ಅಸ್ಥಿರಂಧ್ರತೆ (ಆಸ್ಟಿಯೊಪೊರೋಸಿಸ್)-ಪ್ರಾಥಮಿಕ ಮಾಹಿತಿ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 

ಅಸ್ಥಿರಂಧ್ರತೆ (ಆಸ್ಟಿಯೊಪೊರೋಸಿಸ್)

 

ಆಸ್ಟಿಯೋಪೋರೊಸಿಸ್ (ಅಸ್ಥಿರಂಧ್ರತೆ) ಎಂದರೇನು? 

ಆಸ್ಟಿಯೋಪೋರೊಸಿಸ್ ಎಂದರೆ ಮೂಳೆಗಳ ಕ್ಷೀಣಿಸುವಿಕೆ ಅಥವಾ ದುರ್ಬಲವಾಗುವಿಕೆ ಎಂದು ತಿಳಿಯಬಹುದು. ಈ ರೀತಿ ದುರ್ಬಲಗೊಂಡ ಮೂಳೆಗಳು ಸುಲಭವಾಗಿ ಮುರಿಯಬಹುದು (ಫ್ರ್ಯಾಕ್ಚರ್). 

ಸಾಮಾನ್ಯ  vs ಆಸ್ಟಿಯೊಪೊರೋಸಿಸ್  ಎಲುಬು

ಆಸ್ಟಿಯೊಪೊರೋಸಿಸ್ - ಎಡ ಬಡಿಯಲ್ಲಿರುವ ಸಾಮಾನ್ಯ ಮೂಳೆಯೊಂದಿಗೆ ಬಲಬದಿಯ ಆಸ್ಟಿಯೊಪೊರೋಸಿಸ್‍ಗೆ ಹೋಲಿಸಿರಿ

 

ಆಸ್ಟಿಯೋಪೋರೊಸಿಸ್‌ನ ಲಕ್ಷಣಗಳು ಏನು? 

ಆರಂಭದಲ್ಲಿ ಆಸ್ಟಿಯೋಪೋರೊಸಿಸ್ ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಮೂಳೆಗಳ ಸವೆತ ಸದ್ದಿಲ್ಲದೆ ನಡೆಯುತ್ತದೆ. ಕೊನೆಗೊಂದು ದಿನ ವಿನಾ ಕಾರಣ ಮೂಳೆ-ಮುರಿತ ಉಂಟಾಗಲೇ ಇದು ಅರಿವಿಗೆ ಬರುವುದು. 

 

 ಆಸ್ಟಿಯೋಪೋರೊಸಿಸ್ ಸಾಮಾನ್ಯವಾಗಿ ಕಂಡುಬರುತ್ತದೆಯೇ? 

ಹೌದು ಖಂಡಿತವಾಗಿಯೂ, ಅಮೇರಿಕದ ಪ್ರತಿ ಎರಡು ಮಹಿಳೆಯರ ಪೈಕಿ ಒಬ್ಬರಿಗೆ ಆಸ್ಟಿಯೋಪೋರೊಸಿಸ್ ನಿಂದ ಮೂಳೆಯ ಮುರಿತ ಉಂಟಾಗುತ್ತದೆ. ೬೦ ವಯ್ಯಸಿಗೂ ಮೇಲ್ಪಟ್ಟ ಶೇಕಡ 25% ದರಿಂದ 60% ಮಹಿಳೆಯರು ಆಸ್ಟಿಯೋಪೋರೊಸಿಸ್-ನಿಂದಾಗಿ  ಬೆನ್ನುಹುರಿಯ ಒತ್ತಡದ ಮೂಳೆಯ ಮುರಿತಕ್ಕೊಳಗಾಗುತ್ತಾರೆ. 

 

 ಆಸ್ಟಿಯೋಪೋರೊಸಿಸ್ ಬರುವ ಸಂಭವ ಯಾರಲ್ಲಿ ಹೆಚ್ಚು? 

ಆಸ್ಟಿಯೋಪೋರೊಸಿಸ್ ಸಾಮಾನ್ಯವಾಗಿ ವಯಸ್ಕರಲ್ಲಿ ಅದರಲ್ಲೂ ವಿಷೇಶವಾಗಿ ಮಹಿಳೆಯರಲ್ಲಿ ಋತುಬಂಧದ ನಂತರ ಕಂಡುಬರುತ್ತದೆ.

