ನೀವು ಯಾವಾಗ ಶೂ ಕೊಂಡುಕೊಳ್ಳಬೇಕು?

ನೀವು ಸಂಜೆಯ ವೇಳೆ ಹೊಸ ಶೂ/ ಪಾದರಕ್ಷೆ ಕೊಂಡುಕೊಳ್ಳುವುದು ಉತ್ತಮ. ಏಕೆಂದರೆ ಮಧುಮೇಹಿಗಳಲ್ಲಿ ಸಾಯಂಕಾಲ ಕಾಳುಗಳು ಬೆಳ್ಳಿಗೆಗೆ ಹೋಲಿಸಿದಲ್ಲಿ ತುಸು ದಪ್ಪ ಆಗಬಹುದು. ಸಂಜೆಯ ವೇಳೆ ನಿಮ್ಮ ಕಾಲಿಗೆ ಸರಿಯಾದ ಅಳತೆ ಎಲ್ಲಾ ಸಮಯದಲ್ಲೂ ನಿಮ್ಮ ಕಾಲುಗಳಿಗೆ ಹಿತಕರ. ಮುಂಜಾನೆ ಸರಿ ಎನಿಸಿದ ಶೂ ಸಂಜೆ ನಿಮ್ಮ ಕಾಲುಗಳಿಗೆ ತೀರಾ ಸಣ್ಣದಾಗಿ ಕಾಲುಗಳಿಗೆ ಒತ್ತಡ / ಹುಣ್ಣು ಉಂಟುಮಾಡಬಹುದು.