ಹೈಪರ್‌ಥೈರಾಯ್ಡಿಸಮ್ ಬಗ್ಗೆ ಕಿರು ಮಾಹಿತಿ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 

ನೀವು ಯಾವಾಗ ಶೂ ಕೊಂಡುಕೊಳ್ಳಬೇಕು?

ನೀವು ಸಂಜೆಯ ವೇಳೆ ಹೊಸ ಶೂ/ ಪಾದರಕ್ಷೆ ಕೊಂಡುಕೊಳ್ಳುವುದು ಉತ್ತಮ. ಏಕೆಂದರೆ ಮಧುಮೇಹಿಗಳಲ್ಲಿ ಸಾಯಂಕಾಲ ಕಾಳುಗಳು ಬೆಳ್ಳಿಗೆಗೆ ಹೋಲಿಸಿದಲ್ಲಿ ತುಸು ದಪ್ಪ ಆಗಬಹುದು. ಸಂಜೆಯ ವೇಳೆ ನಿಮ್ಮ ಕಾಲಿಗೆ ಸರಿಯಾದ ಅಳತೆ ಎಲ್ಲಾ ಸಮಯದಲ್ಲೂ ನಿಮ್ಮ ಕಾಲುಗಳಿಗೆ ಹಿತಕರ. ಮುಂಜಾನೆ ಸರಿ ಎನಿಸಿದ ಶೂ ಸಂಜೆ ನಿಮ್ಮ ಕಾಲುಗಳಿಗೆ ತೀರಾ ಸಣ್ಣದಾಗಿ ಕಾಲುಗಳಿಗೆ ಒತ್ತಡ / ಹುಣ್ಣು ಉಂಟುಮಾಡಬಹುದು.

ಒಂದು ಟಿಪ್ಪಣಿಯನ್ನು ಕಳುಹಿಸಿ (0)

ಮಧುಮೇಹದ ವಿಶೇಷ ಪಾದರಕ್ಷೆ ಎಂದರೇನು?

  • ಈ ಮಧುಮೇಹದ ಪಾದರಕ್ಷೆಗಳನ್ನು ವಿಶೇಷ ಉದ್ದೇಶವನ್ನಿಟ್ಟುಕೊಂಡು ರಚಿಸಲಾಗುತ್ತದೆ. ಉದಾ: ಹುಣ್ಣು / ಬೆರಳುಗಳ ನಷ್ಟದಿಂದ ವಿಕೃತಗೊಂಡ ಕಾಲಿಗಾಗಿ, ಕೆಲಾಸಿಟಿ ಸರಿಪಡಿಸಲು / ತಡೆಯೆಲು ಇತ್ಯಾದಿ.
  • ಈ ವರ್ಗಾವು ವಿರೂಪಗೊಂಡ /ವಿಕೃತವಾದ ಕಾಲಿಗೆ ಸೂಕ್ತವಾಗಿ ಜೋಡಣೆಯಾಗುವ ಮೌಲ್ಡೆಡ್ ಪಾದರಕ್ಷೆಗಳನ್ನೂ ಒಳಗೊಂಡಿರುತ್ತವೆ.

ಒಂದು ಟಿಪ್ಪಣಿಯನ್ನು ಕಳುಹಿಸಿ (0)

ಪಾದರಕ್ಷೆಗಳ ಕಾಳಜಿ?

  • ಹೊಸದರಲ್ಲಿ ತುಂಬಾ ಹೊತ್ತಿನವರೆಗೆ ಧರಿಸದಿರಿ – ಕಾಲಿಗೆ ಹುಣ್ಣಗಬಹುದು.
  • ತರಕಾರಿ ಎಣ್ಣೆ ಹಚ್ಚಬೇಡಿ - ಇದು ಫಂಗಸ್-ನ ಮಿತ್ರ!
  • ಪಾದರಕ್ಷೆಗಳನ್ನು ಶುಸ್ಕ ಹಾಗೂ ಸ್ವಚ್ಛವಾಗಿಡಿ. ಒದ್ದೆಯಾದ ಪಾದರಕ್ಷೆ ಉಪಯೋಗಿಸಬೇಡಿ.
  • ಮಕ್ಕಳಿಂದ ದೂರವಿಡಿ. (ಅವರು ಶೂಗಳಲ್ಲಿ ಆಟಿಕೆ, ಪಿನ್ ಇತ್ಯಾದಿ ತುಂಬಿಸಬಹುದು).
  • ಬರಿಗಾಲಿಗೆ ಶೂ ಹಾಕಬೇಡಿ (ಯಾವಾಗಲೂ ಹತ್ತಿಯ ಸಾಕ್ಸ್ ಬಳಸಿ).

