ಮಧುಮೇಹದ ಬಗ್ಗೆ ಎಫ್ಎಕ್ಯೂ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 
 
 
 

ಮಧುಮೇಹದ ಬಗ್ಗೆ ಎಫ್.ಎ.ಕ್ಯೂ. (FAQ)

ಮಧುಮೇಹವು ಇಂದಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಓರ್ವ ವ್ಯಕ್ತಿಯು ತನಗೆ ಮಧುಮೇಹವಿದೆ ಎಂದು ತಿಳಿದ ಕೂಡಲೇ, ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಕಾಡುತ್ತವೆ, ಆದರೆ ಸೂಕ್ತ ಉತ್ತರಕ್ಕಾಗಿ ಎಲ್ಲಿ ಹುಡುಕಬೇಕಂಬ ಸಂದೇಹವೂ ಉಂಟಾಗುತ್ತದೆ. ನಿಮ್ಮ  ಮನಸ್ಸಿನಲ್ಲಿರಬಹುದಾದ ಮಧುಮೇಹ ಸಂಭದಿಸಿದ ಸಾಮಾನ್ಯ ಸಂದೇಹ ನಿವಾರಣೆಗೆ ಇದು ಸೂಕ್ತವಾದ ಸ್ಥಳ.

• ಮಧುಮೇಹ ಎಂದರೇನು?

 
 
 

ಮಧುಮೇಹ ನಿಮ್ಮ ರಕ್ತದ ಗ್ಲೂಕೋಸ್, ಅಥವಾ ಸಕ್ಕರೆ ಮಟ್ಟಗಳು ತುಂಬಾ ಅಧಿಕವಾಗಿರುವ ಒಂದು ಕಾಯಿಲೆ.

 

• ಮಧುಮೇಹದ ವಿಧಗಳು ಯಾವುವು?

ಮಧುಮೇಹ 1 ನೆಯ ವಿಧ

    • ಸುಮಾರು 10% ಮಧುಮೇಹಿಗಳಲ್ಲಿ ಈ ವಿಧದ ಮಧುಮೇಹ ಕಂಡುಬರುವುದು.
    • ಸಾಮಾನ್ಯವಾಗಿ 30 ವರ್ಷಕ್ಕಿಂತ ಮೊದಲು ಕಂಡುಬರುತ್ತದೆ.
    • ಸಾಮಾನ್ಯವಾಗಿ ತೆಳ್ಳಗಿನ ಅಥವಾ ಸಹಜ ತೂಕದ ಜನರಲ್ಲಿ  ಕಂಡುಬರುತ್ತದೆ.

ಮಧುಮೇಹ 2 ನೆಯ ವಿಧ

  • ಸುಮಾರು 90% ಮಧುಮೇಹಿಗಳಲ್ಲಿ ಈ ವಿಧದ ಮಧುಮೇಹ ಕಂಡುಬರುವುದು.
  • ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುತ್ತದೆ.
  • ಸಾಮಾನ್ಯವಾಗಿ ಅತಿಯಾದ ತೂಕವುಳ್ಳ ಜನರಲ್ಲಿ ಕಂಡುಬರುತ್ತದೆ.

ಗರ್ಭದಾರಣೆಯ ಮಧುಮೇಹ

  • ಭಾರತದಲ್ಲಿ 4% to 21% ಗರ್ಭಿಣಿಯರಲ್ಲಿ ಕಂಡುಬರುತ್ತದೆ
  • ಪ್ರಸವದ ನಂತರ ಸಾಮಾನ್ಯವಾಗಿ ಸರಿ ಹೋಗುತ್ತದೆ.
  • ನಂತರ ಜೀವನದಲ್ಲಿ ಶಾಶ್ವತ ಮಧುಮೇಹ 50% ಮಹಿಳೆಯರಲ್ಲಿ ಕಂಡುಬರಬಹುದು.

ಮಧುಮೇಹದ ಇತರ ಅಪರೂಪದ ವಿಧಗಳಿವೆ.

