• [ಮಿಥ್ಯೆ] ನಿಮಗೆ ಅಧಿಕ ತೂಕ ಅಥವಾ ಬೊಜ್ಜು ಇದ್ದಲ್ಲಿ, ನೀವು ಖಚಿತವಾಗಿ ಟೈಪ್-2 ಮಧುಮೇಹ ಹೊಂದುವಿರಿ.
ಅಧಿಕ ತೂಕ / ಸ್ಥೂಲಕಾಯ ಈ ಕಾಯಿಲೆ ಬತರುವ ಅಪಾಯದ ಅಂಶಗಳಲ್ಲಿ ಒಂದು ಮಾತ್ರ. ಟೈಪ್-2 ಮಧುಮೇಹ ಬರಲು ಇನ್ನೂ ಹಲವಾರು ಅಪಾಯದ ಅಂಶಗಳಿವೆ. ಉದಾಃ ಕುಟುಂಬ ಇತಿಹಾಸ, ಜನಾಂಗೀಯತೆ ಮತ್ತು ವಯಸ್ಸು ಕೂಡ ಮಹತ್ವದ ಪಾತ್ರವನ್ನು ವಹಿಸುತ್ತದೆ. ಭಾರತೀಯರು ಜನಾಂಗೀಯವಾಗಿ ಮಧುಮೇಹಕ್ಕೆ ಅತ್ಯಂತ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂಬುದನ್ನೂ ನಾವು ಮರೆಯಬಾರದು. ಟೈಪ್ 2 ಮಧುಮೇಹ ಹೊಂದಿರುವ ಅನೇಕ ಜನರು ಸಾಮಾನ್ಯ ತೂಕ ಹೊಂದಿರುತ್ತಾರೆ ಅಥವಾ ಕೇವಲ ಮಧ್ಯಮ ತೂಕ ಹೊಂದಿರುತ್ತಾರೆ.
• [ಮಿಥ್ಯೆ] ಹೆಚ್ಚು ಸಕ್ಕರೆ ತಿನ್ನುವುದು ಮಧುಮೇಹಕ್ಕೆ ಕಾರಣವಾಗುತ್ತದೆ.
ಇಲ್ಲ, ಹಾಗಾಗುವುದಿಲ್ಲ. ಸಕ್ಕರೆ ಅಥವಾ ಸಿಹಿ ತಿಂಡಿ (ತೂಕವನ್ನು ಹೆಚ್ಚಿಸುವುದಕ್ಕಿಂತ ಹೊರತುಪಡಿಸಿ) ಮಧುಮೇಹವನ್ನು ಉಂಟು ಮಾಡುವುದಿಲ್ಲ. ಟೈಪ್-1 ಮಧುಮೇಹ ಅನುವಂಶೀಯ ಮತ್ತು ಅಪರಿಚಿತ ಅಂಶಗಳಿಂದ ಉಂಟಾಗುತ್ತದೆಂದು ತಿಳಿಯಲಾಗಿದೆ. ಸಾಮಾನ್ಯವಾಗಿ ಕಂಡುಬರುವ ಮಧುಮೇಹ ಟೈಪ್-2 ಅನುವಂಶೀಯ ಮತ್ತು ಜೀವನಶೈಲಿಗಳು ಉಂಟಾಗುತ್ತದೆ.
• [ಮಿಥ್ಯೆ] ಕೇವಲ ವಸಯಸ್ಕರಲ್ಲಿ ಮಾತ್ರ ಟೈಪ್-2 ಮಧುಮೇಹ ಕಂಡುಬರುತ್ತದೆ.
ಇತ್ತೀಚಿನ ದಿನಗಳಲ್ಲಿ 8 ವರ್ಷ ವಯಸ್ಸಿಗೂ ಚಿಕ್ಕ ಮಕ್ಕಳಲ್ಲಿ ಟೈಪ್-2 ಮಧುಮೇಹ ರೋಗನಿರ್ಣಯ ಮಾಡಲಾಗುತ್ತದೆ. ಮಕ್ಕಳಲ್ಲಿ ಮಧುಮೇಹ ತಡೆಗಟ್ಟುವ ಸಲುವಾಗಿ, ಪೋಷಕರು ಇಡೀ ಕುಟುಂಬದಲ್ಲಿ ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸಲು ಯತ್ನಿಸಬೇಕು.
