ಹೈಪರ್‌ಥೈರಾಯ್ಡಿಸಮ್ ಬಗ್ಗೆ ಕಿರು ಮಾಹಿತಿ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 

• [ಮಿಥ್ಯೆ] ಮಧುಮೇಹವನ್ನು ಕೇವಲ ಆಹಾರ ನಿಯಂತ್ರಣದಿಂದಲೇ ಗುಣಪಡಿಸಬಹುದು

ಇಲ್ಲ. ದುರದೃಷ್ಟವಶಾತ್ ಈ ರೀತಿಯ ಆಧಾರವಿಲ್ಲದ ನಂಬಿಕೆಯಿಂದ, ನೀವು ಮಧುಮೇಹಕ್ಕೆ ಸರಿತಯಾದ / ಸೂಕ್ತವಾದ ಚಿಕಿತ್ಸೆಯಿಂದ ವಂಚಿತರಾಗಬಹುದು. ಇದು ಭವಿಷ್ಯದಲ್ಲಿ ಮಧುಮೇಹದ ತೊಡಕುಗಳಿಗೆ ನಾಂದಿಯಾಗಬಹುದು.

 

 

ಒಂದು ಟಿಪ್ಪಣಿಯನ್ನು ಕಳುಹಿಸಿ (0)

• [ಮಿಥ್ಯೆ] ಮಧುಮೇಹವು ಒಂದು ಸಾಂಕ್ರಾಮಿಕ ರೋಗ

ಸುಳ್ಳು, ಮಧುಮೇಹ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಲ್ಲ. ಟೈಪ್ - ೧ ಮಧುಮೇಹ ಅನುವಂಶೀಯತೆ ಹಾಗೂ ಇತರ ನಮಗರಿವಿರದ ಕಾರಣಗಳಿಂದ ಶುರುವಾಗಬಹುದು. ಟೈಪ್ - ೧ ಮಧುಮೇಹ ಅನುವಂಶೀಯತೆ ಹಾಗೂ ಜೀವನ ಶೈಲಿಯಿಂದ ಉಂಟಾಗುತ್ತದೆ.

ಹೆಚ್ಚಿನವರಿಗೆ ಇದರ ಅರಿವಿದ್ದರೂ ಕೆಲವೊಮ್ಮೆ ಅಂಧ ಶೃಧ್ಧೆ ಈ ರೀತಿಯ ತಪ್ಪು ಕಲ್ಪನೆಗೆ ಕಾರಣವಾಗಬಹುದು. ಇದನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ.

 

ಒಂದು ಟಿಪ್ಪಣಿಯನ್ನು ಕಳುಹಿಸಿ (0)

• [ಮಿಥ್ಯೆ] ಇನ್ಸುಲಿನ್ ಷ೦ಡತ್ವ ಉಂಟುಮಾಡುತ್ತದೆ

ಛೆ! ಎಲ್ಲಾದರೂ ಉಂಟೆ! ನಿಜ ಹೇಳಬೇಕಾದರೆ ನಿಯಂತ್ರಣವಿಲ್ಲದ ಮಧುಮೇಹ ಉದ್ರೇಕದ ನರ ಮತ್ತು ರಕ್ತ ನಾಳಗಳಿಗೆ ಹಾನಿ ಉಂಟುಮಾಡಿ ಷ೦ಡತ್ವ ಉಂಟುಮಾಡಬಹುದು

ಅದೇ ರೀತಿಯಾಗಿ (ಇನ್ಸುಲಿನ್ ಬಳಕೆಯಿಂದ) ಮಧುಮೇಹದ ಒಳ್ಳೆಯ ನಿಯಂತ್ರಣದಿಂದ ವ್ಯಕ್ತಿಯು ಮಾನಸಿಕ ಹಾಗೂ ಲೈಂಗಿಕವಾಗಿ ಹೆಚ್ಚು ಉಲ್ಲಸಭರಿತ ಆಗುತ್ತಾನೆ(ಳೆ). ಸರಿಯಾದ  ಮಧುಮೇಹದ ನಿಯಂತ್ರಣದಿಂದ ನರಗಳ ಹಾನಿಯೂ ಸುಧಾರಿಸಬಹುದು.

 

ಒಂದು ಟಿಪ್ಪಣಿಯನ್ನು ಕಳುಹಿಸಿ (0)

• [ಮಿಥ್ಯೆ] ಗಿಡಮೂಲಿಕೆಯ ಔಷಧಿಗಳೇ ಮಧುಮೇಹಕ್ಕೆ ನಿಜವಾದ ಶಾಷ್ವತ ಚಿಕಿತ್ಸೆ

ಇಲ್ಲ. ದುರದೃಷ್ಟವಶಾತ್ ಈ ರೀತಿಯ ಆಧಾರ ರಹಿತವಾದ ನಂಬಿಕೆಗಳು ನಿಮ್ಮ ಚಿಕಿತ್ಸೆ ತಡವಾಗಲು ಕಾರಣವಾಗಬಹುದು. ಕೆಲವೊಮ್ಮೆ ತುಂಬಾ ತಡವಾಗಬಹುದು. ಭವಿಷ್ಯದಲ್ಲಿ ಮಧುಮೇಹದ ತೊಡಕುಗಳೂ ತಲೆದೋರಬಹುದು.

 

ಒಂದು ಟಿಪ್ಪಣಿಯನ್ನು ಕಳುಹಿಸಿ (0)

• [ಮಿಥ್ಯೆ] ಇನ್ಸುಲಿನ್ ಮಧುಮೇಹವನ್ನು ಶಾಷ್ವತವಾಗಿ ಗುಣಪಡಿಸುತ್ತದೆ

ಇಲ್ಲ, ಹಾಗಾಗುವುದಿಲ್ಲ. ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಇದು ರಾಮಬಾಣದಂತಿದ್ದರೂ, ಇನ್ಸುಲಿನ್ ಮಧುಮೇಹವನ್ನು ಶಾಷ್ವತವಾಗಿ ಗುಣಪಡಿಸದು. ಮಧುಮೇಹವು ಶೀತ ಜ್ವರದಂತಲ್ಲ, ಇದೊಂದು ದೀರ್ಘಕಾಲದ ಕಾಯಿಲೆ. ನೀವು ಚೆನ್ನಾಗಿದ್ದೀರಿ ಎಂದು ಅನಿಸಿದರೂ ಔಷಧಿಯನ್ನು ನಿಯಮಿತವಾಗಿ ತೆಗೆದುಕೊಳ್ಳಿ.

 

ಒಂದು ಟಿಪ್ಪಣಿಯನ್ನು ಕಳುಹಿಸಿ (0)

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

Dr. Gururaja Rao
Arogya Polyclinic
2nd Floor, Cauvery Buliding,
Near Unity Hospital
Falnir Road
Mangalore
Karnataka, India

Timings: 8AM - 1PM & 3.30PM - 7.30PM.
2/4th Fridays and Sundays* Holiday
Consultations with prior Appointments
Appointments: +91-9481353667

Next Sunday SPECIAL OPD 8AM-12PM 24-Jun