ಇತರ ರಿಸ್ಕ್ ಫ್ಯಾಕ್ಟರ್‌ಗಳು - ತೆಳ್ಳಗಿನ ದೇಹ ಪ್ರಕೃತಿ, ಅಕಾಲಿಕ ಋತುಬಂಧ ಉಂಟಾದ ಮಹಿಳೆಯರಲ್ಲಿ, ಕ್ಯಾಲ್ಸಿಯಮ್ ಕಡಿಮೆ ಉಪಯೋಗಿಸುವವರಲ್ಲಿ, ವ್ಯಾಯಾಮ ಇಲ್ಲದ ಜೀವನಶೈಲಿ, ವಿಟಮಿನ್-ಡಿ ಕೊರತೆ, ಅಸ್ಥಮಾ, ಸ್ಟಿರಾಯ್ಡ್ ಬಳಕೆ.

 ತಂಬಾಕು ಹಾಗೂ ಮದ್ಯವ್ಯಸನ ನಿಮ್ಮ ಮೂಲೆಗಳಿಗೆ ಮಾರಕ.

ಭಾರತೀಯರಲ್ಲಿ ಆಸ್ಟಿಯೋಪೋರೊಸಿಸ್ ಹೆಚ್ಚು ಹೆಚ್ಚಾಗಿ ಕಂಡುಬರಲು ಕಾರಣಗಳೇನು?

ವಿಟಮಿನ್-ಡಿ ಕೊರತೆ ಭಾರತದಲ್ಲಿ ಬಹು ಸಾಮಾನ್ಯವಾಗಿದೆ, ಅದೇ ರೀತಿಯಾಗಿ, ಬದಲಾಗುತ್ತಿರುವ ಜೀವಂಶೈಲಿ, ನಾಗರೀಕರಣ,ಅನಾರೋಗ್ಯಕಾರ ಆಹಾರ ಪದ್ಧತಿಗಳು, ಬಿಸಿಲಿಗೆ ಮೈ ಒಡ್ದರುವುದು ಇವೆಲ್ಲದರಿಂದ ಆಸ್ಟಿಯೋಪೋರೊಸಿಸ್ ಹೆಚ್ಚಾಗಿ ಕಂಡುಬರುತ್ತಿದೆ. ಆಟೋಯಿಮ್ಮ್ಯೂನ್ ಕಾಯಿಲೆಗಳಾದ  ರ್‍ಯುಮೆಟಾಯ್ಡ್ ಸಂಧಿವಾತ, ಕ್ರೋನ್ಸ್ ಕಾಯಿಲೆ, ಲ್ಯುಪಸ್ ಉಳ್ಳವರಲ್ಲಿ ಕೂಡ ಹೆಚ್ಚಾಗಿ ಕಂಡುಬರುತ್ತಿದೆ.

ನಿಮ್ಮ ಪ್ರೀತಿ ಪಾತ್ರರಿಗೆ ಮೇಲ್ಕಂಡ ಯಾವುದಾದೇ ಒಂದು ಅಥವಾ ಹೆಚ್ಚಿನ ಕಾರಣ ಇದ್ದಲ್ಲಿ, ಅವರಿಗೆ DEXA ಸ್ಕ್ಯಾನ್ ಮಾಡಿಸಬೇಕೆ ಎಂದು ನಿಮ್ಮ ವೈದ್ಯರಲ್ಲಿ (ಎಂಡೋಕ್ರೈನಾಲಜಿಸ್ಟ್) ಸಮಾಲೋಚಿಸಿ! 

 

ಆಸ್ಟಿಯೋಪೋರೊಸಿಸ್ ರೋಗ ನಿದಾನ (ಡಯಗ್ನೋಸಿಸ್) ಹೇಗೆ ಮಾಡುತ್ತಾರೆ? 

DEXA ಸ್ಕ್ಯಾನ್ - ಆಸ್ಥಿ  ಖನಿಜ ಸಾಂದ್ರತೆ - BMD

DEXA ಸ್ಕ್ಯಾನ್ - ಆಸ್ಥಿ ಖನಿಜ ಸಾಂದ್ರತೆ (ಬಿ.‌ಎಮ್‌.ಡಿ)

ಮೂಳೆಯ ಸಾಂದ್ರತೆಯನ್ನು ಅಳೆಯುವುದರ ಮೂಲಕ. ಇದನ್ನು DEXA ಸ್ಕ್ಯಾನ್ ಮಾಡಿಸುವುದರಿಂದ ಪತ್ತೆ ಹಚ್ಚಬಹುದು.

 

ನಾನು ಆಸ್ಟಿಯೋಪೋರೊಸಿಸ್-ಗಾಗಿ ಪರೀಕ್ಷೆ ಮಾಡಿಸಬೇಕೆ?