ವಿಡಿಯೋ ಆಟಗಳು ಮತ್ತು ಟಿವಿ ಸಮಯವನ್ನು ಕಡಿಮೆ ಮಾಡಿ, ನಿಯಮಿತವಾಗಿ ದೈಹಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕು. ಜಂಕ್ ಆಹಾರಗಳನ್ನು ಕಡಿಮೆಗೊಳಿಸಬೇಕು.
• [ಮಿಥ್ಯೆ] ಮಧುಮೇಹ ಸಾಮಾನ್ಯ ಆದರೆ ಗಂಭೀರ ಕಾಯಿಲೆ ಅಲ್ಲ.
ಮಧುಮೇಹ ಸಾಮಾನ್ಯ ಮತ್ತು ಗಂಭೀರ ಮಾತ್ರವಲ್ಲ; ಇದು ಬಹಳ ವೆಚ್ಚದಾಯಕವಾಗಬಹುದು. ಹೆಚ್ಚಿನ ವೆಚ್ಚಗಳು ದೀರ್ಘಾವಧಿಯಲ್ಲಿ ಮಧುಮೇಹದಿಂದ ಉಂಟಾಗಬಹುದಾದ ತೊಡಕುಗಳಿಂದ ಆಗುತ್ತದೆ. ಇದನ್ನು ಸರಿಯಾದ ಮಧುಮೇಹ ನಿವಾರಣೆ ಮತ್ತು ನಿರ್ವಹಣೆ ವಿಧಾನಗಳಿಂದ ತಪ್ಪಿಸಬಹುದಾಗಿದೆ.
• [ಮಿಥ್ಯೆ] ನಿಮಗೆ ಮಧುಮೇಹ ಇದೆಯೆಂದಾದರೆ ನಿಮಗೆ ಖಂಡಿತವಾಗಿಯೂ ಇನ್ಸುಲಿನ್ ಚುಚ್ಚುಮದ್ದಿನ ಅಗತ್ಯವಿದೆ ಎಂದರ್ಥ!
ಸುಳ್ಳು!. ಟೈಪ್-2 ಮಧುಮೇಹಿಗಳಲ್ಲಿ ಇದು ನಿಜವಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಸರಿಯಾದ ಆಹಾರ, ವ್ಯಾಯಾಮ, ಮತ್ತು ಅಗತ್ಯವಿದ್ದರೆ ಬಾಯಿಯ ಮೂಲಕ ತಿನ್ನುವ ಔಷಧಿಗಳಿಂದ ಟೈಪ್-2 ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಬಹುದು. ಇನ್ಸುಲಿನ್ ಚುಚ್ಚುಮದ್ದು ಮುಂದುವರಿದ ಕಾಯಿಲೆ ಮತ್ತು ವಿಶೇಷ ಸಂದರ್ಭಗಳಲ್ಲಿ ಮಾತ್ರ ಅಗತ್ಯವಾಗಿದೆ. ಜೀವನಶೈಲಿ ಬದಲಾವಣೆ ಮಧುಮೇಹ ನಿಯಂತ್ರಣಕ್ಕೆ ಕೀಲಿಕೈ!
|
|
|
|
• [ಮಿಥ್ಯೆ] ಇನ್ಸುಲಿನ್ ಮಧುಮೇಹದ ತೊಡಕುಗಳಿಗೆ ಕಾರಣವಾಗಬಹುದು.
ದುರದೃಷ್ಟವಶಾತ್ ವರ್ಷಾಂತರಗಳಿಂದ ಇನ್ಸುಲಿನ್ ಅನಾವಶ್ಯಕ ಟೀಕೆಗೆ ಗುರಿಯಾಗಿದೆ. ಇದು ಸರಿಯಲ್ಲ. ಇನ್ಸುಲಿನ್ ನೈಸರ್ಗಿಕವಾದ ಹಾರ್ಮೋನ್ ಮತ್ತು ಬಹುಶಃ ಅತಿಹೆಚ್ಚು ಸುರಕ್ಷಿತವಾದ ಔಷಧಗಳಲ್ಲಿ ಒಂದಾಗಿದೆ.
