ಮಕ್ಕಳ ಬೆಳವಣಿಗೆ ಹೆಚ್ಚಿಸಲು ಚಿಕಿತ್ಸೆ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 
 
 
 
 
 
 
 
 
 

ಸಣ್ಣ ನಿಲುವಿನ (ಕುಬ್ಜತೆ) ಚಿಕಿತ್ಸೆ

ಕುಬ್ಜತೆಗೆ ಅಥವಾ ಎತ್ತರ ಹೆಚ್ಚಿಸಲು ಯಾವ ರೀತಿಯ ಚಿಕಿತ್ಸೆ ಸಾಧ್ಯ?

  • ಚಿಕಿತ್ಸೆಯು ಕಾರಣವನ್ನು ಅವಲಂಬಿಸಿರುತ್ತದೆ.
  • ಗ್ರೋತ್ (ಬೆಳವಣಿಗೆಯ) ಹಾರ್ಮೋನು ಕುಬ್ಜತೆಯ ಕೆಲವು ಕಾರಣಗಳ ಚಿಕಿತ್ಸೆಗೆ ಸೂಕ್ತವಾಗಿದೆ. ಇಂಥಹಾ ಸಂಧರ್ಭಗಳಲ್ಲಿ ನಿಮ್ಮ ವೈದ್ಯರು ಇದರ ಬಗ್ಗೆ ನಿಶ್ಚಿತವಾದ ಮಾಹಿತಿಯನ್ನು ನೀಡುವರು.
  • ಮಗುವಿಗೆ ಥೈರಾಯ್ಡ್ ಹಾರ್ಮೋನಿನ ಕೊರತೆ (ಹೈಪೋಥೈರಾಯ್ಡಿಸಮ್ ) ಇದ್ದಲ್ಲಿ ಅದನ್ನು ಸರಿಪಡಿಸುವುದರಿಂದ ಬೆಳವಣಿಗೆಯನ್ನು ಸಹಜಗತಿಗೆ ಮರಳಿಸಬಹುದು.
  • ನಿಮ್ಮ ಮಗು ಸಣ್ಣ ಕಾಯದ ಕುರಿತು ಲೇವಡಿಗೊಳಗಾಗುತಿದ್ದಲ್ಲಿ ಕೌನ್ಸಲಿಂಗ್-ನಿಂದ (ಆಪ್ತ ಸಮಾಲೋಚನೆ) ಸಹಾಯವಾಗಹುದು. ಸಹವರ್ತಿಗಳಿಂದ ಗೇಲಿ ಮಗುವು ತಲೆತಗ್ಗಿಸುವಂತೆ ಮಾಡಬಹುದು.
  • ಸಂವಿಧಾನಿಕ ಸಣ್ಣ ನಿಲುವಿನ ಲ್ಲಿ ಪ್ರೌಢಾವಸ್ಥೆ ತಲುಪುವಿಕೆಯನ್ನು ಶೀಘ್ರಗೊಳಿಸಲು ಲೈಂಗಿಕ ಹಾರ್ಮೋನುಗಳನ್ನು ನಿಮ್ಮ ವೈದ್ಯರು ಕೊಡಬಹುದು. ವಿಶೇಷವಾಗಿ ಮಗುವು ಗೆಳೆಯರಿಗೆ ಹೋಲಿಸಿದಲ್ಲಿ ತನ್ನ ದೈಹಿಕ ಬೆಳವಣಿಗೆಯ ಕೊರತೆಯ ಬಗ್ಗೆ ತುಂಬಾ ಘಾಸಿಗೊಳಗಾಗಿದ್ದಲ್ಲಿ ಈ ಚಿಕಿತ್ಸೆಯು ಉತ್ತಮ ಪರಿಣಾಮ ನೀಡಬಹುದು.
  • ಒಂದು ವೇಳೆ ಸಣ್ಣ ಕಾಯ ಯಾವುದಾದರೂ ಕಾಯಿಲೆಯಿಂದ ಉಂಟಾದಲ್ಲಿ ಆ ಕಾಯಿಲೆಯ ಚಿಕಿತ್ಸೆಯಿಂದ ( ಅದು ಲಭ್ಯವಿದ್ದರೆ) ಬೆಳವಣಿಗೆಯು ಸಹಜಗೊಳ್ಳಬಹುದು.

