ಇನ್ಸುಲಿನ್ ಸೂಜಿಗಳ ಹೋಲಿಕೆ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 

ಎಲ್ಲಾ ಸೂಜಿಗಳು ಒಂದೇ ತೆರನಲ್ಲ!

 
 
ಇನ್ಸುಲಿನ್ ಸೂಜಿಗಳ ಬಗ್ಗೆ ಮಾಹಿತಿ

 

ಇಂದು ಇನ್ಸುಲಿನ್ ಸಿರಿಂಜ್ ಮತ್ತು ಇನ್ಸುಲಿನ್ ಪೆನ್ಸ್ನಲ್ಲಿ ನಮಗೆ ಅನೇಕ ಆಯ್ಕೆಗಳಿವೆ. ಆದರೆ ಎವಲ್ಲವುಗಳಲ್ಲಿ ಅತಿ ಮುಖ್ಯವಾದ ಭಾಗ ಸೂಜಿ. ಈ ಸಿರಿಂಜ್ ಅಥವಾ ಪೆನ್ನಿನಲ್ಲಿ ಬಳಕೆ ಮಾಡಿದ ಸೂಜಿಯು ನಿಮ್ಮ ಒಟ್ಟಾರೆ ಅನುಭವ ಮತ್ತು ಸಂತೃಪ್ತಿ ಅಥವಾ ಅಸಂತೃಪ್ತಿಯನ್ನು ನಿರ್ಧರಿಸುತ್ತದೆ.

 

ಇಂದು ನಾವು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ನಮಗೆ ದೊರಕುವ ಇನ್ಸುಲಿನ್ ಸಿರಿಂಜ್-ಗಳನ್ನು ಹೋಲಿಸಿ ನೋಡೋಣ. ಇಲ್ಲಿ ನಮ್ಮ ಪ್ರಮುಖ ಗಮನ ಬಿಂದು ಸೂಜಿಯು. ಚಿತ್ರದಲ್ಲಿ ಕಾಣಿಸುವ ಝೂಮ್ ಮಾಡಲಾದ ಸೂಜಿಗಳ ತುದಿಗಳ ಮೇಲೆ ಗಮನ ಹರಿಸಿ.

 

insulin syringe needles comapred

● ಗಮನಿಸಿ: ಸೂಜಿಗಳು ಸ್ಪಷ್ಟವಾಗಿ ಗೋಚರಿಸುವ ಸಲುವಾಗಿ ಚಿತ್ರವನ್ನು ಝೂಮ್ ಮಾಡಲಾಗಿದೆ.
● ವಾಸ್ತವದಲ್ಲಿ ಬರಿಕಣ್ಣಿಗೆ ಸರಿಯಾಗಿ ಕಾಣದಿರುವಸ್ಟು ಈ ಸೂಜಿಗಳು ತೆಳುವಾಗಿವೆ. 

 