• [ಮಿಥ್ಯೆ] ಒಮ್ಮೆ ನನ್ನ ಮಧುಮೇಹ ನಿಯಂತ್ರಣಗೊಂಡ ನಂತರ ಔಷಧಿ / ಚುಚ್ಚುಮದ್ದು ತೆಗೆದುಕೊಳ್ಳುವದನ್ನು ನಿಲ್ಲಿಸಬಹುದು.
|
|
|
ಇಲ್ಲ! ನಿಮ್ಮ ಮಧುಮೇಹ ನಿಯಂತ್ರಣಗೊಂಡ ನಂತರವೂ , ನಿಮಗೆ "ನಾನು ಚೆನ್ನಾಗಿದ್ದೇನೆ" ಎಂದೆನಿಸಿದರೂ, ಔಷಧಿ / ಚುಚ್ಚುಮದ್ದುಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. |
• [ಮಿಥ್ಯೆ] ವಿಶೇಷ ಮಧುಮೇಹ ಆಹಾರವನ್ನು ಯಥೇಚ್ಛವಾಗಿ ಮಧುಮೇಹ ರೋಗಿಗಳು ತಿನ್ನಬಹುದು.
ಮಧುಮೇಹದ ಮತ್ತು "ಡೈಯಟೆಟಿಕ್" ವಿಶೇಷ ಆಹಾರಗಳು ಸಾಮಾನ್ಯವಾಗಿ ಯಾವುದೇ ಪ್ರಯೋಜನವನ್ನು ಒದಗಿಸುವದಿಲ್ಲ!. ಇವುಗಳಲ್ಲಿ ಹೆಚ್ಚಿನವುಗಳು ರಕ್ತದ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತವೆ ಮಾತ್ರವಲ್ಲದೇ ಇವುಗಳು ಹೆಚ್ಚು ದುಬಾರಿಯಾಗಿರುತ್ತವೆ. ಅವುಗಳು ಸಕ್ಕರೆ ಆಲ್ಕೋಹಾಲ್ಗಳು ಹೊಂದಿರುವ ವೇಳೆ ವೀರೇಚಕವಾಗಿ ಕೂಡ ಅಡ್ಡ-ಪರಿಣಾಮ ಬೀರಬಹುದು.
• [ಮಿಥ್ಯೆ] ಮಧುಮೇಹವಿದ್ದವರು ಹಣ್ಣುಗಳನ್ನು ತಿನ್ನಬಾರದು.
ಹಣ್ಣು ಆರೋಗ್ಯಕರ ಆಹಾರವೇನೋ ನಿಜ. ಇದು ಬಹಳಷ್ಟು ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಆದರೆ ಸಕ್ಕರೆಯನ್ನೂ ಹೊಂದಿರುತ್ತದವೆ! ಆದುದರಿಂದ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನುವ ಬದಲಾಗಿ ಅವನ್ನು ನಿಮ್ಮ ಊಟ ಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು. ಕೆಲವು ಹಣ್ಣುಗಳು ಅಧಿಕ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ನೀವು ತಿನ್ನಬಹುದಾದ ಹಣ್ಣುಗಳ ವಿಧಗಳು, ಪ್ರಮಾಣ ಮತ್ತು ಆವರ್ತನದ ಬಗ್ಗೆ ನಿಮ್ಮ ವೈದ್ಯರು / ಆಹಾರ ತಜ್ನರ ಸಲಹೆ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ಮಧುಮೇಹ ಮತ್ತು ಹಣ್ಣುಗಳು ವಿಭಾಗವನ್ನೂ ಸಂದರ್ಶಿಸಬಹುದು.
• [ಮಿಥ್ಯೆ] ಕೆಲ ಔಷಧಿಗಳನ್ನು ತಿನ್ನುವುದರಿಂದ ಮಧುಮೇಹವನ್ನು ಶಾಶ್ವತ್ವಾಗಿ ಗುಣಪಡಿಸಬಹುದು
ಇಲ್ಲ, ಯಾವುದೇ ರೀತಿಯ ಮದ್ದು ಅಥವಾ ಗಿಡಮೂಲಿಕೆ ಇತ್ಯಾದಿಗಳಿಂದ ಮಧುಮೇಹವನ್ನು ಶಾಶ್ವತ್ವಾಗಿ ಗುಣಪಡಿಸಲಾಗದು. ಆದರೆ ತಜ್ನ ವೈದ್ಯರ ಮಾರ್ಗದರ್ಶನದಲ್ಲಿ ಇದನ್ನು ನಿಯಂತ್ರಣದಲ್ಲಿಡಬಹುದು.