿ Y ಅಕ್ಷದತ್ತ ನೋಡಿ
3. ಎತ್ತರ/ತೂಕದ ರೇಖಾಚಿತ್ರದ ಛೇದಕ ಬಿಂದುವನ್ನು ನಕ್ಷೆಯಲ್ಲಿ ಗುರುತಿಸಿ.
"ಕಿತ್ತಳೆ" ಬಣ್ಣದ ಪ್ರದೇಶವು ಮಗುವು ತನ್ನ ವಯಸ್ಸಿಗಿಂತ ಗಿಡ್ಡ ಮತ್ತು ಕೃಶವಾಗಿದ್ದಾನೆಂದು ಹಾಗೂ ಇದಕ್ಕೆ ವೈದ್ಯರ ಗಮನ ಅವಶ್ಯ ಎಂದು ತಿಳಿಸುತ್ತದೆ.
ಪರೀಕ್ಷೆ ಶಂಕಿತ ಕಾರಣದ ಮೇಲೆ ಅವಲಂಬಿಸಿರುತ್ತದೆ. ಈ ಕೆಳಗಿನವುಗಳನ್ನು ಒಳಗೊಂಡಿರಬಹುದು:
ಚಿಕಿತ್ಸೆಯು ಕಾರಣವನ್ನು ಅವಲಂಭಿಸಿದೆ. ಕುಬ್ಜತೆಗೆ ಚಿಕಿತ್ಸೆಯ ಬಗ್ಗೆ ನಮ್ಮ ಮುಂದಿನ ಭಾಗವನ್ನು ಓದಿರಿ..
ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667
ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM 9-Feb