  • BD ಅಲ್ಟ್ರಾಫೈನ್ II ಅತ್ಯಂತ ತೆಳುವಾಗಿದೆ; ಮತ್ತು ಹೆಚ್ಚು ಟೊಳ್ಳಾಗಿದೆ (ಒಂದು ಅನನುಕೂಲವೆಂದರೆ ಇದು ಸುಲಭವಾಗಿ ಬಾಗಬಹುದು). ತುದಿ ಹಲವಾರು ಕೋನಗಳಲ್ಲಿ ಬಿವೆಲ್ ಆಗಿದೆ. ಅದೇ ರೀತಿಯಾಗಿ ಚರ್ಮವನ್ನು ಸುಲಭವಾಗಿ ಒಳಹೊಕ್ಕಲು ಸೂಜಿಯ ಮೇಲ್ಮೈಗೆ ವಿಷೇಶವಾದ ಕೋಟಿಂಗ್ ಮಾಡಲಾಗಿದೆಯೆಂದು ಕಂಪೆನಿಯು ಹೇಳಿಕೊಳ್ಳುತ್ತದೆ.
  • ಡಿಸ್ಪೋವ್ಯಾನ್™ ಸೂಜಿ ಸ್ವಲ್ಪ ದಪ್ಪನಾದ ಶಾಫ್ಟ್ ಹೊಂದಿದೆ; ತುದಿಯು ಇದೀಗ ನಾವು ನೋಡಿದ BD ಸೂಜಿಗೆ ಹೋಲಿಸಿದರೆ, ದಪ್ಪವಾಗಿರುತ್ತದೆ. ಇದರಿಂದ ಸೂಜಿ ಚುಚ್ಚುವಾಗ ಹೆಚ್ಚಿನ ಒತ್ತಡ ಬೇಕಾಗಬಹುದು(ಮತ್ತು ನೋವಿಗೆ ಕಾರಣವಾಗಬಹುದು).
  • ನಿರ್ಲೈಫ್™ ಸಿರಿಂಜ್ ಅತಿ ಉದ್ದದ ಸೂಜಿ ಹೊಂದಿದೆ.(ಉದ್ದನೆಯ ಸೂಜಿಗಳು ಬಳಕುವ ಸಾಧ್ಯ್ತತೆ ಹೆಚ್ಚು). ಅದೇ ರೀತಿಯಾಗಿ ತುದಿಯು ಸಾಲಿಡ್ ಆಗಿ ಬಿವೆಲ್ ಆಗಿದೆ; ಇದರ ವಿನ್ಯಾಸ ಸೂಜಿಗಿಂತ ಹೆಚ್ಚಾಗಿ ಈಟಿಗೆ ಹೋಲುತ್ತದೆ. ಮೇಲಾಗಿ ಸೂಜಿಯ ಬ್ಯಾರೆಲ್ ಅದೆಷ್ಟು ದಪ್ಪವಾಗಿದೆಯೆಂದರೆ ತುದಿಯಲ್ಲಿ ಕೇವಲ ಒಂದು ಬಿರುಕಿನಂತೆ ಕಾಣಿಸುತ್ತದೆ. ಕೆಲವೊಮ್ಮೆ ತುದಿಯು ಏರಿಳಿತಗಳುಳ್ಳ ಅಂಚುಗಳನ್ನು ಹೊಂದಿರುತ್ತದೆ. ನಮ್ಮ ಅವಲೋಕನಗಳಿಗೆ ಅನುಗುಣವಾಗಿ ರೋಗಿಗಳು ಈ ಸಿರಿಂಜ್ ಅಷ್ಟು ಆರಾಮದಾಯಕವಲ್ಲವೆಂದು ಹೇಳುತ್ತಾರೆ.

 

ಯಾವ ಇನ್ಸುಲಿನ್ ಸಿರಿಂಜ್ ನಿಮಗೆ ಉತ್ತಮ?

ನಿಮ್ಮ ಈಗಿನ ಸಿರಿಂಜ್ ನಿಮಗೆ ನೋವನ್ನುಂಟು ಮಾದುತ್ತಿದ್ದಲ್ಲಿ, BD ಅಲ್ಟ್ರಾಫೈನ್ II ಉಪಯೋಗಿಸುವುದರಿಂದ ನಿಮಗೆ ಲಾಭವಾಗಬಹುದು. ಆದರೆ ಇದು ಚಿಕ್ಕ ಪಟ್ಟಣಗಳು ​​ಅಥವಾ ನಗರಗಳಲ್ಲಿ ವ್ಯಾಪಕವಾಗಿ ಲಭ್ಯವಿಲ್ಲದಿರಬಹುದು.

BD ಅಲ್ಟ್ರಾಫೈನ್ II ಸೂಜಿ ಪದೇಪದೇ ಬಾಗಿ ತೊಂದರೆಯಾಗುತಿದ್ದರೆ, ನೀವು ಡಿಸ್ಪೋವ್ಯಾನ್ ಸಿರಿಂಜ್ ಉಪಯೋಗಿಸಬಹುದು. ಇದರ ದರವೂ ಕಡಿಮೆ. ಯಾವಾಗಲೂ ಸೀಲ್ ಆದ ಪ್ಯಾಕ್ಗಳನ್ನೇ ಕೊಳ್ಳಿರಿ.

ಸೀಲ್ ಇಲ್ಲದ ಬಿಡಿ ಸೂಜಿಗಳನ್ನು ಯಾವತ್ತೂ ಬಳಸದಿರಿ. ಸೂಜಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹೆಪಟೈಟಿಸ್-ಬಿ ಮತ್ತು ಏಯ್ಡ್ಸ್ ತಡೆಗಟ್ಟಿ.


