ಮಧುಮೇಹದ ಪಾದರಕ್ಷೆಗಳ ಪರಿಣಾಮಕಾರಿ ಬಳಕೆ

ನಿಮ್ಮ ಮಧುಮೇಹದ ಪಾದರಕ್ಷೆಗಳಲ್ಲಿ  ಸವಕಳಿಯ ಲಕ್ಷಣಗಳು ಕಂಡ ಕೂಡಲೇ ಹೊಸ  ಪಾದರಕ್ಷೆ ಖರೀದಿಸಿ. ಹೊಸ  ಪಾದರಕ್ಷೆ ಖರೀದಿಸಿದ ನಂತರ ಲಘುವಾಗಿ ದಿನದಲ್ಲಿ ಕೆಲ ಸಮಯ ಮಾತ್ರ ಬಳಸಿರಿ. ಈ ರೀತಿ ಮಾಡುವುದರಿಂದ ನಿಮ್ಮ ಹೊಸ ಪಾದರಕ್ಷೆ  ಮೆತ್ತಗಾಗುತ್ತವೆ ನಿಮ್ಮ ಕಾಲಿಗೂ ಗಾಯ ಆಗುವುದನ್ನು ತಡೆಯಬಹುದು. ಹೊಸ ಪಾದರಕ್ಷೆ  ಖರೀದಿಸಿದ ಕೂಡಲೇ ಮೈಲಿಗಟ್ಟಲೆ ಅದನ್ನು ಧರಿಸಿ ನಡೆಯುವ ಹುಚ್ಚು ಸಾಹಸ ಖಂಡಿತ ಬೇಡ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ.