ಮಧುಮೇಹವು ಇಂದಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಓರ್ವ ವ್ಯಕ್ತಿಯು ತನಗೆ ಮಧುಮೇಹವಿದೆ ಎಂದು ತಿಳಿದ ಕೂಡಲೇ, ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಕಾಡುತ್ತವೆ, ಆದರೆ ಸೂಕ್ತ ಉತ್ತರಕ್ಕಾಗಿ ಎಲ್ಲಿ ಹುಡುಕಬೇಕಂಬ ಸಂದೇಹವೂ ಉಂಟಾಗುತ್ತದೆ. ನಿಮ್ಮ ಮನಸ್ಸಿನಲ್ಲಿರಬಹುದಾದ ಮಧುಮೇಹ ಸಂಭದಿಸಿದ ಸಾಮಾನ್ಯ ಸಂದೇಹ ನಿವಾರಣೆಗೆ ಇದು ಸೂಕ್ತವಾದ ಸ್ಥಳ.
ಮಧುಮೇಹ ನಿಮ್ಮ ರಕ್ತದ ಗ್ಲೂಕೋಸ್, ಅಥವಾ ಸಕ್ಕರೆ ಮಟ್ಟಗಳು ತುಂಬಾ ಅಧಿಕವಾಗಿರುವ ಒಂದು ಕಾಯಿಲೆ.
ಮಧುಮೇಹ 1 ನೆಯ ವಿಧ
ಮಧುಮೇಹ 2 ನೆಯ ವಿಧ
ಗರ್ಭದಾರಣೆಯ ಮಧುಮೇಹ
ಮಧುಮೇಹದ ಇತರ ಅಪರೂಪದ ವಿಧಗಳಿವೆ.
ಮೇದೋಜೀರಕ ಗ್ರಂಥಿ
ಹೊಟ್ಟೆ ಕೆಳಗೆ ಇರುವ ಮೇದೋಜೀರಕ ಗ್ರಂಥಿ ಇನ್ಸುಲಿನ್ ಎಂಬ ಹಾರ್ಮೋನ್ ಉತ್ಪಾದಿಸುತ್ತದೆ. ಈ ಹಾರ್ಮೋನು ಆಹಾರ ಸೇವನೆ ನಂತರ ಅಂಗಾಂಶಗಳಲ್ಲಿ ಸಕ್ಕರೆಯನ್ನು ಸಂಗ್ರಹಿಸಲು ನಿರ್ದೇಶಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಶರೀರದಲ್ಲಿ ಇನ್ಸುಲಿನ್ ಕೊರತೆ ಅಥವಾ ದೇಹದಲ್ಲಿ ಇನ್ಸುಲಿನ್ ಪ್ರತಿರೋಧಕಕತೆ (ರೆಸಿಸ್ಟನ್ಸ್) ಅಧಿಕವಾದಲ್ಲಿ ಮಧುಮೇಹ ಉಂಟಾಗುತದೆ.
ಮಧುಮೇಹ (ಡಯಾಬಿಟಿಸ್) ಸಾಮಾನ್ಯವಾಗಿ: ದೈಹಿಕ ವ್ಯಾಯಾಮ ಇಲ್ಲದವರಲ್ಲಿ, ಅನಾರೋಗ್ಯಕರ ಆಹಾರ ಪದ್ಧತಿ ಅನುಸರಿಸುವರಲ್ಲಿ, ಅತಿಯಾದ ತೂಕ ಉಳ್ಳವರಲ್ಲಿ, ಗರ್ಭಿಣಿಯಾಗಿದ್ದಾಗ ಮಧುಮೇಹ ಕಂಡುಬಂದ ಮಹಿಳೆಯರಲ್ಲಿ, ಅಧಿಕ ರಕ್ತದೊತ್ತಡ (BP) ಹೊಂದಿರುವ ಸಂಬಂಧಿಕರಿರುವ ಜನರಲ್ಲಿ ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ವರ್ಗದ ಜನರು ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿಸುವುದು ಸೂಕ್ತ.