ಒಂದು ಟಿಪ್ಪಣಿಯನ್ನು ಕಳುಹಿಸಿ (0)

ಮಧುಮೇಹದ ಪಾದರಕ್ಷೆಗಳ ಪರಿಣಾಮಕಾರಿ ಬಳಕೆ

ನಿಮ್ಮ ಮಧುಮೇಹದ ಪಾದರಕ್ಷೆಗಳಲ್ಲಿ  ಸವಕಳಿಯ ಲಕ್ಷಣಗಳು ಕಂಡ ಕೂಡಲೇ ಹೊಸ  ಪಾದರಕ್ಷೆ ಖರೀದಿಸಿ. ಹೊಸ  ಪಾದರಕ್ಷೆ ಖರೀದಿಸಿದ ನಂತರ ಲಘುವಾಗಿ ದಿನದಲ್ಲಿ ಕೆಲ ಸಮಯ ಮಾತ್ರ ಬಳಸಿರಿ. ಈ ರೀತಿ ಮಾಡುವುದರಿಂದ ನಿಮ್ಮ ಹೊಸ ಪಾದರಕ್ಷೆ  ಮೆತ್ತಗಾಗುತ್ತವೆ ನಿಮ್ಮ ಕಾಲಿಗೂ ಗಾಯ ಆಗುವುದನ್ನು ತಡೆಯಬಹುದು. ಹೊಸ ಪಾದರಕ್ಷೆ  ಖರೀದಿಸಿದ ಕೂಡಲೇ ಮೈಲಿಗಟ್ಟಲೆ ಅದನ್ನು ಧರಿಸಿ ನಡೆಯುವ ಹುಚ್ಚು ಸಾಹಸ ಖಂಡಿತ ಬೇಡ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ.

ಒಂದು ಟಿಪ್ಪಣಿಯನ್ನು ಕಳುಹಿಸಿ (0)

ಮಧುಮೆಹಿಗಳು ಶೂಗಳನ್ನು ಸತತವಾಗಿ ಧರಿಸಬಹುದೇ?

ನೀವು ಸಿಂಥೆಟಿಕ್ / ರೇಕ್ಸಿನ್ / ಪ್ಲಾಸ್ಟಿಕ್ ಇವುಗಳಿಂದ ಮಾಡಿದ ಶೂಗಳನ್ನು ಉಪಯೋಗಿಸದಿರುವುದು ಒಳ್ಳೆಯದು, ಏಕೆಂದರೆ ಇವುಗಲ್ಲಿ  ನಿಮ್ಮ ಕಾಲಿಗೆ ಚೆನ್ನಾಗಿ ಉಸಿರಾಡಲು ಆಗುವುದಿಲ್ಲ. ನಿಯಮಿತವಾಗಿ ಕೆಲ ಘಂಟೆಗಳಿಗೆ ಒಮ್ಮೆಯಾದರೂ ನಿಮ್ಮ ಶೂ ತೆಗೆದು ಇಡಿ. ಇದು ನಿಮ್ಮ ಕಾಲುಗಳ ರಕ್ತ ಸಂಚಾರ ಹಾಗೂ ಉಸಿರಾಟಕ್ಕೆ ಅನುವು ಮಾಡಿದಂತಾಗುತ್ತದೆ. ಹಾಗೆಯೇ ಇದು ತೇವಾಂಶ ಶೇಖರಣೆ ಆಗಿ ಫಂಗಸ್ ಸೋಂಕು ತಗಲುವುದನ್ನೂ  ತಡೆಗಟ್ಟುತ್ತದೆ. 

ಒಂದು ಟಿಪ್ಪಣಿಯನ್ನು ಕಳುಹಿಸಿ (0)

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

Dr. Gururaja Rao
Arogya Polyclinic
2nd Floor, Cauvery Buliding,
Near Unity Hospital
Falnir Road
Mangalore
Karnataka, India

Timings:
Sunday Holiday
Consultations with prior Appointments
Appointments: +91-9481353667