ವಿಟಮಿನ್-ಡಿ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 

ವಿಟಮಿನ್-ಡಿ

ವಿಟಮಿನ್-ಡಿ ಬಗ್ಗೆ ಸಂಭಾಷಣೆ ರೇಡಿಯೋ ಮಿರ್ಚಿ

ಡಾ. ಗುರುರಾಜ ರಾವ್ ರೇಡಿಯೋ ಮಿರ್ಚಿ 98.3 FM ನಲ್ಲಿ

ವಿಟಮಿನ್-ಡಿ ಮತ್ತು ನಿಮ್ಮ ಆರೋಗ್ಯ

 

ವಿಟಮಿನ್-ಡಿ ಎಂದರೇನು, ಮತ್ತು ಅದು ನಮ್ಮ ಆರೋಗ್ಯಕ್ಕೆ ಹೇಗೆ ಮುಖ್ಯವಾಗಿರುತ್ತದೆ?

ವಿಟಾಮಿನ್ ಡಿ ನಮ್ಮ ಆರೋಗ್ಯ ರಕ್ಷಣೆಗೆ ಅವಶ್ಯಕವಾಗಿರುವ ಒಂದು ಪೋಷಕಾಂಶ. ವಿಟಾಮಿನ್ ಡಿ ನಾವು ತಿನ್ನುವ ಆಹಾರದಲ್ಲಿರುವ ಕ್ಯಾಲ್ಸಿಯಂ ಶರೀರಕ್ಕೆ ಸೇರಿ, ಮೂಳೆಗಳನ್ನು ಪುನಃರೂಪಿಸುವ/ಪುನರುಜ್ಜೀವನಗೊಳಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಅದೇ ರೀತಿಯಾಗಿ ಶರೀರದ ಇನ್ನೂ ಅನೇಕ ಕ್ರಿಯೆಗಳಲ್ಲಿ ಪಾತ್ರ ವಹಿಸುತ್ತದೆ ಉದಾ: ರೋಗ ನಿರೋಧಕತೆ (immunity), ಹೃದಯ ಮತ್ತು ರಕ್ತನಾಳಗಳಲ್ಲಿ, ಸ್ನಾಯುಗಳ ಬೆಳವಣಿಗೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ, ಮೆದುಳಿನ ಬೆಳವಣಿಗೆಗೂ ಸಹಕಾರಿ.

ಕೊರತೆಯುಳ್ಳವರಲ್ಲಿ ಮಧುಮೇಹ ( Diabetes), ಪ್ರಿ-ಡಯಾಬೆಟಿಸ್ (prediabetes), ಹೃದಯಾಘಾತ, ಅಧಿಕ ರಕ್ತದೊತ್ತಡ (BP), ಆಟೋಇಮ್ಮ್ಯೂನ್ (autoimmune) ಕಾಯಿಲೆಗಳಾದ ರುಮೆಟಾಯ್ಡ್ ಆರ್ಥ್ರೈಟಿಸ್, ಮಲ್ಟಿಪಲ್ ಸ್ಕ್ಳಿರೋಸಿಸ್ (multiple sclerosis), ಮೂಳೆಗಳ ಮುರಿತಕ್ಕೆ ಕಾರಣವಾಗಬಹುದಾದ ಆಸ್ಟಿಯೋಪೋರೊಸಿಸ್/ ಆಸ್ಟಿಯೋಮಲೇಷಿಯಾ, cancer, ಇತ್ಯಾದಿಗಳು ಕಂಡುಬರಬಹುದು.

ವಿಟಾಮಿನ್ ಡಿ ಕೊರತೆಗೆ ಸಾಮಾನ್ಯ ಕಾರಣಗಳೇನು?

ಬಿಸಿಲು

ಸೌರ ಕಿರಣಗಳು ವಿಟಮಿನ್-ಡಿ ಯ ಪ್ರಮುಖ ಮೂಲ

ವಿಟಾಮಿನ್ ಡಿ-ಯನ್ನು ಸೌರ ವಿಟಾಮಿನ್ ಎಂದು ನಾವು ಕರೆಯಬಹುದು, ಏಕೆಂದರೆ, ಬಿಸಿಲು ನಮ್ಮ ಚರ್ಮದ ಮೇಲೆ ಬಿದ್ದಾಗ, ಆದಲ್ಲಿರುವ UV-B ಕಿರಣಗಳಿಂದ, ನಮ್ಮ ಚರ್ಮದಲ್ಲಿ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಸೌರ ಕಿರಣಗಳೇ ನಮ್ಮ ದೇಹದಲ್ಲಿ ವಿಟಮಿನ್-ಡಿ ಉತ್ಪಾದನೆಯಾಗಲು ಪ್ರಮುಖ ಮೂಲ. ನಮ್ಮ ಅಹಾರದಲ್ಲಿ ಸಾಕಸ್ಟು ವಿಟಮಿನ್-ಡಿ ದೊರಕುವುದು ಕಷ್ಟಸಾಧ್ಯ. ಯಾವುದೇ ಸನ್ ಸ್ಕ್ರೀನ್ ಬಳಸದೇ ಬೆಳಗ್ಗಿನ 10 ರಿಂದ ಮಧ್ಯಾಹ್ನ 3ಘಂಟೆಯ ಮಧ್ಯದಲ್ಲಿ ಕೈ ಕಾಲು, ಬೆನ್ನುಗಳನ್ನು ಬಿಸಿಲಿಗೊಡ್ಡಿದರೆ ಸಾಕಷ್ಟು ವಿಟಮಿನ್ ಡಿ ಪಡೆಯಬಹುದು. ಆದರೆ ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯದಿಂದ, ನಾವು 10-3 ಆಫೀಸಿನಲ್ಲೋ ಶಾಲಾ ಕಾಲೇಜುಗಳಲ್ಲೋ ಕಳೆಯುತ್ತೇವೆ, ಕಾರಿಗೆ ಟಿಂಟ್, ಮೈಗೆ ಸನ್ ಸ್ಕ್ರೀನ್ ಬಳಸುವ ಈ ರೀತಿಯ ನಗರ ಜೀವನ ಶೈಲಿಗಳಿಂದ ಇದು ಕಸ್ಟಕರ.

ನಮಗೆ ಸಾಮಾನ್ಯವಾಗಿ ತಿಳಿದಿರುವಂತೆ ವಿಟಮಿನ್-ಡಿ ಕೊರತೆಯು ಮೂಳೆಗಳ ಕ್ಷೀಣಿಸುವಿಕೆ ಅಥವಾ ಆಸ್ಟಿಯೋಪೋರೋಸಿಸ್ ಮತ್ತು ರಿಕೆಟ್ಸ್ ಉಂಟುಮಾಡುತ್ತದೆ. ಆದರೆ ಇತ್ತೀಚಿನ ಕೆಲವು ವರದಿಗಳ ಪ್ರಕಾರ ವಿಟಮಿನ್-ಡಿ ಕೊರತೆಯು ಮಧುಮೇಹಿಗಳಲ್ಲಿ ಹೆಚ್ಚಾಗಿ ಕಂಡಿಬರುತ್ತದೆ. ಅದು ಹೌದಾದಲ್ಲಿ,ಈ ಕೊರತೆಯು ಮಧುಮೇಹದ ಮೇಲೆ ಅಥವಾ ಅದರ ಚಿಕಿತ್ಸೆಯ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?  