 

• ಮಧುಮೇಹ ಹೇಗೆ ಉಂಟಾಗುತ್ತದೆ?

 
 
 
ಮೇದೋಜೀರಕ ಗ್ರಂಥಿ

ಮೇದೋಜೀರಕ ಗ್ರಂಥಿ

ಹೊಟ್ಟೆ ಕೆಳಗೆ ಇರುವ ಮೇದೋಜೀರಕ ಗ್ರಂಥಿ ಇನ್ಸುಲಿನ್ ಎಂಬ ಹಾರ್ಮೋನ್ ಉತ್ಪಾದಿಸುತ್ತದೆ. ಈ ಹಾರ್ಮೋನು ಆಹಾರ ಸೇವನೆ ನಂತರ ಅಂಗಾಂಶಗಳಲ್ಲಿ ಸಕ್ಕರೆಯನ್ನು ಸಂಗ್ರಹಿಸಲು ನಿರ್ದೇಶಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಶರೀರದಲ್ಲಿ ಇನ್ಸುಲಿನ್ ಕೊರತೆ ಅಥವಾ ದೇಹದಲ್ಲಿ ಇನ್ಸುಲಿನ್ ಪ್ರತಿರೋಧಕಕತೆ (ರೆಸಿಸ್ಟನ್ಸ್) ಅಧಿಕವಾದಲ್ಲಿ ಮಧುಮೇಹ ಉಂಟಾಗುತದೆ.

 

• ಮಧುಮೇಹ ಸಾಮಾನ್ಯವಾಗಿ ಯಾರಲ್ಲಿ ಕಂಡುಬರುತ್ತದೆ?

 
 
 

ಮಧುಮೇಹ (ಡಯಾಬಿಟಿಸ್) ಸಾಮಾನ್ಯವಾಗಿ: ದೈಹಿಕ ವ್ಯಾಯಾಮ ಇಲ್ಲದವರಲ್ಲಿ, ಅನಾರೋಗ್ಯಕರ ಆಹಾರ ಪದ್ಧತಿ ಅನುಸರಿಸುವರಲ್ಲಿ, ಅತಿಯಾದ ತೂಕ ಉಳ್ಳವರಲ್ಲಿ, ಗರ್ಭಿಣಿಯಾಗಿದ್ದಾಗ ಮಧುಮೇಹ ಕಂಡುಬಂದ ಮಹಿಳೆಯರಲ್ಲಿ, ಅಧಿಕ ರಕ್ತದೊತ್ತಡ (BP) ಹೊಂದಿರುವ ಸಂಬಂಧಿಕರಿರುವ ಜನರಲ್ಲಿ ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ವರ್ಗದ ಜನರು ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿಸುವುದು ಸೂಕ್ತ.

 

• ಡಯಾಬಿಟಿಸ್ ಒಂದು ಸಾಮಾನ್ಯ ಸಮಸ್ಯೆಯೇ?

ಹೌದು, ಭಾರತದ ವಯಸ್ಕರಲ್ಲಿ 10 ಜನರಲ್ಲಿ ಒಬ್ಬರು ಮಧುಮೇಹದಿಂದ ಬಳಲುತ್ತಿರಬಹುದು, ಆದರೆ ರೋಗಿಗೆ ಆರಂಭಿಕ ಹಂತಗಳಲ್ಲಿ ಇದು ತಿಳಿದಿರುವುದಿಲ್ಲ.

• ಮಧುಮೇಹದ ರೋಗ ಲಕ್ಷಣಗಳೇನು?

 
 
 

  • ಪದೇ ಪದೇ ಮೂತ್ರ ವಿಸರ್ಜನೆ.
  • ವಿಪರೀತ ಬಾಯಾರಿಕೆ.
  • ವಿವರಿಸಲಾಗದ ತೂಕ ನಷ್ಟ.
  • ವಿಪರೀತ ಹಸಿವು.
  • ದೃಷ್ಟಿ ಮಸುಕಾಗುವಿಕೆ.
  • ಕೈ ಅಥವಾ ಕಾಲುಗಳ ಅಡಿಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ.
  • ಯಾವಗಲೂ ಸುಸ್ತಾಗಿರುವ ಅನುಭವ.
  • ಶುಷ್ಕ ಚರ್ಮ ಹಾಗೂ ಚರ್ಮದಲ್ಲಿ ತುರಿಕೆ.
  • ಗಾಯಗಳು ಗುಣವಾಗದಿರುವುದು.
  • ಈಸ್ಟ್ ಸೋಂಕು.

Diabetes-symtoms-kannada

  • ನೆನಪಿಡಿ : ಪ್ರಾಥಮಿಕ ಹಂತಗಳಲ್ಲಿ, ಹಲವಾರು ವರ್ಷ ರೋಗಿಗೆ ಮಧುಮೇಹದ ಯಾವುದೇ ಲಕ್ಷಣಗಳು ಇಲ್ಲದಿರಬಹುದು!
 

 

• ನನಗೆ ಮಧುಮೇಹ ಇದೆಯೇ ಎಂದು ಹೇಗೆ ತಿಳಿಯಬಹುದು?

 
 
 

ಬೆಳಿಗ್ಗೆ ಯಾವುದೇ ಆಹಾರವನ್ನು ಸೇವಿಸದೇ (ಉಪವಾಸ) ರಕ್ತದಲ್ಲಿನ ಸಕ್ಕರೆಯ ಪರೀಕ್ಷೆ ಎರಡು ಬಾರಿ ಮಾಡಿದಾಗ ಅದು 126mg/dl ಗಿಂತಲೂ ಅಧಿಕವಾಗಿದ್ದಲ್ಲಿ ನಿಮಗೆ ಮಧುಮೇಹ ಇದೆ ಎಂದು ವೈದ್ಯರು ಸೂಚಿಸುವರು. ಹಾಗೆಯೇ ನಿಮ್ಮ ಗ್ಲೈಕೊಸಿಲೇಟೆಡ್ ಹಿಮೊಗ್ಲೊಬಿನ್ (HbA1C) ಮೌಲ್ಯವು > 6.5% ಗಿಂತ ಹೆಚ್ಚಿದ್ದಲ್ಲಿ ಅದು ಮಧುಮೇಹದ ಸಂಕೇತವಾಗಿದೆ.

ಗ್ಲುಕೋಸ್ ಟಾಲರೆನ್ಸ್ ಪರೀಕ್ಷೆಃ 75 ಗ್ರಾಂ ಗ್ಲುಕೋಸ್ ತೆಗೆದುಕೊಂಡ ಎರಡು ಅವಧಿಗಳ ನಂತರ ರಕ್ತದಲ್ಲಿನ ಸಕ್ಕರೆಯ ಮಾಡಿದಾಗ ಅದು 200mg/dl ಗಿಂತಲೂ ಅಧಿಕವಾಗಿದ್ದಲ್ಲಿ ನಿಮಗೆ ಮಧುಮೇಹ ಇದೆ ಎಂದತರ್ಥ.

 

ಫಾಸ್ಟಿಂಗ್ ಪ್ಲಾಸ್ಮಾ ಗ್ಲೂಕೋಸ್ ಮಧುಮೇಹ ರೋಗನಿರ್ಣಯ ಗ್ಲುಕೋಸ್ ಟಾಲರೆನ್ಸ್ ಪರೀಕ್ಷೆ  ಮಧುಮೇಹ ರೋಗನಿರ್ಣಯ
 ಖಾಲಿ ಹೊಟ್ಟೆಯ ಪ್ಲಾಸ್ಮಾ ಸಕ್ಕರೆ
(FPG)
 ಗ್ಲುಕೋಸ್ ಟಾಲರೆನ್ಸ್ ಪರೀಕ್ಷೆ
(OGTT)

 
 

• ನಾನು ಸಿಹಿ (ತಿಂಡಿ) ತಿನ್ನುವುವುದೇ ಇಲ್ಲ. ನನಗೆ ಮಧುಮೇಹ ಬರಲು ಹೇಗೆ ಸಾಧ್ಯ?