ಹೌದು, ಭಾರತದ ವಯಸ್ಕರಲ್ಲಿ 10 ಜನರಲ್ಲಿ ಒಬ್ಬರು ಮಧುಮೇಹದಿಂದ ಬಳಲುತ್ತಿರಬಹುದು, ಆದರೆ ರೋಗಿಗೆ ಆರಂಭಿಕ ಹಂತಗಳಲ್ಲಿ ಇದು ತಿಳಿದಿರುವುದಿಲ್ಲ.
|
|
|||||
|
||||||
|
ಬೆಳಿಗ್ಗೆ ಯಾವುದೇ ಆಹಾರವನ್ನು ಸೇವಿಸದೇ (ಉಪವಾಸ) ರಕ್ತದಲ್ಲಿನ ಸಕ್ಕರೆಯ ಪರೀಕ್ಷೆ ಎರಡು ಬಾರಿ ಮಾಡಿದಾಗ ಅದು 126mg/dl ಗಿಂತಲೂ ಅಧಿಕವಾಗಿದ್ದಲ್ಲಿ ನಿಮಗೆ ಮಧುಮೇಹ ಇದೆ ಎಂದು ವೈದ್ಯರು ಸೂಚಿಸುವರು. ಹಾಗೆಯೇ ನಿಮ್ಮ ಗ್ಲೈಕೊಸಿಲೇಟೆಡ್ ಹಿಮೊಗ್ಲೊಬಿನ್ (HbA1C) ಮೌಲ್ಯವು > 6.5% ಗಿಂತ ಹೆಚ್ಚಿದ್ದಲ್ಲಿ ಅದು ಮಧುಮೇಹದ ಸಂಕೇತವಾಗಿದೆ.
ಗ್ಲುಕೋಸ್ ಟಾಲರೆನ್ಸ್ ಪರೀಕ್ಷೆಃ 75 ಗ್ರಾಂ ಗ್ಲುಕೋಸ್ ತೆಗೆದುಕೊಂಡ ಎರಡು ಅವಧಿಗಳ ನಂತರ ರಕ್ತದಲ್ಲಿನ ಸಕ್ಕರೆಯ ಮಾಡಿದಾಗ ಅದು 200mg/dl ಗಿಂತಲೂ ಅಧಿಕವಾಗಿದ್ದಲ್ಲಿ ನಿಮಗೆ ಮಧುಮೇಹ ಇದೆ ಎಂದತರ್ಥ.
![]() |
![]() |
|
ಖಾಲಿ ಹೊಟ್ಟೆಯ ಪ್ಲಾಸ್ಮಾ ಸಕ್ಕರೆ (FPG) |
ಗ್ಲುಕೋಸ್ ಟಾಲರೆನ್ಸ್ ಪರೀಕ್ಷೆ (OGTT) |
ಸಕ್ಕರೆ ಅಥವಾ ಸಿಹಿ ತಿಂಡಿ (ತೂಕವನ್ನು ಹೆಚ್ಚಿಸುವುದಕ್ಕಿಂತ ಹೊರತುಪಡಿಸಿ) ಮಧುಮೇಹವನ್ನು ಉಂಟು ಮಾಡುವುದಿಲ್ಲ. ಮಧುಮೇಹ 1ನೇ ವಿಧ ಅನುವಂಶೀಯ ಮತ್ತು ಅಪರಿಚಿತ ಅಂಶಗಳಿಂದ ಉಂಟಾಗುತ್ತದೆಂದು ತಿಳಿಯಲಾಗಿದೆ. ಸಾಮಾನ್ಯವಾಗಿ ಕಂಡುಬರುವ 2ನೇ ವಿಧದ ಮಧುಮೇಹ ಅನುವಂಶೀಯವಾಗಿ ಮತ್ತು ಜೀವನಶೈಲಿಗಳಿಂದ ಉಂಟಾಗುತ್ತದೆ.
Timings: 8AM - 1PM & 3.30PM - 7.30PM.
2/4th Fridays and Sundays* Holiday
Consultations with prior Appointments
Appointments: +91-9481353667
Next Sunday SPECIAL OPD 8AM-12PM 09-Feb