ಹೌದು, ಕೆಲವು ಸಮೀಕ್ಷೆಗಳ ಪ್ರಕಾರ ಡಯಬೇಟಿಸ್ ಇದ್ದವರಲ್ಲಿ ಮಾತ್ರವಲ್ಲ, 50% ಭಾರತೀಯರಲ್ಲಿ  ವಿಟಾಮಿನ್ ಡಿ-ಯ ಕೊರತೆ ಇದೆ ಎಂದು ಅಂದಾಜಿಸಲಾಗಿದೆ. ವಿಟಾಮಿನ್ ಡಿ-ಯ ಕೊರತೆಯಿಂದ insulin resistance ಹೆಚ್ಚಾಗಿ insulin ಉತ್ಪತ್ತಿ ಕಮ್ಮಿಯಾಗಿ ಡಯಬೇಟಿಸ್-ಗೆ ಹಾಗೂ metabolic syndrome-ಗೆ  ಕಾರಣವಾಗಬಹುದು.  ಅದೇ ರೀತಿಯಾಗಿ ಡಯಬೇಟಿಸ್ ಅಥವಾ ಮಧುಮೇಹ ಉಳ್ಳವರಲ್ಲಿ ವಿಟಾಮಿನ್ ಡಿ-ಯ ಕೊರತೆಯಿಂದ ರಕ್ತದಲ್ಲಿ ಸಕ್ಕರೆಯ ನಿಯಂತ್ರಣ ಕಷ್ಟಕರವಾಗಬಹುದು. ಹಾರ್ಟ್ ಮತ್ತು ಕಿಡ್ನಿ ತೊಂದರೆ ಕೂಡ ಹೆಚ್ಚಾಗಿ ಕಂಡುಬರಬಹುದು. ವಿಟಾಮಿನ್ ಡಿ-ಯ ಕೊರತೆ ಇರುವ ಮಕ್ಕಳಲ್ಲಿ ಟೈಪ್-1 ಡಯಬೇಟಿಸ್ ಹಚ್ಚಾಗಿ ಕಂಡುಬಂದಿದೆ.

ಮಧುಮೇಹ ರೋಗಿಗೆ ವಿಟಾಮಿನ್ ಡಿ (ಸಪ್ಪ್ಲಿಮೆಂಟ್ಸ್) ಕೊಡುವುದರಿಂದ ಲಾಭಗಳೇನು?

ಜನಸಾಮಾನ್ಯರಲ್ಲಿ ವಿಟಾಮಿನ್ D ಕೊರತೆ ನೀಗಿಸುವುದರಿಂದ ಡಯಬೇಟಿಸ್ ಬರುವ , ಸಾಧ್ಯತೆ ಕಡಿಮೆಯಾಗಿಸಬಹುದು. ಡಯಬೇಟಿಸ್ ಇದ್ದವರಲ್ಲಿ ವಿಟಾಮಿನ್-ಡಿ ಸಪ್ಲ್ಲಿಮೆನ್ಟ್ಸ (supplements) ಕೊಡುವುದರಿಂದ, ಮಧುಮೇಹ (blood sugar) ಕಂಟ್ರೋಲ್ ಮಾಡುವ ಔಷಧಿಗಳು ಹೆಚ್ಚು ಸಮರ್ಥವಾಗಿ ಕೆಲಸ ಮಾಡಬಹುದು. ಆಸ್ಟಿಯೋಪೋರೋಸಿಸ್-ನಿಂದ ಉಂಟಾಗುವ fractures ತಡೆಗಟ್ಟಬಹುದು. ಡಯಬೇಟಿಸ್-ನಿಂದಾಗಿ  ಕಿಡ್ನಿ ತೊಂದರೆ ಇರುವ ರೋಗಿಗಳಿಗೆ active ವಿಟಾಮಿನ್ D ಮತ್ತು calcium supplements ಅವಶ್ಯಕ.  ವಿಟಾಮಿನ್ D ಕೊರತೆ ಮಧುಮೇಹಿಗಳಲ್ಲಿ ಹೃದಯ, ಕಣ್ಣು ಕಿಡ್ನಿ ತೊಂದರೆ ಹಚ್ಚುತ್ತದೆ, ಆದುದರಿಂದ ಕೊರತೆ ಸರಿಪಡಿಸಿದರೆ ಈ ತೊಂದರೆ ತಡೆಗಟ್ಟಬಹುದೆಂದು ನಾವು ಭಾವಿಸುತ್ತೇವೆ. ಅದರೂ ಈ ನಿಟ್ಟಿನ್ನಲ್ಲಿ ಹಚ್ಚಿನ ಸೋಶೋಧನೆ ಅಗತ್ಯ.   

