"(ಹಾನಿಯ) ತಡೆಗಟ್ಟುವಿಕೆಯು ಚಿಕಿತ್ಸೆ (ಸರಿಪಡಿಸುವಿಕೆ) ಗಿಂತ ಉತ್ತಮ" ಎಂಬುದು ಬಲ್ಲವರ ಅಂಬೋಣ. ಆದರೆ ಡಯಬೆಟಿಕ್ ಕಾಲಿನ ಬಗ್ಗೆ ಹೇಳುವಾಗ ತಡೆಗಟ್ಟುವಿಕೆಯೇ ಚಿಕಿತ್ಸೆ ಎಂದರೆ ಅತಿಶಯೋಕ್ತಿ ಆಗಲಾರದು.. ಇದನ್ನು ಹೇಗೆ ಮಾಡಬಹುದು ಎಂದು ನೋಡೋಣ.
ನಿಮ್ಮ (ರಕ್ತದಲ್ಲಿರುವ) ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಿ :
ನಿಮ್ಮ ಕಾಲುಗಳ ಕಾಳಜಿ ನಿಮ್ಮ ಮಧುಮೇಹದ ಕಾಳಜಿಯಿಂದ ಆರಂಭ. ನಿಮ್ಮ ವೈದ್ಯರಲ್ಲಿ ನಿಮ್ಮ .ರಕ್ತದ ಸಕ್ಕರೆಯ ಮಟ್ಟ ಎಷ್ಟಿರಬೇಕೆಂಬ ಗುರಿಗಳನ್ನು ಅರಿಯಿರಿ.
ಸರಿಯಾದ ಸಕ್ಕರೆಯ ನಿಯತ್ರಣ ಎಂದರೆ ಕಡಿಮೆ ನರ ತೊಂದರೆ ಹಾಗೂ ಕಡಿಮೆ ಕಾಲಿನ ತೊಂದರೆ.
ನಿಮ್ಮ ಕಾಲುಗಳನ್ನು ಪ್ರತಿನಿತ್ಯವೂ ಪರೀಕ್ಷಿಸಿ:
ಕಾಲು ಕೆಂಪಡರುವಡು, ಉಗುರುಸುತ್ತು, ಮುಳ್ಳು ಚುಚ್ಚಿರುವುದು ಇದೇ ಮುಂತಾದ ಚಿಕ್ಕ ಪುಟ್ಟ ತೂಂದರೆಗಳು, ದೊಡ್ಡ ತೊಂದರೆಯಾಗಿ ಮಾರ್ಪಾಡುವ ಮೊದಲೇ ಕಂಡುಹಿಡಿಯಬಹುದು. ಮಧುಮೇಹದ ನರದ ತೊಂದರೆಯಿಂದಾಗಿ, ಕೆಲವೊಮ್ಮೆ ನಿಮಗೆ ಯಾವುದೇ ರೀತಿಯ ನೋವು ಉಂಟಾಗಲಿಕ್ಕಿಲ್ಲ.
ನಿಮ್ಮ ಕಾಲುಗಳನ್ನು ಬಿಸಿ ಮತ್ತು ತಂಪಿನಿಂದ ರಕ್ಷಿಸಿ:
ಸಮುದ್ರ ಅಥವಾ ನದಿ ತೀರದಲ್ಲಿ, ಬಿಸಿಯಾದ ಕಾಲು ನಡಿಗೆ ನಡೆಯುವಾಗ ಕಡ್ಡಾಯವಾಗಿ ಶೂ/ಅಥವಾ ಚಪ್ಪಲಿ ಧರಿಸಿ. ಚಪ್ಪಲಿ ಧರಿಸಲಾಗದ ಸ್ಥಳಗಳಲ್ಲಿ (ಉದಾ: ದೇವಸ್ಥಾನದ ಅಂಗಳ) ಅತಿ ಬಿಸಿಲಿರುವ ವೇಳೆ ನಡೆಯಬೇಡಿ. ನಿಮ್ಮ ಕಾಲುಗಳನ್ನು ಬಿಸಿಯಾದ ನೀರಿನಲ್ಲಿ ಹಾಕಬೇಡಿ. ಹಾಕುವ ಮೊದಲು ಮಗುವನ್ನು ಸ್ನಾನ ಮಾಡಿಸಲು ಬಳಸುವ ನೀರನ್ನು ಹೇಗೆ ಕೈ ಹಾಕಿ ಪರೀಕ್ಷಿಸುವಿರೋ, ಅದೇ ರೀತಿಯಾಗಿ ಎಷ್ಟು ಬಿಸಿಯಾಗಿದೆ ಎಂದು ಪರೀಕ್ಷಿಸಿ. ಬಿಸಿ ನೀರಿನ ಬಾಟಲಿ, ಹೀಟಿಂಗ್ ಪ್ಯಾಡ್, ವಿದ್ಯುತ್ ಕಂಬಳಿ ಇತ್ಯಾದಿಗಳನ್ನು ಬಳಸಬೇಡಿ. ಇವುಗಳು ನಿಮಗರಿವಿರದಂತೆ ನಿಮ್ಮ ಕಾಲುಗಳನ್ನು ಸುಡಬಹುದು. ಅದೇ ರೀತಿಯಾಗಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಮುಂದಿನ ಸೀಟಿನಲ್ಲಿ ಆಸೀನರಾಗಿದ್ದಾರೆ, ಎಂಜಿನ್ ಅಥವಾ ರೇಡಿಯೇಟರ್ ಮೇಲೆ ಕಾಲು ಇಡಬೇಡಿ ಏಕೆಂದರೆ ಈ ಭಾಗಗಳು ಅತಿಯಾಗಿ ಬಿಸಿಯಾಗಿರಬಹುದು..