ಸೂಜಿಯನ್ನು ಮುಟ್ಟುವುದುದು ಅಥವಾ ಉಜ್ಜುವುದರಿಂದ ಚರ್ಮದ ಸೋಂಕು ಉಂಟಾಗಬಹುದು.

ಇನ್ಸುಲಿನ್ ಸಿರಿಂಜೋ ಅಥವಾ ಪೆನ್ನೋ??

ಇನ್ಸುಲಿನ್ ಪೆನ್-ಗಳನ್ನು ಸುಲಭವಾಗಿ ಬಳಸಬಹುದು ಮತ್ತು ಜೊತೆಗೆ ಕೊಂಡುಹೋಗಬಹುದು. ಅದಕ್ಕಿಂತ ಮೇಲಾಗಿ ಪೆನ್ನಿನ ಸೂಜಿಯು ಸಿರಿಂಜಿನ ಸೂಜಿಗಿಂತ ತುಂಬಾ ಸಪೂರವಾಗಿರುತ್ತದೆ ಹಾಗೂ ಗಿಡ್ಡವಾಗಿರುತ್ತವೆ. ಕಂಪೆನಿಗಳು ಹೆಚ್ಚು ಕಮ್ಮಿ ನೋವೇ ಇಲ್ಲದೆ ಚುಚ್ಚುಮದ್ದನ್ನು ತೆಗೆದುಕೊಳ್ಳಬಹುದೆಂದು ಹೇಳುತ್ತವೆ.

ಸಿರಿಂಜ್-ಗಳಲ್ಲಿ ಸೂಜಿಯು ಜೋಡಿಸಲ್ಪಟ್ಟಿರುವುದರಿಂದ ನಮಗೆ ಸಿರಿಂಜಿನ ಹೊರತಾಗಿ ಯಾವುದೇ ಅಯ್ಕೆ ಇರುವದಿಲ್ಲ, ಆದರೆ ಇನ್ಸುಲಿನ್ ಪೆನ್-ಗಳಲ್ಲಿ ನಮಗೆ ಬೇಕಾದ ಸೂಜಿಯನ್ನು ನಾವು ಜೋಡಿಸಿಕೊಳ್ಳಬಹುದು.       

ಎಷ್ಟೆಲ್ಲ ಅನುಕೂಲಗಳಿದ್ದರೂ ಎಷ್ಟೋ ರೋಗಿಗಳಿಗೆ ಇದರ ಅರಿವಿರುವುದಿಲ್ಲ. ಆದ್ದರಿಂದ ಇನ್ದು ನಾವು ಭಾರತದಲ್ಲಿ ನಮಗೆ ಸಾಮನ್ಯವಾಗಿ ಲಭ್ಯವಿರುವ ಸೂಜಿಗಳ ಕಡೆಗೆ ಗಮನ ಹರಿಸೋಣ.

ಇನ್ಸುಲಿನ್ ಪೆನ್ ಸೂಜಿಗಳ ಹೋಲಿಕೆ

Insulin-Pen-Needle-vs-Insulin-Syringe

ನಾವೀಗ ಇನ್ಸುಲಿನ್ ಪೆನ್ ಸೂಜಿಯನ್ನು ಸಿರಿಂಜ್ ಸೂಜಿಯ ಜೊತೆಗೆ ದೃಶ್ಯಾತ್ಮಕವಾಗಿ ಹೋಲಿಸಿ ನೋಡೋಣ. ಚಿತ್ರದಲ್ಲಿ BD ಅಲ್ಟ್ರಾಫೈನ್ II ಸಿರಿಂಜ್ ಸೂಜಿಯನ್ನು ಹಾಗೂ BD ಅಲ್ಟ್ರಾಫೈನ್ II ಪೆನ್ ಸೂಜಿಯನ್ನು ಪಕ್ಕ ಪಕ್ಕದಲ್ಲಿ ನೋಡಬಹುದು. ನಿಸ್ಸಂಶಯವಾಗಿಯೂ ಪೆನ್ ಸೂಜಿಯು ಗಿಡ್ಡ ಹಾಗೂ ಸಪೂರವಾಗಿದೆ.