ಬೆಳವಣಿಗೆಯ (ಗ್ರೋತ್)ಹಾರ್ಮೋನ್ ಕೊರತೆಗೆ ಎಂದರೇನು?

ಗ್ರೋತ್ (ಬೆಳವಣಿಗೆಯ) ಹಾರ್ಮೋನಿನ ಕೊರತೆ ಸಣ್ಣ ನಿಲುವಿನ ಕಾರಣಗಳಲ್ಲಿ ಒಂದಾಗಿದೆ. ಗ್ರೋತ್ ಹಾರ್ಮೋನು ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿ ತಯಾರಿಸುವ ಒಂದು ಪ್ರೋಟಿನ್ ಆಗಿದೆ. ಗ್ರೋತ್ ಹಾರ್ಮೋನು ಮಗುವಿನ ಸಾಮಾನ್ಯ ಹಾಗೂ ಆರೋಗ್ಯಕರವಾದ ಬೆಳವಣಿಗೆಗೆ ಅವಶ್ಯವಾಗಿದೆ. ಗ್ರೋತ್ ಹಾರ್ಮೋನು ಕೊರತೆ ಉಳ್ಳ ಮಕ್ಕಳು ಉಳಿದಂತೆ ಸಂಪೂರ್ಣವಾಗಿ ಆರೋಗ್ಯಪೂರ್ಣವಾಗಿ ಇರಬಹುದು. ಕೆಲವೊಮ್ಮೆ ಗ್ರೋತ್ ಹಾರ್ಮೋನ್ ಕೊರತೆ ಬೇರೊಂದು ಹೆಚ್ಚಿನ ಸಮಸ್ಯೆಯ ಭಾಗವಾಗಿರಬಹುದು ಉದಾ: ಒಂದು ಮೆದುಳಿನ ಶಸ್ತ್ರಚಿಕಿತ್ಸೆ ನಂತರ ಉಂಟಾದ ಹಾನಿ. ಈ ಎಲ್ಲಾ ಸಂಧರ್ಭಗಳಲ್ಲೂ ಗ್ರೋತ್ ಹಾರ್ಮೋನ್ ಕೊಟ್ಟಲ್ಲಿ ಅದು ಆರೋಗ್ಯಪೂರ್ಣವಾದ ಬೆಳವಣಿಗೆಯನ್ನು ಪುನಃಸ್ಥಾಪಿಸಿ ಮಗುವು ತನ್ನ ಪೂರ್ಣ ಪ್ರಮಾಣದ ಎತ್ತರವನ್ನು ಗಳಿಸಲು ಸಹಾಯ ಮಾಡುತ್ತದೆ.

ಬೆಳವಣಿಗೆಯ ಹಾರ್ಮೋನ್ ಕೊರತೆ ಹೇಗೆ ಸರಿಪಡಿಸಬಹುದು?

ಚಿಕಿತ್ಸೆಗಾಗಿ ಬಳಸಲಾಗುವ ಬೆಳವಣಿಗೆಯ ಹಾರ್ಮೋನು ಪುನರ್ಸಂಯೋಜಿತ DNA ತಂತ್ರಜ್ಞಾನದಿಂದ ತಯಾರಿಸಲಾಗುತ್ತದೆ. ಈ ಪುನರ್ಸಂಯೋಜಿತ ಎಂದು ಕರೆಯಲ್ಪಡುವ ಹಾರ್ಮೋನ್ ದೇಹದಲ್ಲಿ ಸಾಮಾನ್ಯವಾಗಿ ತಯಾರಾಗುವ ಗ್ರೋತ್ ಹಾರ್ಮೋನ್ -ನ ಯಥಾವತ್ತಾದ ನಕಲಾಗಿದೆ. ಇದು ಪಿಟ್ಯುಟರಿ ಸಾರಗಳು ಬಳಸಿಕೊಂಡು ಹಳೆಯ ವಿಧಾನಗಳಲ್ಲಿ ತಯಾರಿಸುವ ಹಾರ್ಮೋನ್ -ಗಿಂತ ಭಿನ್ನವಾಗಿದ್ದು ಯಾವುದೇ ಮಲಿನತೆಯ ಅಪಾಯವನ್ನು ಹೊಂದಿರುವುದಿಲ್ಲ. ಇದನ್ನು ಸಾಮಾನ್ಯವಾಗಿ ಮಲಗುವ ವೇಳೆಯಲ್ಲಿ, ಪ್ರತಿ ದಿನವೂ ಚುಚ್ಚುಮದ್ದಿನ ರೂಪದಲ್ಲಿ ನೀಡಬೇಕು. ಇದು ಇನ್ಸುಲಿನ್-ನ ಪೆನ್ನಿನಂತೆ ಹೋಲುವದು. ಅತಿ ಸಪೂರವಾದ ಸೂಜಿಯನ್ನು ಬಳಸುವುದರಿಂದ ವಾಸ್ತವವಾಗಿ ನೋವುರಹಿತವಾಗಿದೆ. ದುರದೃಷ್ಟವಶಾತ್ ಇದು ಪ್ರೋಟೀನ್ ಆದ್ದರಿಂದ ಹೊಟ್ಟೆಯಲ್ಲಿ ಜೀರ್ಣದ್ರವಗಳಿಂದ ನಾಶವಾಗುತ್ತದೆ; ಆದುದರಿಂದ ಅದನ್ನು ಮಾತ್ರೆ ರೂಪದಲ್ಲಿ ನೀಡಲು ಸಾಧ್ಯವಿಲ್ಲ.