ನಿಮ್ಮ ರೋಗಿಗಳಿಗೆ ವಿಟಮಿನ್-ಡಿ ಕೊರತೆಯನ್ನು ನೀಗಿಸಲು ಯಾವ ರೀತಿಯ ಸಲಹೆ ನೀಡುತ್ತೀರಿ?

ಸರಿಯಾದ ರೀತಿಯಲ್ಲಿ ಬಿಸಿಲಿಗೆ ಒಡ್ಡಿಕೊಳ್ಳುವುದು. ಹಾಲಿನ ಉತ್ಪನ್ನಗಳ ಬಳಕೆ. ವಿಟಮಿನ್ ಡಿ ಕೊರತೆಯ ಸಾಧ್ಯತೆ ಇರುವವರಲ್ಲಿ – ಮಧುಮೇಹಿಗಳು, ವಯಸ್ಕರು, ಮಹಿಳೆಯರಲ್ಲಿ ಋತುಬಂಧದ ನಂತರ, ಕ್ಯಾಲ್ಶಿಯಂ ಹಾಗೂ ವಿಟಮಿನ್ ಡಿ  supplements ಕೊಡುವುದು ಉತ್ತಮ.  ವಿಟಮಿನ್ ಡಿ ಕೊರತೆ ಇದ್ದ ರೋಗಿಗಳು, ತಜ್ನ ವೈದ್ಯರಿಂದ  ವಿಟಮಿನ್ ಡಿ ಯನ್ನು  (ಕೊಲೆಕ್ಯಾಲ್ಸಿಫೆರ್ರಾಲ್) ಹುಡಿಯ ರೂಪದಲ್ಲಿ ಅಥವಾ injection ಮೂಲಕ ತೆಗೆದುಕೊಳ್ಳಬೇಕು.

ಸಾರ್ವಜನಿಕರಿಗೆ ನಿಮ್ಮ ಕಿವಿಮಾತೇನು?

ಬಿಸಿಲಿನತ್ತ ಒಲವಿರಲಿ. ಸನ್ ಸ್ಕ್ರೀನ್ ಮಿತವಿರಲಿ. ಪೌಸ್ತಿಕ ಆಹಾರವನ್ನು ತಿನ್ನಿರಿ. ಮಧುಮೇಹಿಗಳೇ, ನಿಮ್ಮ ವೈದ್ಯರಲ್ಲಿ ವಿಟಮಿನ್ ಡಿ ಬಗ್ಗೆ ಸಮಾಲೋಚಿಸಿ.

 

ಇದು ದಿನಾಂಕ 12-1-2014 ರಂದು ಮಂಗಳೂರಿನ ರೇಡಿಯೋ ಮಿರ್ಚಿಯಲ್ಲಿ ಮೂಡಿಬಂದ ಡಾ. ಗುರುರಾಜ ರಾವ್ ಅವರ ಸಂವಾದದ ಆಯ್ದ ಭಾಗವಾಗಿದೆ.

 

 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

ಡಾ. ಗುರುರಾಜ ರಾವ್
ಸ್ವೀತ್ ಕ್ಲಿನಿಕ್
ನೆಲಮಹಡಿ, ಕಾವೆರಿ ಬಿಲ್ಡಿಂಗ್,
ಸಂಜೀವಿನಿ ಕ್ಲಿನಿಕ್ ಎದುರು
ಯುನಿಟಿ ಆಸ್ಪತ್ರೆ ಹತ್ತಿರ
ಫಳ್ನೀರ್ ರಸ್ತೆ
ಮಂಗಳೂರು
ಕರ್ನಾಟಕ

ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667

ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM to be announced