 
 
 

ಸಕ್ಕರೆ ಅಥವಾ ಸಿಹಿ ತಿಂಡಿ (ತೂಕವನ್ನು ಹೆಚ್ಚಿಸುವುದಕ್ಕಿಂತ ಹೊರತುಪಡಿಸಿ) ಮಧುಮೇಹವನ್ನು ಉಂಟು ಮಾಡುವುದಿಲ್ಲ. ಮಧುಮೇಹ 1ನೇ ವಿಧ ಅನುವಂಶೀಯ ಮತ್ತು ಅಪರಿಚಿತ ಅಂಶಗಳಿಂದ ಉಂಟಾಗುತ್ತದೆಂದು ತಿಳಿಯಲಾಗಿದೆ. ಸಾಮಾನ್ಯವಾಗಿ ಕಂಡುಬರುವ 2ನೇ ವಿಧದ ಮಧುಮೇಹ ಅನುವಂಶೀಯವಾಗಿ ಮತ್ತು ಜೀವನಶೈಲಿಗಳಿಂದ ಉಂಟಾಗುತ್ತದೆ.

 

• ಮಧುಮೇಹವನ್ನು ಶಾಷ್ವತವಾಗಿ ಗುಣಪಡಿಸಬಹುದೆ?

 
 
 
  • ಸಾಮನ್ಯವಾಗಿ ಕಂಡುಬರುವ 2ನೇ ವಿಧ ಮಧುಮೇಹಕ್ಕೆ ಯಾವುದೇ ಶಾಷ್ವತವಾದ ಚಿಕಿತ್ಸೆ ಇಲ್ಲ. ಮಧುಮೇಹವನ್ನು ಶಾಷ್ವತವಾಗಿ ಗುಣಪಡಿಸುವ ನಿಟ್ಟಿನಲ್ಲಿ ಸಾಕಸ್ಟು ಸಂಶೋಧನೆ ಪ್ರಗತಿಯಲ್ಲಿದೆ.
  • ಮಧುಮೇಹವನ್ನು ಸೂಕ್ತ ಆಹಾರ, ಆರೋಗ್ಯಕರವಾದ ತೂಕ ಕಾಯ್ದುಕೊಳ್ಳುವುದು ಹಾಗೂ ನಿಯಮಿತವಾದ ವ್ಯಾಯಾಮದಿಂದ ಬರದಂತೆ ತಡೆಗಟ್ಟಬಹುದು.
  • ಅಂತೆಯೇ ಮಧುಮೇಹವುಳ್ಳವರು ಸೂಕ್ತ ಜೀವನ ಶೈಲಿ ಹಾಗೂ ಸರಿಯಾದ ಚಿಕಿತ್ಸೆಯಿಂದ ಯಾವುದೇ ತೊಡಕುಗಳಿಲ್ಲದ ಆರೋಗ್ಯವಂತ ಜೀವನವನ್ನು ನಡೆಸಬಹುದು.
 

 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

ಡಾ. ಗುರುರಾಜ ರಾವ್
ಸ್ವೀತ್ ಕ್ಲಿನಿಕ್
ನೆಲಮಹಡಿ, ಕಾವೆರಿ ಬಿಲ್ಡಿಂಗ್,
ಸಂಜೀವಿನಿ ಕ್ಲಿನಿಕ್ ಎದುರು
ಯುನಿಟಿ ಆಸ್ಪತ್ರೆ ಹತ್ತಿರ
ಫಳ್ನೀರ್ ರಸ್ತೆ
ಮಂಗಳೂರು
ಕರ್ನಾಟಕ

ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667

ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM to be announced