ಬೆಳವಣಿಗೆ ಹಾರ್ಮೋನಿನ ಚಿಕಿತ್ಸೆ ಸುರಕ್ಷಿತವೇ? ಇದನ್ನು ಆಗಿಂದಾಗ್ಗೆ ಬಳಸಲಾಗುತ್ತದೆಯೇ?

ಪುನರ್ಸಂಯೋಜಿತ ಬೆಳವಣಿಗೆಯ ಹಾರ್ಮೋನನ್ನು ಕಳೆದ ಇಪ್ಪತ್ತು ವರ್ಷಗಳಿಂದ ವ್ಯಾಪಕವಾಗಿ ಬಳಸಲಾಗುತ್ತಿದೆ. ಸರಿಯಾದ ರೋಗ ನಿದಾನ ಮತ್ತು ನುರಿತ ತಜ್ಞರ ಮೇಲ್ವಿಚಾರಣೆಯಲ್ಲಿ ಇದನ್ನು ಬಳಸುವುದರಿಂದ ಅಡ್ಡ ಪರಿಣಾಮಗಳು ಅಪರೂಪ ಹಾಗೂ ಸೌಮ್ಯ ಸ್ವರೂಪದ್ದಾಗಿರುತ್ತವೆ. ವರ್ಷ್ಂಪ್ರತಿ ಲಕ್ಷಕ್ಕೂ ಅಧಿಕ ರೋಗಿಗಳು ಬೆಳವಣಿಗೆಯ ಹಾರ್ಮೋನನ್ನು ಚಿಕಿತ್ಸೆಯ ರೂಪದಲ್ಲಿ ಪಡೆಯುತ್ತಾರೆ .

ನಿಮ್ಮ ಪಶ್ಚಾತ್ತಾಪ ನೀವು ಏನನ್ನು ಮಾಡಿದ್ದೀರಿ ಎಂಬುದರಲಲ್ಲ, ಬದಲಾಗಿ ಏನನ್ನು ಮಾಡಲಿಲ್ಲವೆಂಬುದು. ನೆನಪಿಡಿ ಬೆಳವಣಿಗೆಯ ಪ್ರಾಯವು ಸೀಮಿತವಾದುದು. ತುಂಬಾ ತಡವಾಗುವವರೆಗೆ .ಕಾಯಬೇಡಿ .
ಆದ್ದರಿಂದ ಪ್ರತಿ ಅವಕಾಶವನ್ನು ಬಳಸಿಕೊಳ್ಳಿ - ಇಂದೇ ಕಾರ್ಯಪ್ರವೃತ್ತರಾಗಿ!

star ನಿಮ್ಮ  ಮಗು ಎಷ್ಟು ಚೆನ್ನಾಗಿ ಬೆಳೆಯುತ್ತಿದೆ ಎಂದು ತಿಳಿಯಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ  star
 
 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

Dr. Gururaja Rao
Arogya Polyclinic
2nd Floor, Cauvery Buliding,
Near Unity Hospital
Falnir Road
Mangalore
Karnataka, India

Timings:
Sunday Holiday
Consultations with prior Appointments
Appointments: +91-9481353667