ನಿಮ್ಮ ಕಾಲುಗಳ ರಕ್ತ ಸಂಚಾರಕ್ಕೆ ಅನುವು ಮಾಡಿ:
ಕುಳಿತುಕೊಳ್ಳುವಾಗ ನಿಮ್ಮ ಪಾದಗಳನ್ನು ಮೇಲಕ್ಕೆ ಇಡಿ. ನಿಮ್ಮ ಕಲ್ಬೇರಳುಗಳು ಮತ್ತು ಕಣಕಾಲು ಗಂಟುಗಳನ್ನು ನಿಯಮಿತವಾಗಿ ಮೇಲೆ ಮತ್ತು ಕೆಳಗೆ ಚಲಿಸಿರಿ. ದೀರ್ಘ ಕಾಲದವರೆಗೆ ನಿಮ್ಮ ಕಾಲುಗಳನ್ನು ಅಡ್ಡ ಹಾಕಿ (ಕ್ರಾಸ್ ಮಾಡಿ) ಕುಳಿತುಕೊಳ್ಳಬೇಡಿ. ಪ್ರಯಾಣ ಮಾಡುವಾಗ ಚೆನ್ನಾಗಿ ನೀರು ಕುಡಿಯಿರಿ. ಧೂಮಪಾನ ಅಥವಾ ತಂಬಾಕನ್ನು ಇನ್ನಾವುದೇ ರೀತಿಯಲ್ಲಿ ಬಳಸಬೇಡಿ.
ಪ್ರತಿ ಘಂಟೆ ಅಥವಾ ಎರಡು ಘಂಟೆಗೆ ಒಮ್ಮೆ ನಿಮ್ಮ ಕಾಲುಗಳನ್ನು ಪಾದರಕ್ಷೆಗಳಿಂದ ಹೊರಗಿಡಿ. ಆಗ ನಿಮ್ಮ ಕಾಲುಗಳೂ ಉಸಿರಾಡಬಹುದು:
ಬಿಗಿಯಾದ ಶೂಗಳು ನಿಮ್ಮ ಕಾಲುಗಳ ರಕ್ತ ಮತ್ತು ಗಾಳಿಯ ಹರಿಯುವಿಕೆಗೆ ತೊಂದರೆ ಒಡ್ಡಿ ಹಿಸುಕಬಹುದು. ಸಂಗ್ರಹಗೊಂಡ ತೇವಾಂಶ ಫಂಗಸ್ ಸೋಂಕು ಮತ್ತು ಚರ್ಮ ಸುಲಿಯುವಿಕೆ ಉಂಟುಮಾಡಬಹುದು.
ವಿಶೇಷವಾದ ಮಧುಮೇಹಿಗಳ ಪಾದರಕ್ಷೆ ಬಗ್ಗೆ ನಿಮ್ಮ ವೈದ್ಯರಿಂದ ಅರಿಯಿರಿ:
ಸರಿಯಾದ ಮಧುಮೇಹಿಗಳ ಪಾದರಕ್ಷೆ ಬಳಸುವುದರಿಂದ ನಿಮ್ಮ ಕಾಲಿಗೆ ಪೆಟ್ಟಾಗುವುದನ್ನು ತಡೆಯಬಹುದು. ಈಗಾಗಲೇ ಇರುವ ಗಾಯ ಗುಣಮಾಡಲೂ ಇದು ಸಹಕಾರಿ. ನಿಮ್ಮ ಕಾಲಿನ ಬದಲಾಗಿ ಈ ಚಪ್ಪಲಿಗಳೂ ಸವೆಯುತ್ತವೆ ಹಾಗೂ ನಿಮ್ಮ ಅಮೂಲ್ಯ ಕಾಲುಗಳನ್ನು ರಕ್ಷಿಸುತ್ತವೆ.
ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667
ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM to be announced