ತಾತ್ತ್ವಿಕವಾಗಿ ಹೇಳುವುದಾದರೆ 65 ವರ್ಷ ಮೇಲ್ಪಟ್ಟವರೆಲ್ಲರೂ ಹಾಗೂ ಋತುಬಂಧ ಹೊಂದಿದ ಮಹಿಳೆಯರೆಲ್ಲರೂ ಈ ಪರೀಕ್ಷೆಯನ್ನು ಮಾಡಿಸುವುದು ಉತ್ತಮ. ಪರೀಕ್ಷೆಗೆ ಮೊದಲು ನಿಮ್ಮ ವೈದ್ಯರನ್ನು (ಎಂಡೋಕ್ರೈನಾಲಜಿಸ್ಟ್) ಒಮ್ಮೆ ಕಾಣಿರಿ.

 

ಆಸ್ಟಿಯೋಪೋರೊಸಿಸ್‌ಗೆ ಚಿಕಿತ್ಸೆ ಏನು?

ಇಂದಿನ ದಿನಗಳಲ್ಲಿ ಆಸ್ಟಿಯೋಪೋರೊಸಿಸ್ ಹಲವಾರು ಆಧುನಿಕ ಚಿಕಿತ್ಸಾ ವಿಧಾನ / ಔಷಧಿಗಳಿವೆ. ಹೊಸ ಮೂಳೆಯನ್ನು ಬೆಳೆಸುವ ಹಾಗೂ ಮೂಳೆಯ ನಷ್ಟ ತಡೆಗಟ್ಟುವ - ಈ ರೀತಿಯಾಗಿ ಎರಡು ತೆರನಾದ ಔಷಧಿಗಳಿವೆ. ನಿಮಗೆ ಸರಿಹೊಂದುವ ಚಿಕಿತ್ಸೆ ಬಗ್ಗೆ ನಿಮ್ಮ ವೈದ್ಯರಲ್ಲಿ (ಎಂಡೋಕ್ರೈನಾಲಜಿಸ್ಟ್) ಸಮಾಲೋಚಿಸಿ. ಯಾವ ಚಿಕಿತ್ಸಾ ವಿಧಾನ ಅನುಸರಿಸಿದರೂ ಕ್ಯಾಲ್ಸಿಯಮ್, ವಿಟಮಿನ್-ಡಿ ಮತ್ತು ವ್ಯಾಯಾಮ ಇವು ಚಿಕಿತ್ಸೆಯ ಮೂಲ ಸೂತ್ರಗಳು.

 

 

ಒಟ್ಟಿನಲ್ಲಿ ಹೇಳುವುದಾದರೆ ಆಸ್ಟಿಯೋಪೋರೋಸಿಸ್ ಒಂದು ಲಕ್ಷಣಗಳನ್ನು ತೋರ್ಪಡಿಸದ ಕಳ್ಳ ರೋಗ. ನಾವು ಇದರ ಬಗ್ಗೆ ಜಾಗೃತರಾಗಿದ್ದಲ್ಲಿ ಆಗಬಹುದಾದ ತೊಂದರೆ ತಡೆಗಟ್ಟಬಹುದು. ಈ ರೀತಿಯಾಗಿ ಆರೋಗ್ಯದಾಯಕ ಹಾಗೂ ಸುಖಮಯವಾದ ಮುಪ್ಪನ್ನು ಹೊಂದಬಹುದು.

 

ಇನ್ನಷ್ಟು ಓದಲು ಲಾಗಿನ್ ಆಗಿ

ನಿಮ್ಮ ಖಾತೆಗೆ ಲಾಗಿನ್ ಆಗಿ

ಬಳಕೆದಾರಹೆಸರು *
ಪಾಸ್ವರ್ಡ್ *
ನನ್ನನ್ನು ನೆನಪಿನಲ್ಲಿಡಿ

 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

ಡಾ. ಗುರುರಾಜ ರಾವ್
ಸ್ವೀತ್ ಕ್ಲಿನಿಕ್
ನೆಲಮಹಡಿ, ಕಾವೆರಿ ಬಿಲ್ಡಿಂಗ್,
ಸಂಜೀವಿನಿ ಕ್ಲಿನಿಕ್ ಎದುರು
ಯುನಿಟಿ ಆಸ್ಪತ್ರೆ ಹತ್ತಿರ
ಫಳ್ನೀರ್ ರಸ್ತೆ
ಮಂಗಳೂರು
ಕರ್ನಾಟಕ

ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667

ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM to be announced