ಸ್ವಾಗತ
ಅಂತಃಸ್ರಾವಕ (ಎಂಡೋಕ್ರೈನ್) ವ್ಯವಸ್ಥೆ ಎಂದರೇನು?
ಅಂತಃಸ್ರಾವಕ(ಎಂಡೋಕ್ರೈನ್) ವ್ಯವಸ್ಥೆ ನಿರ್ನಾಳ ಗ್ರಂಥಿಗಳ ಒಂದು ಸಂಕೀರ್ಣ ಸಮೂಹವಾಗಿದೆ. ಈ ಗ್ರಂಥಿಗಳು ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಈ ಹಾರ್ಮೋನುಗಳು ನಿಮ್ಮ ದೇಹದ ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಪದಾರ್ಥಗಳಾಗಿವೆ.
ಹಾರ್ಮೋನುಗಳು ನಮ್ಮ ದೇಹದ ವಿವಿಧ ಕ್ರಿಯೆಗಳನ್ನು ನಿಯಂತ್ರಿಸುತ್ತವೆ:
ಥೈರಾಯ್ಡ್, ಪ್ಯಾರಾಥೈರಾಯ್ಡ್, ಮೇದೋಜ್ಜೀರಕ ಗ್ರಂಥಿ, ಅಡ್ರಿನಲ್, ಅಂಡಾಶಯಗಳು, ವೃಷಣಗಳು, ಪಿಟ್ಯುಟರಿ ಮತ್ತು ಹೈಪೊಥಾಲ್ಮಸ್ (ಮಸ್ತಿಷ್ಕನಿಮ್ನಾಂಗ). ಇವುಗಳು ಎಂಡೋಕ್ರೈನ್ ವ್ಯವಸ್ಥೆಯ ಕ್ಲಾಸಿಕ್ ಗ್ರಂಥಿಗಳು. ಸಾಮನ್ಯವಾಗಿ ಇವುಗಳನ್ನು ನಿರ್ನಾಳ ಗ್ರಂಥಿಗಳೆಂದು ಉಲ್ಲೇಖಿಸಳಾಗುವದು.
ಯಾರನ್ನು ಎಂಡೋಕ್ರೈನಾಲಜಿಸ್ಟ್ (ಅಂತಃಸ್ರಾವಶಾಸ್ತ್ರಜ್ಞ) ಎಂದು ಪರಿಗಣಿಸುತ್ತಾರೆ?
ಅಂತಃಸ್ರಾವಶಾಸ್ತ್ರಜ್ಞರು (ಎಂಡೋಕ್ರೇನಾಲಜಿಸ್ಟ್) ಆಧುನಿಕ ವೈದ್ಯಶಾಸ್ತ್ರದಲ್ಲಿ ವಿಶೇಷವಾಗಿ ತರಬೇತಿ ಪಡೆದ ವೈದ್ಯರು. ಅವರು ಎಂಡೋಕ್ರೈನಾಲಜಿ ನಲ್ಲಿ ವಿಶೇಷ ಕೋರ್ಸ್ ಮಾಡಿರುತ್ತಾರೆ. MBBS ಮತ್ತು MD ಡಿಗ್ರಿ ಮುಗಿಸಿದ ನಂತರ ಎಂಡೋಕ್ರೈನಾಲಜಿ ನಲ್ಲಿ DM ಡಿಗ್ರಿ ಸಾಮಾನ್ಯವಾಗಿ 3 ವರ್ಷದ ಕೋರ್ಸ್ ಆಗಿರುತ್ತದೆ. ಒಟ್ಟಿನಲ್ಲಿ ಓರ್ವ ಎಂಡೋಕ್ರೈನಾಲಜಿಸ್ಟ್ ಆಗಲು ತರಬೇತಿಗಾಗಿ 10 ವರ್ಷಕ್ಕಿಂತಲೂ ಹೆಚ್ಚು ತೆಗೆದುಕೊಳ್ಳುತ್ತದೆ. ನಿಮಗೆ ಅಂತಃಸ್ರಾವಕ/ಹಾರ್ಮೋನ್ ವ್ಯವಸ್ಥೆಯ ಸಮಸ್ಯೆ ಇದ್ದಲ್ಲಿ ನಿಮ್ಮ ಪ್ರಾಥಮಿಕ ಚಿಕಿತ್ಸಾ ವೈದ್ಯರು ನಿಮಗೆ ಅಂತಃಸ್ರಾವಶಾಸ್ತ್ರಜ್ಞರ (ಎಂಡೋಕ್ರೇನಾಲಜಿಸ್ಟ್-ರ) ಸಲಹೆಯನ್ನು ಪಡೆಯಲು ಸೂಚಿಸುತ್ತಾರೆ.
ಅಂತಃಸ್ರಾವಶಾಸ್ತ್ರಜ್ಞರು ಯಾವ ಯಾವ ಅಸ್ವಸ್ಥತೆಗಳನ್ನು / ರೋಗಗಳನ್ನು ನಿಭಾಯಿಸುತ್ತಾರೆ?
ಅಂತಃಸ್ರಾವಶಾಸ್ತ್ರಜ್ಞರು ಹಾರ್ಮೋನ್‍ಗಳ ಅಸಮತೋಲನ ಮತ್ತು ತೊಂದರೆಗಳನ್ನು ಪತ್ತೆಹಚ್ಚುತ್ತಾರೆ ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ನೀಡುತ್ತಾರೆ . ಈ ರೀತಿಯಾಗಿ ನಿಮ್ಮ ದೇಹದಲ್ಲಿ ಹಾರ್ಮೋನ್‍ಗಳ ಸಾಮಾನ್ಯ ಸಮತೋಲನವನ್ನು ಕಾಪಾಡುವ ನಿಟ್ಟಿನಲ್ಲಿ ಸಹಾಯ ಮಾಡುತ್ತಾರೆ. ಹಾರ್ಮೋನ್‍ಗಳ ವ್ಯತ್ಯಾಸದಿಂದ ಸಾಮಾನ್ಯವಾಗಿ ಉಂಟಾಗುವ ಕಾಯಿಲೆ/ತೊಂದರೆಗಳನ್ನು ಕೆಳಕಂಡಂತಿವೆ :
ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667
ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM to be announced