ಆದರೆ ಇನ್ಸುಲಿನ್ ಪೆನ್, ಸೀಸೆ ಮತ್ತು ಸಿರಿಂಜ್ ಇನ್ಸುಲಿನ್-ಗಿಂತ ದುಬಾರಿ ಎಂಬ ವಿಚಾರವನ್ನೂ ತಿಳಿಯಬೇಕು.

 

ಯಾವ ಪೆನ್ ಸೂಜಿ ಅತ್ಯುತ್ತಮ?

ನಾವು ಬಯಸಿದರೂ ಇದಕ್ಕೆ ನೇರವಾದ ಒಂದೇ ಉತ್ತರವಿಲ್ಲ. ಸರ್ವೇಸಾಮನ್ಯವಾಗಿ ಸಿರಿಂಜ್-ಗೆ ಹೋಲಿಸಿದಲ್ಲಿ ಪೆನ್ ಸೂಜಿಗಳು ಸಪೂರವಾಗಿರುತ್ತವೆ. BD-ಯು Novofine-ಗಿಂತ ಸಪೂರವಾಗಿರುವ (32G) ಸೂಜಿಯನ್ನು ಹೊಂದಿದೆ. ಹೆಚ್ಚುಕಮ್ಮಿ ಈ ಸೂಜಿಗಳು ನೊವನ್ನು ಉಂಟುಮಾಡುವದೇ ಇಲ್ಲ. ಆದರೆ ಸೂಜಿಯು ಮೊಂಡಾಗಿ ಹಾಳಾಗದಂತೆ ನೋಡಿಕೊಳ್ಳಲು ಹೆಚ್ಚು ಕಾಳಜಿ ಅವಶ್ಯಕ.

ಗಿಡ್ದನೆಯ ಸೂಜಿಗಳೂ ಲಭ್ಯ, ಆದರೆ ನೀವು ದಪ್ಪ ಚರ್ಮ ಹೊಂದಿದ್ದರೆ, ಅದು ಸಾಕಸ್ಟು ಆಳಕ್ಕಿಳಿಯದೇ ಚರ್ಮ ಜಜ್ಜಿದಂತಾಗಬಹುದು. ನಿಮಗೆ ಅತ್ಯಂತ ಸೂಕ್ತವಾದುದನ್ನು ಅಯ್ದುಕೊಳ್ಳಲು ನಿಮ್ಮ ವೈದ್ಯರ ಸಹಾಯ ಪಡೆಯಿರಿ.

ಸುರಕ್ಷಿತವಾಗಿರಿ! ನಿಮ್ಮ ಇನ್ಸುಲಿನ್, ಸಿರಿಂಜ್, ಪೆನ್, ಅಥವಾ ಸೂಜಿಯನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳದಿರಿ.

ಈ ರೀತಿಯಾಗಿ ಇಂದು ನಾವು ಹಲವಾರು ರೀತಿಯ ಇನ್ಸುಲಿನ್ ಸಿರಿಂಜ್ ಹಾಗೂ ಪೆನ್ ಸೂಜಿಗಳ ಬಗ್ಗೆ ತಿಳಿದುಕೊಂಡೆವು. ಎಲ್ಲಾ ಸೂಜಿಗಳೂ ಒಂದೇ ತೆರನಾದುವುಗಳಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ನಿಮ್ಮ ಗೆಳೆಯರನ್ನು (ಪೆನ್/ಸೂಜಿಗಳನ್ನು) ಜಾಣ್ಮೆಯಿಂದ ಆಯ್ಕೆ ಮಾಡಿರಿ ಎಂದು ಹೇಳುತ್ತ ನನ್ನ ಲೇಖನವನ್ನು ಕೊನೆಗೊಳಿಸುತ್ತಿದ್ದೇನೆ.

 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

ಡಾ. ಗುರುರಾಜ ರಾವ್
ಸ್ವೀತ್ ಕ್ಲಿನಿಕ್
ನೆಲಮಹಡಿ, ಕಾವೆರಿ ಬಿಲ್ಡಿಂಗ್,
ಸಂಜೀವಿನಿ ಕ್ಲಿನಿಕ್ ಎದುರು
ಯುನಿಟಿ ಆಸ್ಪತ್ರೆ ಹತ್ತಿರ
ಫಳ್ನೀರ್ ರಸ್ತೆ
ಮಂಗಳೂರು
ಕರ್ನಾಟಕ

ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667

ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM to be announced